ಸೋಮವಾರ, ಏಪ್ರಿಲ್ 28, 2025
HomeSportsCricketಏಷ್ಯಾ ಕಪ್ 2022: ವಿರಾಟ್‌ ಕೊಹ್ಲಿ ಹಾಗೂ ರೋಹಿತ್‌ ಶರ್ಮಾ ಜೊತೆ ಫೋಟೋ ಕ್ಲಿಕ್ಕಿಸಿದ ಈ...

ಏಷ್ಯಾ ಕಪ್ 2022: ವಿರಾಟ್‌ ಕೊಹ್ಲಿ ಹಾಗೂ ರೋಹಿತ್‌ ಶರ್ಮಾ ಜೊತೆ ಫೋಟೋ ಕ್ಲಿಕ್ಕಿಸಿದ ಈ ವಿಶೇಷ ವ್ಯಕ್ತಿ ಯಾರು ?

- Advertisement -

ದುಬೈ : (Asia Cup 2022 special person) ಏಷ್ಯಾ ಕಪ್ 2022 ರ ತನ್ನ ಆರಂಭಿಕ ಪಂದ್ಯದಲ್ಲಿ ಪಾಕಿಸ್ತಾನವನ್ನು ಐದು ವಿಕೆಟ್‌ಗಳಿಂದ ಸೋಲಿಸುವ ಮೂಲಕ ಟೀಮ್ ಇಂಡಿಯಾ ಶುಭಾರಂಭ ಮಾಡಿದೆ. ಈ ನಡುವಲ್ಲೇ ಭಾರತ ತಂಡ ನಾಯಕ ರೋಹಿತ್‌ ಶರ್ಮಾ ಹಾಗೂ ಮಾಜಿ ನಾಯಕ ವಿರಾಟ್‌ ಕೊಹ್ಲಿ ಜೊತೆಯಲ್ಲಿ ವ್ಯಕ್ತಿಯೋರ್ವರು ಪೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಸದ್ಯ ಈ ಪೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಆ ವಿಶೇಷ ವ್ಯಕ್ತಿ ಯಾರು ಅನ್ನೋ ಕುತೂಹಲ ಸೃಷ್ಟಿಯಾಗಿದೆ.

ಭಾರತ-ಪಾಕಿಸ್ತಾನ ಅಭಿಮಾನಿಗಳು ಮಾತ್ರವಲ್ಲದೆ ಶ್ರೀಲಂಕಾ ಅಭಿಮಾನಿಗಳು ಕೂಡ ಈ ಪಂದ್ಯವನ್ನು ವೀಕ್ಷಿಸಿದರು. ವಿಶೇಷವಾಗಿ ಭಾರತೀಯ ಕ್ರಿಕೆಟಿಗರನ್ನು ಇಷ್ಟಪಡುವ ಶ್ರೀಲಂಕಾದ ಅಭಿಮಾನಿ ಗಯಾನ್ ಸೇನಾನಾಯಕೆ ಅವರು ಭಾರತ-ಪಾಕ್ ಪಂದ್ಯವನ್ನು ವೀಕ್ಷಿಸಿದರು. ಅಂಗವಿಕಲರಾಗಿರುವ ಗಯಾನ್ ಸೇನಾನಾಯಕ ಅಪ್ಪಟ ಕ್ರಿಕೆಟ್ ಅಭಿಮಾನಿ. ಸಾಮಾನ್ಯವಾಗಿ ಶ್ರೀಲಂಕಾ ಪಂದ್ಯಗಳ ವೇಳೆ ಕಾಣಿಸಿಕೊಳ್ಳುವ ಗಯಾನ್ ಸೇನಾನಾಯಕೆ ಇದೀಗ ಏಷ್ಯಾಕಪ್ ವೀಕ್ಷಿಸಲು ದುಬೈಗೆ ಬಂದಿದ್ದಾರೆ. ಇದೇ ವೇಳೆ ಅವರಿಗೆ ಟೀಂ ಇಂಡಿಯಾದ ಇಬ್ಬರು ನೆಚ್ಚಿನ ಆಟಗಾರರನ್ನು ಭೇಟಿಯಾಗುವ ಅವಕಾಶ ಸಿಕ್ಕಿದೆ.

ತಾವು ಕ್ಲಿಕ್ಕಿಸಿದ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡುವ ಮೂಲಕ ಗಯಾನ್ ಸೇನಾನಾಯಕ ಸಂತಸ ವ್ಯಕ್ತಪಡಿಸಿದ್ದಾರೆ. ಈ ಅಪರೂಪದ ಫೋಟೋದಲ್ಲಿ, ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಸೇನಾನಾಯಕನ ಎರಡೂ ಬದಿಯಲ್ಲಿ ಪೋಸ್ ನೀಡಿದ್ದಾರೆ. ಇದೀಗ ಈ ಫೋಟೋ ವೈರಲ್ ಆಗಿದ್ದು, ಕಿಂಗ್ ಕೊಹ್ಲಿ-ಹಿಟ್ ಮ್ಯಾನ್ ಅಭಿಮಾನಿಗಳು ಭಾರೀ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ವಿಶೇಷವೆಂದರೆ ವಿರಾಟ್ ಕೊಹ್ಲಿಯ ಅಪ್ಪಟ ಅಭಿಮಾನಿ ಸೇನಾನಾಯಕನ ಫೋಟೋ ಮತ್ತೊಮ್ಮೆ ವೈರಲ್ ಆಗಿದೆ. 2017 ರಲ್ಲಿ ಮುಂಬೈನಲ್ಲಿ ವಿರಾಟ್ ಮತ್ತು ಅವರ ಪತ್ನಿ ಅನುಷ್ಕಾ ಶರ್ಮಾ ಅವರ ವಿವಾಹದ ಆರತಕ್ಷತೆಯಲ್ಲಿ ಸೇನಾನಾಯಕ ಭಾಗವಹಿಸಿದ್ದರು. ಆ ಫೋಟೋ ಮೂಲಕ ಗಯಾನ್ ಸೇನಾನಾಯಕ ಭಾರತೀಯ ಕ್ರಿಕೆಟ್ ಪ್ರೇಮಿಗಳಿಗೆ ಪರಿಚಿತರಾಗಿದ್ದರು. ಇದೀಗ ಟೀಂ ಇಂಡಿಯಾದ ಇಬ್ಬರು ಸ್ಟಾರ್ ಗಳ ಜೊತೆ ಕುಳಿತು ಫೋಟೋ ಕ್ಲಿಕ್ಕಿಸುವ ಮೂಲಕ ಗಯಾನ್ ಸೇನಾನಾಯಕ ಸಾಮಾಜಿಕ ಜಾಲತಾಣದಲ್ಲಿ ಹೊಸ ಅಲೆ ಸೃಷ್ಟಿಸಿದ್ದಾರೆ.

ಈ ವರ್ಷದ ಏಷ್ಯಾಕಪ್‌ನಲ್ಲಿ ಭಾರತ ತಂಡ ಗೆಲುವಿನೊಂದಿಗೆ ಶುಭಾರಂಭ ಮಾಡಿದರೆ, ಶ್ರೀಲಂಕಾ ತಂಡ ಅಫ್ಘಾನಿಸ್ತಾನ ವಿರುದ್ಧ ದಯನೀಯವಾಗಿ ಸೋತಿತ್ತು. ಮುಂದಿನ ಪಂದ್ಯ ದಲ್ಲಿ ಬಾಂಗ್ಲಾದೇಶ ವಿರುದ್ಧ ಗೆದ್ದರೆ ಮಾತ್ರ ಲಂಕಾ ಮುಂದಿನ ಹಂತಕ್ಕೇರುವ ಅವಕಾಶ ಪಡೆಯಲಿದೆ. ಅಂದರೆ, ಗಯಾನ್ ಸೇನಾನಾಯಕ ನಿರೀಕ್ಷೆಯಂತೆ ಭಾರತ-ಶ್ರೀಲಂಕಾ ಮುಖಾಮುಖಿಯಾದರೆ ಲಂಕಾ ತಂಡ ಸೂಪರ್-4 ಹಂತ ಪ್ರವೇಶಿಸಬೇಕು. ಹೀಗಾಗಿ ಮುಂದಿನ ಪಂದ್ಯ ಶ್ರೀಲಂಕಾ ತಂಡಕ್ಕೆ ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ.

ಇದನ್ನೂ ಓದಿ : Hardik Pandya MS Dhoni : ಹಾರ್ದಿಕ್ ಪಾಂಡ್ಯಗೆ ಮ್ಯಾಚ್ ಫಿನಿಷಿಂಗ್ ಪಾಠ ಕಲಿಸಿದ ದ್ರೋಣಾಚಾರ್ಯ ಇವರೇ

ಇದನ್ನೂ ಓದಿ : Shubman Gill dating : ಈ ಬಾಲಿವುಡ್ ನಟಿ ಜೊತೆ ಡೇಟಿಂಗ್ ಮಾಡ್ತಿದ್ದಾರಾ ಟೀಮ್ ಇಂಡಿಯಾ ಸ್ಟಾರ್ ಶುಭಮನ್ ಗಿಲ್?

Asia Cup 2022: Who is this special person who clicked a photo with King Kohli-Hitman ?

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular