KL Rahul Captain : ಜಿಂಬಾಬ್ವೆ ಪ್ರವಾಸಕ್ಕೆ ಕನ್ನಡಿಗ ಕೆ.ಎಲ್ ರಾಹುಲ್ ಟೀಮ್ ಇಂಡಿಯಾ ನಾಯಕ

ಬೆಂಗಳೂರು: (KL Rahul Captain india) ಏಷ್ಯಾಕಪ್ ಟೂರ್ನಿಗೆ ಆಯ್ಕೆಯಾಗಿದ್ದ ಕರ್ನಾಟಕದ ಸ್ಟಾರ್ ಓಪನರ್ ಕೆ.ಎಲ್ ರಾಹುಲ್ (KL Rahul Captain) ಅದಕ್ಕೂ ಮುನ್ನ ಜಿಂಬಾಬ್ವೆ ವಿರುದ್ಧದ ಏಕದಿನ ಸರಣಿಯಲ್ಲಿ ಆಡಲಿದ್ದಾರೆ. ಗಾಯದಿಂದ ಗುಣಮುಖರಾಗಿರುವ ಕೆ.ಎಲ್.ರಾಹುಲ್‌ ಫಿಟ್‌ ಆಗಿದ್ದು, ಜಿಂಬಾಬ್ವೆ ವಿರುದ್ದದ ಮೂರು ಪಂದ್ಯಗಳ ಏಕದಿನ ಸರಣಿಯ ನಾಯಕತ್ವವನ್ನು ರಾಹುಲ್‌ ವಹಿಸಿ ಕೊಳ್ಳಲಿದ್ದಾರೆ.

ಜಿಂಬಾಬ್ವೆ ವಿರುದ್ಧ ಆಗಸ್ಟ್ 18, 20 ಹಾಗೂ 22ರಂದು ಹರಾರೆಯಲ್ಲಿ ನಡೆಯಲಿರುವ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತ ತಂಡವನ್ವು ರಾಹುಲ್ ಮುನ್ನಡೆಸಲಿದ್ದಾರೆ. ಆ ಹಿಂದೆ ಜಿಂಬಾಬ್ವೆ ಪ್ರವಾಸಕ್ಕೆ ಶಿಖರ್ ಧವನ್ ಅವರನ್ನು ನಾಯಕನಾಗಿ ಆಯ್ಕೆ ಮಾಡಲಾಗಿತ್ತು. ಗಾಯದ ಸಮಸ್ಯೆ ಹಾಗೂ ಕೋವಿಡ್-19ನಿಂದ ಸಂಪೂರ್ಣವಾಗಿ ಚೇತರಿಸಿ ಕೊಂಡಿರುವ ರಾಹುಲ್ ಅವರಿಗೆ ಏಷ್ಯಾ ಕಪ್ ಟೂರ್ನಿಗೂ ಮುನ್ನ ಅಭ್ಯಾಸದ ಅವಶ್ಯಕತೆಯಿರುವುದರಿಂದ ಜಿಂಬಾಬ್ವೆ ವಿರುದ್ಧದ ಸರಣಿಯಲ್ಲಿ ಆಡಲಿದ್ದಾರೆ.

ಜಿಂಬಾಬ್ವೆ ಸರಣಿಗೆ ರೋಹಿತ್‌ ಶರ್ಮಾ, ವಿರಾಟ್‌ ಕೊಹ್ಲಿ ಅವರಿಗೆ ವಿಶ್ರಾಂತಿಯನ್ನು ನೀಡಲಾಗಿದ್ದು, ರಾಹುಲ್‌ ತಂಡವನ್ನು ಮುನ್ನಡೆಸಲಿದ್ರೆ, ಶಿಖರ್‌ ಧವನ್‌ಗೆ ತಂಡದಲ್ಲಿ ಉಪನಾಯಕನ ಜವಾಬ್ದಾರಿಯನ್ನು ನೀಡಲಾಗಿದೆ. ಒಂದೆರಡು ಸರಣಿಯನ್ನು ಮಿಸ್‌ ಮಾಡಿಕೊಂಡಿರುವ ರಾಹುಲ್‌ ಅವರು ಫಿಟ್‌ ಆಗಿರುವ ಹಿನ್ನೆಲೆಯಲ್ಲಿ ಏಷ್ಯಾಕಪ್‌ಗೆ ತಂಡದಲ್ಲಿ ಸ್ಥಾನ ನೀಡಲಾಗಿದ್ದು, ಉಪನಾಯಕನ ಜವಾಬ್ದಾರಿಯನ್ನು ನೀಡಲಾಗುತ್ತಿದೆ. ರಾಹುಲ್‌ ಅನುಪಸ್ಥಿತಿಯಲ್ಲಿ ಹಾರ್ದಿಕ್‌ ಪಾಂಡ್ಯ, ಶಿಖರ್‌ ಧವನ್‌ ತಂಡವನ್ನು ಮುನ್ನೆಡೆಸಿದ್ದರು.

ಜಿಂಬಾಬ್ವೆ ಪ್ರವಾಸಕ್ಕೆ ಭಾರತ ತಂಡ:
ಕೆ.ಎಲ್ ರಾಹುಲ್ (ನಾಯಕ), ಶಿಖರ್ ಧವನ್ (ಉಪನಾಯಕ), ಶುಭಮನ್ ಗಿಲ್, ರುತುರಾಜ್ ಗಾಯಕ್ವಾಡ್, ಸಂಜು ಸ್ಯಾಮ್ಸನ್, ಇಶಾನ್ ಕಿಶನ್, ದೀಪಕ್ ಹೂಡ, ರಾಹುಲ್ ತ್ರಿಪಾಠಿ, ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಕುಲ್ದೀಪ್ ಯಾದವ್, ಅಕ್ಷರ್ ಪಟೇಲ್, ಆವೇಶ್ ಖಾನ್, ಪ್ರಸಿದ್ಧ್ ಕೃಷ್ಣ, ಮೊಹಮ್ಮದ್ ಸಿರಾಜ್, ದೀಪಕ್ ಚಹರ್.

ಇದನ್ನೂ ಓದಿ : Karun Nair Story : ತ್ರಿಶತಕವೀರನ ಕ್ರಿಕೆಟ್ ಬದುಕಿಗೆ ದೊಡ್ಡ ಟರ್ನಿಂಗ್ ಪಾಯಿಂಟ್, ಇಲ್ಲಿಂದ ಬದಲಾಗುತ್ತಾ ಕರುಣ್ ನಾಯರ್ ಕರಿಯರ್

ಇದನ್ನೂ ಓದಿ : Jasprit Bumrah meets mother : ತುಂಬಾ ದಿನಗಳ ನಂತರ ತಾಯಿ-ತಂಗಿಯನ್ನು ಭೇಟಿಯಾದ ವೇಗಿ ಜಸ್‌ಪ್ರೀತ್ ಬುಮ್ರಾ

KL Rahul Captain of Team India for the tour of Zimbabwe

Comments are closed.