UBER SERVICE : ಊಬರ್​ ಸೇವೆ ಪಡೆಯಲು ಬೇಕಿಲ್ಲ ಪ್ರತ್ಯೇಕ ಅಪ್ಲಿಕೇಶನ್​ ; ವಾಟ್ಸಾಪ್​ ಮೂಲಕವೇ ಬುಕ್​ ಮಾಡಿ ಊಬರ್​ ರೈಡ್​​

ಈಗಂತೂ ಮೊಬೈಲ್​ ಒಂದಿದ್ದರೆ ಸಾಕು ಮನೆಯಲ್ಲೇ ಕುಳಿತು ನೀವು ಯಾವ ಸ್ಥಳಕ್ಕೆ ತೆರಳಬೇಕೋ ಅಲ್ಲಿಗೆ ಕ್ಯಾಬ್​ ಅಥವಾ ಆಟೋವನ್ನು ಬುಕ್​ ಮಾಡಬಹುದು. ಇದಕ್ಕಾಗಿ ಒಂದು ಪ್ರತ್ಯೇಕ ಅಪ್ಲಿಕೇಶನ್​ ಇನ್​ಸ್ಟಾಲ್​ ಮಾಡಿಕೊಳ್ಳುವ ಮೂಲಕ ನೀವು ಈ ಸೇವೆಯನ್ನು ಪಡೆಯಬಹುದಾಗಿತ್ತು. ಆದರೆ ಇದೀಗ ಊಬರ್​ ಟೆಕ್ನಾಲಜಿ (UBER SERVICE ) ಹಾಗೂ ಮೆಟಾ ಪ್ಲಾಟ್​ಫಾರಂ ಸಹಭಾಗಿತ್ವದಲ್ಲಿ ಹೊಸದೊಂದು ಸೇವೆಯು ಶೀಘ್ರದಲ್ಲಿಯೇ ಬಳಕೆದಾರರಿಗೆ ಸಿಗಲಿದೆ.

ಸ್ಮಾರ್ಟ್​ ಫೋನ್​ ಇದೆ ಅಂದರೆ ಸಾಕು ಅವರ ಬಳಿ ವಾಟ್ಸಾಪ್​ ಅಪ್ಲಿಕೇಶನ್​ ಇದ್ದೇ ಇರುತ್ತದೆ. ಒಂದು ಲೆಕ್ಕಾಚಾರದ ಪ್ರಕಾರ ದೇಶದಲ್ಲಿ ಅರ್ಧ ಶತಕೋಟಿಗೂ ಅಧಿಕ ಮಂದಿ ವಾಟ್ಸಾಪ್​ ಬಳಕೆ ಮಾಡುತ್ತಾರಂತೆ. ಇವರಲ್ಲಿ ಊಬರ್​ ಸೇವೆ ಇರುವ ಊರಿನ ನಿವಾಸಿಗಳು ವಾಟ್ಸಾಪ್​ ಸೇವೆಯ ಮೂಲಕವೇ ಊಬರ್​ ರೈಡ್​ಬುಕ್​ ಮಾಡಬಹುದಾಗಿದೆ.

ಹೌದು..! ಇಂತಹದ್ದೊಂದು ಹೊಸ ಸೇವೆಯನ್ನು ಆರಂಭಿಸಲು ಊಬರ್​ ಹಾಗೂ ಮೆಟಾ ಕಂಪನಿಗಳು ಒಂದಾಗಿವೆ. ಕೆಲದಿನಗಳ ಹಿಂದಷ್ಟೇ ಜಿಯೋ ಮಾರ್ಟ್ ಹಾಗೂ ವಾಟ್ಸಾಪ್​ ಒಟ್ಟಾಗಿ ಸೇವೆ ನೀಡುವ ಬಗ್ಗೆ ಘೋಷಣೆ ಮಾಡಿತ್ತು. ಅದರಂತೆಯೇ ಇದೀಗ ವಾಟ್ಸಾಪ್​​ ಹಾಗೂ ಊಬರ್​ ಈ ಸೇವೆಯನ್ನು ನೀಡಲಿವೆ. ಪ್ರಾರಂಭಿಕ ಹಂತದಲ್ಲಿ ಈ ಸೇವೆಯು ಉತ್ತರ ಪ್ರದೇಶದ ಲಕ್ನೋದಲ್ಲಿ ಆರಂಭವಾಗಲಿದೆ. ಬಳಿಕ ದೇಶಾದ್ಯಂತ ಈ ಸೇವೆಯನ್ನು ವಿಸ್ತರಿಸೋದಾಗಿ ಊಬರ್​ ಹೇಳಿದೆ.


ಇನ್ನು ಈ ಹೊಸ ಸೇವೆಯ ಸಂಬಂಧ ಮಾತನಾಡಿದ ಊಬರ್​ನ ಬ್ಯುಸಿನೆಸ್​ ಡೆವಲಪ್​ಮೆಂಟ್​ ಹಿರಿಯ ನಿರ್ದೇಶಕಿ ನಂದಿನಿ ಮಹೇಶ್ವರಿ, ಭಾರತೀಯರು ಅತ್ಯಂತ ಸರಳವಾಗಿ ಊಬರ್​ ಸೇವೆಯ ಲಾಭವನ್ನು ಪಡೆಯಬೇಕು ಎಂಬುದು ನಮ್ಮ ಗುರಿಯಾಗಿದೆ. ಇದೇ ಕಾರಣಕ್ಕಾಗಿ ಜನರಿಗೆ ಅತ್ಯಂತ ಸುಲಭ ಎನಿಸುವ ಅಪ್ಲಿಕೇಶನ್​ ಮೂಲಕವೇ ಈ ಸೇವೆ ನೀಡಲು ಮುಂದಾಗಿದ್ದೇವೆ ಎಂದು ಹೇಳಿದ್ದಾರೆ.

ಇದನ್ನು ಓದಿ : Today Petrol Price : ವಾಹನ ಸವಾರರಿಗೆ ಗುಡ್‌ನ್ಯೂಸ್‌ : ಪೆಟ್ರೋಲ್‌ ಬೆಲೆಯಲ್ಲಿ 8 ರೂ. ಇಳಿಕೆ

( Uber Service to allow users to book rides via WhatsApp in India )

Comments are closed.