Arjun Tendulkar’s six pack : ವಿರಾಟ್ ಕೊಹ್ಲಿ ಎಫೆಕ್ಟ್, ಸಿಕ್ಸ್ ಪ್ಯಾಕ್ ತೋರಿಸಿದ ಸಚಿನ್ ಪುತ್ರ ಅರ್ಜುನ್ ತೆಂಡೂಲ್ಕರ್

ಬೆಂಗಳೂರು : Arjun Tendulkar’s six pack : ಕ್ರಿಕೆಟ್ ಜಗತ್ತಿನ ಅತ್ಯಂತ ಫಿಟ್ಟೆಸ್ಟ್ ಆಟಗಾರ ಯಾರು ಎಂದು ಕೇಳಿದ್ರೆ, ಮೊದಲು ಕಣ್ಮುಂದೆ ಬರೋದು ವಿರಾಟ್ ಕೊಹ್ಲಿ (Virat Kohli). ಕಿಂಗ್ ಕೊಹ್ಲಿಯ ಫಿಟ್ನೆಸ್ ಎಲ್ಲರಿಗೂ ಮಾದರಿ. 34ನೇ ವಯಸ್ಸಿನಲ್ಲೂ ವಿರಾಟ್ ಕೊಹ್ಲಿ 19ರ ಬಿಸಿರಕ್ತದ ಹುಡುಗನನ್ನೂ ಮೀರಿಸುವಂತಹ ಫಿಟ್ನೆಸ್ ಹೊಂದಿದ್ದಾರೆ. ಮೈದಾನದಲ್ಲಿ ಈಗಲೂ ವಿರಾಟ್ ಕೊಹ್ಲಿಯದ್ದು ಚಿರತೆ ವೇಗ. ವಿರಾಟ್ ಕೊಹ್ಲಿ ಟೀಮ್ ಇಂಡಿಯಾದಲ್ಲೊಂದು ಫಿಟ್ನೆಸ್ ಟ್ರೆಂಡ್ ಸೆಟ್ ಮಾಡಿದ್ದಾರೆ. ಕೊಹ್ಲಿ ಅವರನ್ನು ನೋಡಿ ಸಾಕಷ್ಟು ಯುವ ಕ್ರಿಕೆಟಿಗರು ಆಟದ ಜೊತೆ ಫಿಟ್ನೆಸ್’ನತ್ತ ಗಮನ ಹರಿಸುತ್ತಿದ್ದಾರೆ. ಅದರಲ್ಲೂ ಸಿಕ್ಸ್ ಪ್ಯಾಕ್ ಮಾಡುವುದು ಅಂದ್ರೆ ಈಗಿನ ಯುವ ಕ್ರಿಕೆಟಿಗರಿಗೆ ತುಂಬಾ ಇಷ್ಟ.

ಈಗ ವಿರಾಟ್ ಕೊಹ್ಲಿ ಅವರ ಫಿಟ್ನೆಸ್ ಕ್ರೇಜ್’ನಿಂದ ಪ್ರಭಾವಿತರಾಗುವ ಸರದಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ತೆಂಡೂಲ್ಕರ್ (Sachin Tendulkar’s son Arjun Tendulkar) ಅವರದ್ದು. ಸಚಿನ್ ಪುತ್ರ ಅರ್ಜುನ್’ನ ಸಿಕ್ಸ್ ಪ್ಯಾಕ್ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಶರ್ಟ್ ಬಿಚ್ಚಿ ಕನ್ನಡಿ ಮುಂದೆ ನಿಂತು ಕೊಂಡು ತಮ್ಮ ಸಿಕ್ಸ್ ಪ್ಯಾಕ್ ತೋರಿಸುತ್ತಿರುವ ಅರ್ಜುನ್ ತೆಂಡೂಲ್ಕರ್, ಆ ಫೋಟೋವನ್ನು ಇನ್’ಸ್ಟಾಗ್ರಾಂ ಸ್ಟೋರೀಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ : India World Cup plan : ವಿಶ್ವಕಪ್’ಗೂ ಮುನ್ನ ಕೇವಲ 12 ಪಂದ್ಯಗಳು ಬಾಕಿ, ಇನ್ನೂ ಫಿಕ್ಸ್ ಆಗಿಲ್ಲ ಟೀಮ್ ಇಂಡಿಯಾದ ಪ್ಲೇಯಿಂಗ್ XI

ಇದನ್ನೂ ಓದಿ : Dhoni car craze : ಹುಟ್ಟೂರಲ್ಲಿ ಓಬಿರಾಯನ ಕಾಲದ ರೋಲ್ಸ್ ರಾಯ್ಸ್ ಕಾರು ಓಡಿಸಿದ ಎಂ.ಎಸ್ ಧೋನಿ

23 ವರ್ಷದ ಅರ್ಜುನ್ ತೆಂಡೂಲ್ಕರ್ ಮುಂಬೈ ತಂಡದಲ್ಲಿ ಅವಕಾಶ ಸಿಗದ ಹಿನ್ನೆಲೆಯಲ್ಲಿ ಗೋವಾ ತಂಡಕ್ಕೆ ವಲಸೆ ಹೋಗಿದ್ದು, ಕಳೆದ ದೇಶೀಯ ಕ್ರಿಕೆಟ್ ಋತುವಿನಲ್ಲಿ ಗೋವಾ ಪರ ರಣಜಿ ಟ್ರೋಫಿ, ವಿಜಯ್ ಹಜಾರೆ ಟ್ರೋಫಿ ಏಕದಿನ ಟೂರ್ನಿ ಹಾಗೂ ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿ ಪಂದ್ಯಗಳನ್ನಾಡಿದ್ದರು. ಒಟ್ಟು 7 ಪ್ರಥಮದರ್ಜೆ ಪಂದ್ಯಗಳನ್ನಾಡಿರುವ ಎಡಗೈ ವೇಗದ ಬೌಲರ್ ಅರ್ಜುನ್ ತೆಂಡೂಲ್ಕರ್ 12 ವಿಕೆಟ್ ಪಡೆದಿದ್ದಾರೆ. 7 ಲಿಸ್ಟ್ ಎ ಪಂದ್ಯಗಳಿಂದ 8 ವಿಕೆಟ್ ಹಾಗೂ 13 ಟಿ20 ಪಂದ್ಯಗಳಿಂದ 15 ವಿಕೆಟ್ ಕಬಳಿಸಿದ್ದಾರೆ. ರಣಜಿ ಟ್ರೋಫಿಯಲ್ಲಿ ಒಂದು ಶತಕ ಬಾರಿಸಿರುವ ಅರ್ಜುನ್, 7 ಪಂದ್ಯಗಳಿಂದ 223 ರನ್ ಕಲೆ ಹಾಕಿದ್ದಾರೆ.

Arjun Tendulkar’s six pack : Virat Kohli effect, Sachin’s son Arjun Tendulkar showed six pack

Comments are closed.