ಮಂಗಳವಾರ, ಏಪ್ರಿಲ್ 29, 2025
HomeSportsCricketArjun Tendulkar To Play for Goa: ಮುಂಬೈಗೆ ಅರ್ಜುನ್ ತೆಂಡೂಲ್ಕರ್ ಗುಡ್ ಬೈ, ಗೋವಾ...

Arjun Tendulkar To Play for Goa: ಮುಂಬೈಗೆ ಅರ್ಜುನ್ ತೆಂಡೂಲ್ಕರ್ ಗುಡ್ ಬೈ, ಗೋವಾ ಪರ ಆಡಲಿದ್ದಾರೆ ಸಚಿನ್ ಪುತ್ರ

- Advertisement -

ಮುಂಬೈ: (Arjun Tendulkar Goodbye) ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್, ಮುಂಬೈ ತಂಡವನ್ನು ತೊರೆಯಲು ಸಜ್ಜಾಗಿದ್ದಾರೆ. ಮುಂಬೈ ತಂಡದಲ್ಲಿ ಅವಕಾಶಗಳು ಸಿಗದೇ ಇರುವ ಕಾರಣ ಮುಂದಿನ ದೇಶೀಯ ಕ್ರಿಕೆಟ್ ಸಾಲಿನಲ್ಲಿ ಗೋವಾ ಪರ ಆಡಲು ಅರ್ಜುನ್ ತೆಂಡೂಲ್ಕರ್ ಮುಂದಾಗಿದ್ದಾರೆ. ಮುಂಬೈ ಕ್ರಿಕೆಟ್ ಸಂಸ್ಥೆಗೆ ಈಗಾಗಲೇ ನಿರಪೇಕ್ಷಣಾ ಪತ್ರಕ್ಕಾಗಿ (No Objection Certificate) ಅರ್ಜುನ್ ತೆಂಡೂಲ್ಕರ್ ಮನವಿ ಸಲ್ಲಿಸಿದ್ದಾರೆ.

ಅಪ್ಪ ಸಚಿನ್ ತೆಂಡೂಲ್ಕರ್ 15ನೇ ವಯಸ್ಸಿನಲ್ಲೇ ಮುಂಬೈ ಪರ ರಣಜಿ ಟ್ರೋಫಿಗೆ ಪದಾರ್ಪಣೆ ಮಾಡಿದ್ದರು. ಆದರೆ ಪುತ್ರ ಅರ್ಜುನ್ ತೆಂಡೂಲ್ಕರ್’ಗೆ 22 ವರ್ಷವಾದರೂ ಇನ್ನೂ ರಣಜಿ ಟ್ರೋಫಿ ಆಡುವ ಅವಕಾಶ ಸಿಕ್ಕಿಲ್ಲ. ಮುಂಬೈ ಪರ ಈ ವರ್ಷವೂ ಅವಕಾಶ ಸಿಗುವುದು ಅನುಮಾನವಾಗಿರುವ ಕಾರಣ ಮುಂಬೈ ತಂಡವನ್ನು ತೊರೆಯಲು ಸಚಿನ್ ಪುತ್ರ ನಿರ್ಧರಿಸಿದ್ದಾರೆ.

“ಅರ್ಜುನ್ ತೆಂಡೂಲ್ಕರ್ ಅವರಿಗೆ ಹೆಚ್ಚು ಹೆಚ್ಚು ಪಂದ್ಯಗಳಲ್ಲಿ ಆಡುವ ಅವಕಾಶ ಸಿಗುವುದು ಮುಖ್ಯ. ತಂಡವನ್ನ ಬದಲಿಸುವ ಕಾರಣ ಮುಂದಿನ ದಿನಗಳಲ್ಲಿ ಹೆಚ್ಚು ಅವಕಾಶಗಳು ಸಿಗಲಿವೆ ಎಂದು ನಂಬಿದ್ದೇವೆ. ಅರ್ಜನ್ ತಮ್ಮ ಕ್ರಿಕೆಟ್ ಕರಿಯರ್’ನಲ್ಲಿ ಹೊಸ ಅಧ್ಯಾಯ ಪ್ರಾರಂಭಿಸುತ್ತಿದ್ದಾರೆ” ಎಂದು SRT ಸ್ಪೋರ್ಟ್ಸ್ ಮ್ಯಾನೇಜ್ಮೆಂಟ್ ಹೇಳಿದೆ. ಅರ್ಜುನ್ ತೆಂಡೂಲ್ಕರ್ ಗೋವಾ ತಂಡ ಸೇರುವುದನ್ನು ಗೋವಾ ಕ್ರಿಕೆಟ್ ಸಂಸ್ಥೆ ಖಚಿತ ಪಡಿಸಿದೆ.

“ನಾವು ಎಡಗೈ ವೇಗದ ಬೌಲರ್ ಹಾಗೂ ಮಧ್ಯಮ ಕ್ರಮಾಂಕದಲ್ಲಿ ಆಡುವ ಬ್ಯಾಟರ್ ಒಬ್ಬನ ನಿರೀಕ್ಷೆಯಲ್ಲಿದ್ದೇವೆ. ಹೀಗಾಗಿ ಅರ್ಜುನ್ ತೆಂಡೂಲ್ಕರ್ ಅವರನ್ನು ನಮ್ಮ ತಂಡಕ್ಕೆ ಆಹ್ವಾನಿಸಿದ್ದೇವೆ. ದೇಶೀಯ ಟೂರ್ನಿ ಆರಂಭಕ್ಕೂ ಮುನ್ನ ನಾವು ಒಂದಷ್ಟು ಅಭ್ಯಾಸ ಪಂದ್ಯಗಳನ್ನು ಆಯೋಜಿಸಿದ್ದು, ಆ ಪಂದ್ಯಗಳಲ್ಲಿ ಅರ್ಜನ್ ಆಡಲಿದ್ದಾರೆ. ಅಲ್ಲಿ ನೀಡುವ ಪ್ರದರ್ಶನದ ಆಧಾರದಲ್ಲಿ ಅರ್ಜುನ್ ಅವರ ಆಯ್ಕೆಯ ಬಗ್ಗೆ ಸೆಲೆಕ್ಟರ್ಸ್ ನಿರ್ಧಾರ ತೆಗೆದುಕೊಳ್ಳಲಿದ್ದಾರೆ” ಎಂದು ಗೋವಾ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ಸೂರಜ್ ಲೋಟ್ಲಿಕರ್ ಹೇಳಿದ್ದಾರೆ. ಎಡಗೈ ವೇಗದ ಬೌಲರ್ ಆಗಿರುವ ಅರ್ಜುನ್ ತೆಂಡೂಲ್ಕರ್ ಅವರನ್ನು ಕಳೆದ ಐಪಿಎಲ್ ಆಟಗಾರರ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ 30 ಲಕ್ಷ ರೂ. ಮೊತ್ತಕ್ಕೆ ಖರೀದಿಸಿತ್ತು. ಆದರೆ 14 ಪಂದ್ಯಗಳ ಪೈಕಿ ಒಂದೇ ಒಂದು ಪಂದ್ಯದಲ್ಲೂ ಆಡುವ ಅವಕಾಶ ಸಿಕ್ಕಿರಲಿಲ್ಲ.

ಅರ್ಜುನ್ ತೆಂಡೂಲ್ಕರ್ ಭಾರತ ಅಂಡರ್-19 ತಂಡದ ಪರ ಎರಡು ಕಿರಿಯರ ಟೆಸ್ಟ್ ಪಂದ್ಯಗಳನ್ನಾಡಿದ್ದಾರೆ. ಮೂರು ವರ್ಷಗಳ ಹಿಂದೆ ಮುಂಬೈ ಸೀಮಿತ ಓವರ್’ಗಳ ಸಂಭಾವ್ಯ ತಂಡದಲ್ಲಿ ಅರ್ಜುನ್ ಸ್ಥಾನ ಪಡೆದಿದ್ದರು. ಆದರೆ ಅಂತಿಮ 15ರ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದರು. ಮುಂಬೈ ಕ್ರಿಕೆಟ್’ನ ಮತ್ತೊಬ್ಬ ದಿಗ್ಗಜ ಸುನೀಲ್ ಗವಾಸ್ಕರ್ ಅವರ ಪುತ್ರ ರೋಹನ್ ಗವಾಸ್ಕರ್ ಕೂಡ ಈ ಹಿಂದೆ ಮುಂಬೈ ತಂಡವನ್ನು ತೊರೆದು ಬಂಗಾಳ ಪರ ಆಡಿದ್ದರು.

ಇದನ್ನೂ ಓದಿ : Karun Nair Story : ತ್ರಿಶತಕವೀರನ ಕ್ರಿಕೆಟ್ ಬದುಕಿಗೆ ದೊಡ್ಡ ಟರ್ನಿಂಗ್ ಪಾಯಿಂಟ್, ಇಲ್ಲಿಂದ ಬದಲಾಗುತ್ತಾ ಕರುಣ್ ನಾಯರ್ ಕರಿಯರ್

ಇದನ್ನೂ ಓದಿ : KL Rahul Captain : ಜಿಂಬಾಬ್ವೆ ಪ್ರವಾಸಕ್ಕೆ ಕನ್ನಡಿಗ ಕೆ.ಎಲ್ ರಾಹುಲ್ ಟೀಮ್ ಇಂಡಿಯಾ ನಾಯಕ

Arjun Tendulkar Goodbye to Mumbai, Sachin Tendulkar son will play for Goa

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular