ಮಂಗಳವಾರ, ಏಪ್ರಿಲ್ 29, 2025
HomeSportsCricketAsia Cup 2022 : ಏಷ್ಯಾಕಪ್ ವೇಳಾಪಟ್ಟಿ ಪ್ರಕಟ : ಟೂರ್ನಿಯ ಫಾರ್ಮ್ಯಾಟ್, ಭಾರತದಲ್ಲಿ Live...

Asia Cup 2022 : ಏಷ್ಯಾಕಪ್ ವೇಳಾಪಟ್ಟಿ ಪ್ರಕಟ : ಟೂರ್ನಿಯ ಫಾರ್ಮ್ಯಾಟ್, ಭಾರತದಲ್ಲಿ Live Streaming, ಒಂದೇ ಕ್ಲಿಕ್‌ನಲ್ಲಿ ಕಂಪ್ಲೀಟ್ ಡೀಟೇಲ್ಸ್

- Advertisement -

ದುಬೈ: ಏಷ್ಯಾಕಪ್ ಟಿ20 ಟೂರ್ನಿ (Asia Cup 2022) ಆಗಸ್ಟ್ 27ರಂದು ಯುನೈಟೆಡ್ ಅರಬ್ ಎಮಿರೇಟ್ಸ್’ನಲ್ಲಿ ಆರಂಭವಾಗಲಿದ್ದು, ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (International Cricket Council – ICC) ಟೂರ್ನಿಯ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಆಗಸ್ಟ್ 28ರಂದು ನಡೆಯಲಿರುವ ತನ್ನ ಮೊದಲ ಪಂದ್ಯದಲ್ಲಿ ಭಾರತ ತಂಡ, ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು ಎದುರಿಸಲಿದೆ. ಟೂರ್ನಿಯ ಫೈನಲ್ ಪಂದ್ಯ ಸೆಪ್ಟೆಂಬರ್ 11ರಂದು ನಡೆಯಲಿದೆ.


ಯುಎಇ, ಕುವೈಟ್, ಸಿಂಗಾಪುರ್ ಮತ್ತು ಹಾಂಕಾಂಗ್ ತಂಡಗಳು ಅರ್ಹತಾ ಸುತ್ತಿನಲ್ಲಿ ಆಡಲಿದ್ದು, ಈ ಸುತ್ತಿನ ವಿಜೇತ ತಂಡ ಭಾರತ, ಪಾಕಿಸ್ತಾನ, ಶ್ರೀಲಂಕಾ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶ ತಂಡಗಳ ಜೊತೆ ಪ್ರಧಾನ ಸುತ್ತಿನಲ್ಲಿ ಆಡಲಿದೆ. ಟೂರ್ನಿಯಲ್ಲಿ ಆಡಲಿರುವ ಆರು ತಂಡಗಳನ್ನು 2 ಗ್ರೂಪ್’ಗಳಾಗಿ ವಿಭಾಗಿಸಲಾಗಿದ್ದು, ಭಾರತ, ಪಾಕಿಸ್ತಾನ ಮತ್ತು ಅರ್ಹತಾ ಸುತ್ತಿನ ವಿಜೇತ ತಂಡ ಗ್ರೂಪ್ ‘ಎ’ನಲ್ಲಿ ಸ್ಥಾನ ಪಡೆದ್ರೆ, ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನ ತಂಡಗಳು ಗ್ರೂಪ್ ‘ಬಿ’ನಲ್ಲಿ ಕಾಣಿಸಿಕೊಂಡಿವೆ. ಪ್ರತೀ ತಂಡಗಳು ಗ್ರೂಪ್ ಹಂತದಲ್ಲಿ ತಲಾ ಒಂದು ಬಾರಿ ಮುಖಾಮುಖಿಯಾಗಲಿವೆ. ಅಗ್ರ ಎರಡು ತಂಡಗಳು ಸೂಪರ್-4 ಹಂತಕ್ಕೆ ಪ್ರವೇಶ ಪಡೆಯಲಿದ್ದು, ಸೂಪರ್-4 ಹಂತದಲ್ಲಿ ಎಲ್ಲಾ ನಾಲ್ಕು ತಂಡಗಳು ಪ್ರತೀ ತಂಡದ ವಿರುದ್ಧ ಆಡಲಿವೆ. ಸೂಪರ್-4ನಲ್ಲಿ ಅಗ್ರ ಎರಡು ಸ್ಥಾನ ಪಡೆಯುವ ತಂಡಗಳು ಫೈನಲ್ ಪ್ರವೇಶಿಸಲಿವೆ.

ಏಷ್ಯಾಕಪ್ ಟಿ20 (Asia Cup 2022) ಟೂರ್ನಿಯ ವೇಳಾಪಟ್ಟಿ

Group A
ಭಾರತ Vs ಪಾಕಿಸ್ತಾನ: 28 ಆಗಸ್ಟ್, ದುಬೈ
ಭಾರತ Vs ಕ್ವಾಲಿಫೈಯರ್ ಟೀಮ್: 31 ಆಗಸ್ಟ್, ದುಬೈ
ಪಾಕಿಸ್ತಾನ Vs ಕ್ವಾಲಿಫೈಯರ್ ಟೀಮ್: 02 ಸೆಪ್ಟೆಂಬರ್, ಶಾರ್ಜಾ

Group A
ಶ್ರೀಲಂಕಾ Vs ಅಫ್ಘಾನಿಸ್ತಾನ: 27 ಆಗಸ್ಟ್, ದುಬೈ
ಬಾಂಗ್ಲಾದೇಶ Vs ಅಫ್ಘಾನಿಸ್ತಾನ: 30 ಆಗಸ್ಟ್, ಶಾರ್ಜಾ
ಶ್ರೀಲಂಕಾ Vs ಬಾಂಗ್ಲಾದೇಶ: 01 ಸೆಪ್ಟೆಂಬರ್, ದುಬೈ

ಸೂಪರ್-4 ಹಂತ
B1 Vs B2: 03 ಸೆಪ್ಟೆಂಬರ್, ಶಾರ್ಜಾ
A1 Vs A2: 04 ಸೆಪ್ಟೆಂಬರ್, ದುಬೈ
A1 Vs B1: 06 ಸೆಪ್ಟೆಂಬರ್, ದುಬೈ
A2 Vs B2: 07 ಸೆಪ್ಟೆಂಬರ್, ದುಬೈ
A1 Vs B2: 08 ಸೆಪ್ಟೆಂಬರ್, ದುಬೈ
B1 Vs A2: 09 ಸೆಪ್ಟೆಂಬರ್, ದುಬೈ

ಫೈನಲ್: 11 ಸೆಪ್ಟೆಂಬರ್, ದುಬೈ
ಪಂದ್ಯಗಳ ಆರಂಭ: ರಾತ್ರಿ 7.30ಕ್ಕೆ (ಭಾರತೀಯ ಕಾಲಮಾನ)
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್’ವರ್ಕ್ (Star Sports network)
ಲೈವ್ ಸ್ಟ್ರೀಮಿಂಗ್: ಡಿಸ್ನಿ+ಹಾಟ್’ಸ್ಟಾರ್ (Disney + Hotstar)

ಏಷ್ಯಾಕಪ್ ಚಾಂಪಿಯನ್ಸ್
ಭಾರತ: 1984, 1988, 1990-91, 1995, 2010, 2016, 2018
ಶ್ರೀಲಂಕಾ: 1986, 1997, 2004, 2008, 2014
ಪಾಕಿಸ್ತಾನ: 2000, 2012

ಇದನ್ನೂ ಓದಿ : Virat Kohli return to Mumbai : ಯುರೋಪ್ ಪ್ರವಾಸದಿಂದ ವಿರಾಟ್ ವಾಪಸ್, ಮಗಳ ಫೋಟೋ ಕ್ಲಿಕ್ಕಿಸಿದವರಿಗೆ ಕೊಹ್ಲಿ ಹೇಳಿದ್ದೇನು ?

ಇದನ್ನೂ ಓದಿ : India Vs West Indies T20 : ಒಂದೇ ಮ್ಯಾಚಲ್ಲಿ 3 ಅರ್ಷದೀಪ್’ಗಳು, ಇದು ಹೇಗೆ ಸಾಧ್ಯ ?

Asia Cup 2022 Schedule Announced, Tournament Format, Live Streaming in India, Complete Details in One Click

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular