ಸೋಮವಾರ, ಏಪ್ರಿಲ್ 28, 2025
HomeSportsCricketAsia Cup 2023 : ಕೋಚ್ ಇಲ್ಲದೆ ಐರ್ಲೆಂಡ್ ಪ್ರವಾಸಕ್ಕೆ ತೆರಳಲಿದೆ ಟೀಮ್ ಇಂಡಿಯಾ, ಕಾರಣ...

Asia Cup 2023 : ಕೋಚ್ ಇಲ್ಲದೆ ಐರ್ಲೆಂಡ್ ಪ್ರವಾಸಕ್ಕೆ ತೆರಳಲಿದೆ ಟೀಮ್ ಇಂಡಿಯಾ, ಕಾರಣ ಗೊತ್ತೇ?

- Advertisement -

ಬೆಂಗಳೂರು: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ 5 ಪಂದ್ಯಗಳ ಟಿ20 ಸರಣಿಯ (Asia Cup 2023) 4ನೇ ಪಂದ್ಯ ಇಂದು (ಶನಿವಾರ) ಅಮೆರಿಕದ ಫ್ಲೋರಿಡಾದಲ್ಲಿ ನಡೆಯಲಿದೆ. ಸರಣಿಯಲ್ಲಿ ವೆಸ್ಟ್ ಇಂಡೀಸ್ 2-1ರ ಮುನ್ನಡೆಯಲ್ಲಿರುವುದರಿಂದ ಈ ಪಂದ್ಯ ಭಾರತಕ್ಕೆ ನಿರ್ಣಾಯಕವಾಗಿದೆ. ಸರಣಿಯ ಕೊನೆಯ ಪಂದ್ಯ ಭಾನುವಾರ ಫ್ಲೋರಿಯಾಡ ಲಾಡರ್‌ಹಿಲ್ ಮೈದಾನದಲ್ಲೇ ನಡೆಯಲಿದೆ.

ವಿಂಡೀಸ್ ವಿರುದ್ಧದ ಸರಣಿಯ ನಂತರ ಟೀಮ್ ಇಂಡಿಯಾ ಐರ್ಲೆಡ್ ಪ್ರವಾಸ ಕೈಗೊಳ್ಳಲಿದ್ದು, ಅಲ್ಲಿ ಆತಿಥೇಯರ ವಿರುದ್ಧ 3 ಪಂದ್ಯಗಳ ಟಿ20 ಸರಣಿಯನ್ನಾಡಲಿದೆ. ಐರ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಭಾರತ ತಂಡವನ್ನು ವೇಗಿ ಜಸ್ಪ್ರೀತ್ ಬುಮ್ರಾ ಮುನ್ನಡೆಸಲಿದ್ದು, ಕೆಲ ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದೆ. ಈ ಸರಣಿಯ ಮೂಲಕ 10 ತಿಂಗಳ ನಂತರ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಬುಮ್ರಾ ಕಂಬ್ಯಾಕ್ ಮಾಡಲಿದ್ದಾರೆ.

ವಿಂಡೀಸ್ ಸರಣಿಯ ನಂತರ ಏಷ್ಯಾ ಕಪ್‌ಗೆ ಸಜ್ಜಾಗಬೇಕಿರುವುದರಿಂದ ಟೀಮ್ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್, ಐರ್ಲೆಂಡ್ ಸರಣಿಗೆ ವಿಶ್ರಾಂತಿ ಪಡೆಯಲಿದ್ದಾರೆ. ದ್ರಾವಿಡ್ ಅನುಪಸ್ಥಿತಿಯಲ್ಲಿ ಈ ಹಿಂದೆ ಕೆಲ ಸರಣಿಗಳಿಗೆ ಟೀಮ್ ಇಂಡಿಯಾ ಕೋಚ್ ಆಗಿ ಕಾರ್ಯನಿರ್ವಹಿಸಿದ್ದ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ (National Cricket Academy – NCA) ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್ ಕೂಡ ಐರ್ಲೆಂಡ್ ಪ್ರವಾಸಕ್ಕೆ ಅಲಭ್ಯರಾಗಿದ್ದಾರೆ. ಹೀಗಾಗಿ ಹೆಡ್ ಕೋಚ್ ಇಲ್ಲದೆಯೇ ಐರ್ಲೆಂಡ್ ವಿರುದ್ಧ ಭಾರತ ಟಿ20 ಸರಣಿಯನ್ನಾಡಲಿದೆ. ಐರ್ಲೆಂಡ್ ವಿರುದ್ಧದ 3 ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯ ಆಗಸ್ಟ್ 18ರಂದು ನಡೆಯಲಿದೆ. ಇದನ್ನೂ ಓದಿ : Virat Kohli instagram post: ಒಂದು ಇನ್’ಸ್ಟಾಗ್ರಾಂ ಪೋಸ್ಟ್’ಗೆ 11.45 ಕೋಟಿ, ವರ್ಷಕ್ಕೆ 300 ಕೋಟಿ; ಇದೆಲ್ಲಾ ಸುಳ್ಳು ಅಂದಿದ್ದೇಕೆ ಕಿಂಗ್ ಕೊಹ್ಲಿ?

ಭಾರತ Vs ಐರ್ಲೆಂಡ್ ಟಿ20 ಸರಣಿಯ ವೇಳಾಪಟ್ಟಿ :
ಮೊದಲ ಟಿ20: ಆಗಸ್ಟ್ 18 (ಮಲಹೈಡ್ ಕ್ರಿಕೆಟ್ ಕ್ಲಬ್ ಮೈದಾನ, ಡುಬ್ಲಿನ್)
2ನೇ ಟಿ20: ಆಗಸ್ಟ್ 20 (ಮಲಹೈಡ್ ಕ್ರಿಕೆಟ್ ಕ್ಲಬ್ ಮೈದಾನ, ಡುಬ್ಲಿನ್)
3ನೇ ಟಿ20: ಆಗಸ್ಟ್ 23 (ಮಲಹೈಡ್ ಕ್ರಿಕೆಟ್ ಕ್ಲಬ್ ಮೈದಾನ, ಡುಬ್ಲಿನ್)

ಐರ್ಲೆಂಡ್ ವಿರುದ್ಧದ ಟಿ20 ಸರಣಿಯ ನಂತರ ಟೀಮ್ ಇಂಡಿಯಾ ಏಷ್ಯಾ ಕಪ್ ಟೂರ್ನಿಯಲ್ಲಿ ಆಡಲಿದೆ. ಏಷ್ಯಾ ಕಪ್ ಏಕದಿನ ಟೂರ್ನಿ (Asia Cup 2023) ಆಗಸ್ಟ್ 31ರಿಂದ ಸೆಪ್ಟೆಂಬರ್ 17ರವರೆಗೆ ಪಾಕಿಸ್ತಾನ ಮತ್ತು ಶ್ರೀಲಂಕಾದಲ್ಲಿ ನಡೆಯಲಿದೆ.

Asia Cup 2023: Team India is going to tour Ireland without a coach, do you know the reason?

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular