T20 WC ಭಾರತ ತಂಡ : ಟೀಮ್ ಇಂಡಿಯಾದ ಈ 13 ಆಟಗಾರರು T20 ವಿಶ್ವಕಪ್‌ಗೆ ಖಚಿತ

ಮುಂಬೈ : (T20 WC India Squad) ಆಸ್ಟ್ರೇಲಿಯಾದಲ್ಲಿ ಅಕ್ಟೋಬರ್ 16 ರಿಂದ ಆರಂಭವಾಗಲಿರುವ ಟಿ20 ವಿಶ್ವಕಪ್‌ಗೆ (T20 World Cup) ತಂಡಗಳನ್ನು ಪ್ರಕಟಿಸಲು ಐಸಿಸಿ ಅನುಮತಿ ನೀಡಿದೆ. ಸೆಪ್ಟೆಂಬರ್ 15ರೊಳಗೆ ಪ್ರತಿ ತಂಡ 15 ಸದಸ್ಯರ ಪಟ್ಟಿಯನ್ನು ಸಲ್ಲಿಸಬೇಕಿದೆ. ಟೀ ಇಂಡಿಯಾ ಪರ ವಿಶ್ವಕಪ್‌ ಆಡಲಿರುವ ಆಟಗಾರರ ಹೆಸರು ಈಗಾಗಲೇ ಖಚಿತವಾಗಿದೆ. ಜೊತೆಗೆ ನಾಯಕ ರೋಹಿತ್‌ ಶರ್ಮಾ ಕೂಡ ಈ ವಿಚಾರವನ್ನು ಖಚಿತ ಪಡಿಸಿದ್ದಾರೆ. ಹಾಗಾದ್ರೆ ಆಟಗಾರರು ಯಾರು ಅನ್ನೋ ಕುತೂಹಲಕ್ಕೆ ಉತ್ತರ ಇಲ್ಲಿದೆ.

ಟಿ20 ವಿಶ್ವಕಪ್‌ಗೆ 80 ರಿಂದ 90 ಪ್ರತಿಶತದಷ್ಟು ತಂಡವನ್ನು ಹೊಂದಿಸಿದ್ದೇವೆ. ಸಹಜವಾಗಿ, ಪರಿಸ್ಥಿತಿಗಳಿಗೆ ಅನುಗುಣವಾಗಿ ಮೂರು-ನಾಲ್ಕು ಬದಲಾವಣೆಗಳು ಆಗಬಹುದು ಎಂದು ರೋಹಿತ್ ಶರ್ಮಾ ಇತ್ತೀಚೆಗೆ ಹೇಳಿದ್ದಾರೆ. ಅದರಂತೆ ಇದೀಗ 13 ಆಟಗಾರರ ಪಟ್ಟಿ ಖಚಿತವಾಗಿದೆ. ಅಂದರೆ ಏಷ್ಯಾಕಪ್ ನಲ್ಲಿ ಅರ್ಹತೆ ಪಡೆದಿರುವ ಟೀಂ ಇಂಡಿಯಾದ ಬಹುತೇಕ ಆಟಗಾರರು ಟಿ20 ವಿಶ್ವಕಪ್ ನಲ್ಲೂ ಕಾಣಿಸಿಕೊಳ್ಳಲಿದ್ದಾರೆ. ಆದರೆ, ಇನ್ನೆರಡು ಸ್ಥಾನಗಳಲ್ಲಿ ಯಾರು ಆಡುತ್ತಾರೆ ಎಂಬುದು ಪ್ರಶ್ನೆಯಾಗಿದೆ.

ಗಾಯಗೊಂಡಿರುವ ಜಸ್ಪ್ರೀತ್ ಬುಮ್ರಾ ಮತ್ತು ಹರ್ಷಲ್ ಪಟೇಲ್ ಏಷ್ಯಾಕಪ್‌ನಲ್ಲಿ ಆಡುತ್ತಿಲ್ಲ. ಈ ಇಬ್ಬರು ಆಟಗಾರರು ಮುಂಬರುವ ಸರಣಿಯಲ್ಲಿ ಆಡುತ್ತಾರೆಯೇ ಎಂಬುದು ಇನ್ನೂ ಖಚಿತವಾಗಿಲ್ಲ. ಟಿ20 ವಿಶ್ವಕಪ್‌ಗೂ ಮುನ್ನ ಭಾರತ ತಂಡ ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ವಿರುದ್ಧ ಸರಣಿ ಆಡಲಿದೆ. ಈ ಇಬ್ಬರು ವೇಗಿಗಳು ಈ ಸರಣಿಗಳಲ್ಲಿ ಸ್ಪರ್ಧಿಸಿದರೆ ಮಾತ್ರ ಟಿ20 ವಿಶ್ವಕಪ್‌ನಲ್ಲಿ ಸ್ಥಾನ ಪಡೆಯಬಹುದು. ಅದಕ್ಕಾಗಿಯೇ 15 ಸದಸ್ಯರ ಪೈಕಿ 2 ಸ್ಥಾನಕ್ಕೆ ಬಿಸಿಸಿಐ ಆಯ್ಕೆ ಸಮಿತಿ ಕಾದು ನೋಡುವ ತಂತ್ರ ರೂಪಿಸಿದೆ ಎಂದು ವರದಿಯಾಗಿದೆ. ಅಂದರೆ ಹರ್ಷಲ್ ಪಟೇಲ್ ಮತ್ತು ಜಸ್ಪ್ರೀತ್ ಬುಮ್ರಾ ಪುನರಾಗಮನ ಮಾಡಿದರೆ ಟಿ20 ವಿಶ್ವಕಪ್‌ನಲ್ಲಿ ಸ್ಥಾನ ಪಡೆಯುತ್ತಾರೆ ಎನ್ನಬಹುದು.

ಏಷ್ಯಾಕಪ್‌ಗೆ ಆಯ್ಕೆಯಾಗದ ಇಶಾನ್ ಕಿಶನ್, ಶ್ರೇಯಸ್ ಅಯ್ಯರ್ ಮತ್ತು ಸಂಜು ಸ್ಯಾಮ್ಸನ್ ಮೀಸಲು ಆಟಗಾರರ ಪಟ್ಟಿಯಲ್ಲಿ ಸೇರ್ಪಡೆಗೊಳ್ಳುವ ಸಾಧ್ಯತೆಯಿದೆ. ಈ ಮೂವರು ಆಟಗಾರರು ಆಸ್ಟ್ರೇಲಿಯಾದ ಪಿಚ್‌ನಲ್ಲಿ ಆಡಿದ ಅನುಭವ ಹೊಂದಿರುವ ಕಾರಣ, ಬಿಸಿಸಿಐ ಮೀಸಲು ಆಟಗಾರರ ಪಟ್ಟಿಯಲ್ಲಿ ಅನುಭವಿ ಆಟಗಾರರಿಗೆ ಆದ್ಯತೆ ನೀಡಲಿದೆ. ಸದ್ಯದ ಮಾಹಿತಿ ಪ್ರಕಾರ ಟಿ20 ವಿಶ್ವಕಪ್‌ಗೆ ಆಯ್ಕೆಯಾಗುವ ಟೀಂ ಇಂಡಿಯಾದ ಸಂಭಾವ್ಯ 13 ಆಟಗಾರರ ಪಟ್ಟಿ ಹೀಗಿದೆ.

  1. ರೋಹಿತ್ ಶರ್ಮಾ (ನಾಯಕ)
  2. ಕೆಎಲ್ ರಾಹುಲ್ (ಉಪನಾಯಕ)
  3. ವಿರಾಟ್ ಕೊಹ್ಲಿ
  4. ಸೂರ್ಯಕುಮಾರ್ ಯಾದವ್
  5. ಹಾರ್ದಿಕ್ ಪಾಂಡ್ಯ
  6. ರವೀಂದ್ರ ಜಡೇಜಾ
  7. ದಿನೇಶ್ ಕಾರ್ತಿಕ್
  8. ರಿಷಭ್ ಪಂತ್
  9. ದೀಪಕ್ ಹೂಡಾ
  10. ಭುವನೇಶ್ವರ್ ಕುಮಾರ್
  11. ದೀಪಕ್ ಚಾಹರ್
  12. ಅರ್ಷದೀಪ್ ಸಿಂಗ್
  13. ಯುಜ್ವೇಂದ್ರ ಚಾಹಲ್
  14. ??
  15. ??

ಮುಂಬರುವ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗೆ ಈ 13 ಆಟಗಾರರು ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ. ಈ ಪೈಕಿ ಕಳಪೆ ಫಾರ್ಮ್ ತೋರುವ ಆಟಗಾರರನ್ನು ಅಂತಿಮವಾಗಿ ತಂಡದಿಂದ ಕೈಬಿಡಬಹುದು. ಇದರಿಂದಾಗಿ ಪರಿಸ್ಥಿತಿಗೆ ಅನುಗುಣವಾಗಿ ಮೂರು-ನಾಲ್ಕು ಬದಲಾವಣೆಗಳಾಗಬಹುದು ಎಂದು ರೋಹಿತ್ ಶರ್ಮಾ ಹೇಳಿದ್ದಾರೆ. ಗಾಯದಿಂದ ಚೇತರಿಸಿಕೊಂಡರೆ ಜಸ್ಪ್ರೀತ್ ಬುಮ್ರಾ ಮತ್ತು ಹರ್ಷಲ್ ಪಟೇಲ್ ಕೂಡ ತಂಡದಲ್ಲಿ ಸ್ಥಾನ ಪಡೆಯಬಹುದು. ಈ ಮೂಲಕ ಬಲಿಷ್ಠ 15 ಸದಸ್ಯರ ತಂಡವನ್ನು ರಚಿಸಲು ಬಿಸಿಸಿಐ ಮುಂದಾಗಿದೆ.

13 ದಿನಗಳಲ್ಲಿ 6 ಪಂದ್ಯಗಳು:

ಟಿ20 ವಿಶ್ವಕಪ್‌ಗೂ ಮುನ್ನ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಟಿ20 ಸರಣಿ ಆಡಲು ಟೀಂ ಇಂಡಿಯಾ ಪ್ಲಾನ್ ಮಾಡಿದೆ. ಈ ಎರಡೂ ತಂಡಗಳು ಅತ್ಯುತ್ತಮ ವೇಗಿ ಗಳನ್ನು ಹೊಂದಿವೆ. ಹಾಗಾಗಿಯೇ ಟಿ20 ವಿಶ್ವಕಪ್ ಆರಂಭಕ್ಕೂ ಕೆಲವು ದಿನಗಳ ಮೊದಲು ಈ ಎರಡು ತಂಡಗಳ ವಿರುದ್ಧ ಟಿ20 ಸರಣಿ ಆಡಲು ಟೀಂ ಇಂಡಿಯಾ ಮುಂದಾಗಿದೆ. ಈ ಸರಣಿಗಳು ಸೆಪ್ಟೆಂಬರ್‌ನಲ್ಲಿ ಆರಂಭವಾಗಲಿವೆ. ಮೊದಲು ಆಸ್ಟ್ರೇಲಿಯಾ ವಿರುದ್ಧ 3 ಪಂದ್ಯಗಳ ಟಿ20 ಸರಣಿಯನ್ನು ಆಡಲಿದೆ. ಭಾರತದಲ್ಲಿ ಸೆಪ್ಟೆಂಬರ್ 20, 23 ಮತ್ತು 25 ರಂದು ಕ್ರಮವಾಗಿ ಮೊಹಾಲಿ, ನಾಗ್ಪುರ ಮತ್ತು ಹೈದರಾಬಾದ್‌ನಲ್ಲಿ ಸರಣಿ ನಡೆಯಲಿದೆ.

ಇದಾದ ಬಳಿಕ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿ ಆರಂಭವಾಗಲಿದೆ. ಈ ಸರಣಿಯಲ್ಲಿ ಟೀಂ ಇಂಡಿಯಾ 3 ಟಿ20 ಹಾಗೂ 3 ಏಕದಿನ ಪಂದ್ಯಗಳನ್ನು ಆಡಲಿದೆ. ಸೆಪ್ಟೆಂಬರ್ 28 ರಿಂದ ಸರಣಿ ಆರಂಭವಾಗಲಿದ್ದು, ಸೆಪ್ಟೆಂಬರ್ 28 ರಂದು ತಿರುವನಂತಪುರಂ, ಅಕ್ಟೋಬರ್ 2 ರಂದು ಗುವಾಹಟಿ ಮತ್ತು ಅಕ್ಟೋಬರ್ 4 ರಂದು ಇಂದೋರ್ ನಲ್ಲಿ ಪಂದ್ಯಗಳು ನಡೆಯಲಿವೆ.ಇದರ ನಂತರ 3 ಪಂದ್ಯಗಳ ಏಕದಿನ ಸರಣಿ ನಡೆಯಲಿದೆ. ಇಲ್ಲಿ ಗಮನಿಸಬೇಕಾದ ಪ್ರಮುಖ ಅಂಶವೆಂದರೆ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಟೀಂ ಇಂಡಿಯಾ ಕೇವಲ 13 ದಿನಗಳಲ್ಲಿ 6 ಟಿ20 ಪಂದ್ಯಗಳನ್ನು ಆಡಲಿದೆ. ಅಕ್ಟೋಬರ್ 16 ರಿಂದ T20 ವಿಶ್ವಕಪ್ ಆರಂಭವಾಗಲಿದೆ. ಟೀಂ ಇಂಡಿಯಾದ ಸರಣಿ ಅಕ್ಟೋಬರ್ 11 ರಂದು ಕೊನೆಗೊಳ್ಳಲಿದೆ.ಅಂದರೆ 2 ವಾರದೊಳಗೆ ಎರಡು ಬಲಿಷ್ಠ ತಂಡಗಳನ್ನು ಎದುರಿಸಿ ಟೀಮ್ ಇಂಡಿಯಾ ಟಿ20 ವಿಶ್ವಕಪ್ ಗೆ ಹೋಗಲಿದೆ. ಈ ಮೂಲಕ ಆಸೀಸ್ ಪಿಚ್ ನಲ್ಲಿ ವೇಗ ಹಾಗೂ ಬೌನ್ಸರ್ ಎಸೆತಗಳನ್ನು ಎದುರಿಸಲು ಟೀಂ ಇಂಡಿಯಾ ತವರಿನಲ್ಲಿ ಮಾಸ್ಟರ್ ಪ್ಲಾನ್ ಮಾಡಿದೆ.

ಇದನ್ನೂ ಓದಿ : Sachin Tendulkar : ರಾಷ್ಟ್ರೀಯ ಕ್ರೀಡಾ ದಿನದಂದು ಟೆನಿಸ್ ಬಾಲ್ ಕ್ರಿಕೆಟ್ ಆಡಿದ ಸಚಿನ್ ತೆಂಡೂಲ್ಕರ್

ಇದನ್ನೂ ಓದಿ: Mithali Raj Join BJP : ಬಿಜೆಪಿ ಸೇರ್ತಾರಾ ಸ್ಟಾರ್ ಮಹಿಳಾ ಕ್ರಿಕೆಟರ್ ಮಿಥಾಲಿ ರಾಜ್ ?

T20 WC India Squad: 13 players of Team India confirmed for T20 World Cup

Comments are closed.