ದುಬೈ: ಭಾರತ Vs ಪಾಕಿಸ್ತಾನ (Asia Cup 2022 India Vs Pakistan) ಕ್ರಿಕೆಟ್ ಪಂದ್ಯ ಅಂದ್ರೆ ಅದಕ್ಕೆ ಯುದ್ಧದ ಮಹತ್ವ. ಆಟಗಾರರೂ ಅಷ್ಟೇ ಜಿದ್ದಿನಿಂದ ಆಡ್ತಾರೆ. ಹೀಗಾಗಿ ಆಟಗಾರರ ಮಧ್ಯೆ ಜಿದ್ದಾಜಿದ್ದಿನ ಸ್ಪರ್ಧೆ ನಡೆಯುವುದು ಸಾಮಾನ್ಯ. ಆದ್ರೆ ಈಗ ಕಾಲ ಬದಲಾಗಿದೆ. ಭಾರತ Vs ಪಾಕಿಸ್ತಾನ ಪಂದ್ಯದ ಬಗ್ಗೆ ಹೊರ ಜಗತ್ತಿನ ಹೈಪ್ ಹಾಗೇ ಇದ್ರೂ, ಆಟಗಾರರ ಮಧ್ಯೆ ಈ ಹಿಂದಿನ ಜಿದ್ದಾಜಿದ್ದಿಯಿಲ್ಲ. ಇದಕ್ಕೆ ಸಾಕ್ಷಿ ಭಾರತ ತಂಡದ ಆಟಗಾರರ (Virat and Rahul kindness) ನಡವಳಿಕೆ.
ಭಾರತ-ಪಾಕಿಸ್ತಾನ ನಡುವಿನ ಏಷ್ಯಾ ಕಪ್ (Asia Cup) ಪಂದ್ಯಕ್ಕೂ ಮುನ್ನ ಉಭಯ ತಂಡಗಳ ಆಟಗಾರರು ಗುರುವಾರ ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಅಭ್ಯಾಸ ನಡೆಸುವ ವೇಳೆ ಪಾಕಿಸ್ತಾನದ ಗಾಯಾಳು ವೇಗಿ ಶಾಹೀನ್ ಷಾ ಆಫ್ರಿದಿಯನ್ನು (Shaheen Shah Afridi) ಟೀಮ್ ಇಂಡಿಯಾ ಆಟಗಾರರು ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದರು. ಟೀಮ್ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli), ಉಪನಾಯಕ ಕೆ.ಎಲ್ ರಾಹುಲ್ (KL Rahul), ವಿಕೆಟ್ ಕೀಪರ್ ರಿಷಭ್ ಪಂತ್ (Rishabh Pant) ಮತ್ತು ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಹಲ್ (Yuzvendra Chahal), ಪಾಕ್ ವೇಗಿಯನ್ನು ಭೇಟಿ ಮಾಡಿ ಕಾಲಿನ ಗಾಯದ ಬಗ್ಗೆ ವಿಚಾರಿಸಿದ್ದರು. ಆ ವೇಳೆ ಶಾಹೀನ್ ಷಾ ಆಫ್ರಿದಿ ಕಾಲಿಗೆ ಸ್ಟ್ಟೆಚರ್ ಕಟ್ಟಿಕೊಂಡಿದ್ದರು.
ಶಾಹೀನ್ ಷಾ ಅಫ್ರಿದಿಯನ್ನು ಟೀಮ್ ಇಂಡಿಯಾ ಆಟಗಾರರು ಮಾತನಾಡಿಸಿದ ರೀತಿ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಮ್ (Babar Azam) ಅವರ ಮೆಚ್ಚುಗೆಗೆ ಪಾತ್ರವಾಗಿದೆ. ಆ ದೃಶ್ಯ ನಮ್ಮ ಹೃದಯ ತಟ್ಟಿ ಬಿಟ್ಟಿತು ಎಂದು ಬಾಬರ್ ಹೇಳಿದ್ದಾರೆ. “ಗುರುವಾರ ಅಭ್ಯಾಸದ ವೇಳೆ ಭಾರತ ತಂಡದ ಆಟಗಾರರು ಶಾಹೀನ್ ಅಫ್ರಿದಿಯನ್ನು ಮಾತನಾಡಿಸಿದ ರೀತಿ ನನ್ನ ಹೃದಯಕ್ಕೆ ತಟ್ಟಿದೆ. ವಿರಾಟ್ ಕೊಹ್ಲಿ ಮತ್ತು ಕೆ.ಎಲ್ ರಾಹುಲ್ ಶಾಹೀನ್ ಅಫ್ರಿದಿಯ ಗಾಯದ ಬಗ್ಗೆ ವಿಚಾರಿಸಿ ನಿಗಾ ವಹಿಸುವಂತೆ ಸೂಚನೆ ನೀಡಿದ್ದಾರೆ. ಇದು ಭಾರತ ತಂಡ ಆಟಗಾರರ ಒಳ್ಳೆಯತನಕ್ಕೆ ಸಾಕ್ಷಿ” ಎಂದು ಬಾಬರ್ ಅಜಮ್ ಹೇಳಿದ್ದಾರೆ.
ಶಾಹೀನ್ ಷಾ ಅಫ್ರಿದಿ ಮತ್ತು ವಿರಾಟ್ ಕೊಹ್ಲಿ ಅವರ ಮಾತುಕತೆಯ ವೇಳೆ “ನೀವು ಆದಷ್ಟು ಬೇಗ ಫಾರ್ಮ್’ಗೆ ಮರಳಲು ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ” ಎಂದು ಶಾಹೀನ್ ಅಫ್ರಿದಿ ಹೇಳಿದ್ದರು.
ಇದನ್ನೂ ಓದಿ : ABD Congratulates Virat Kohli : ಟಿ20ಯಲ್ಲಿ “ಶತಕ” ಬಾರಿಸಿದ ವಿರಾಟ್ ಕೊಹ್ಲಿಗೆ ಅಭಿನಂದನೆ ಸಲ್ಲಿಸಿದ ಆಪ್ತಮಿತ್ರ ಎಬಿಡಿ
Asia Cup 2022 India Vs Pakistan Virat and Rahul kindness touched the heart Why did Pakistan captain Babar say this