ಸಿರಾಜ್‌ ಮಾರಕ ದಾಳಿಗೆ ಶ್ರೀಲಂಕಾ ತತ್ತರ, 8ನೇ ಬಾರಿಗೆ ಏಷ್ಯಾಕಪ್‌ ಗೆದ್ದ ಭಾರತ

7 ಓವರ್ 6‌ ವಿಕೆಟ್‌ ಕೀಳುವ ಮೂಲಕ ಮೊಹಮ್ಮದ್‌ ಸಿರಾಜ್‌ (Mohammed Siraj ) ಏಷ್ಯಾಕಪ್‌ ಫೈನಲ್‌ (Asia Cup 2023 ) ಪಂದ್ಯದಲ್ಲಿ ಶ್ರೀಲಂಕಾ ಭಾರತ (india vs Srilanka) ವಿರುದ್ದ ಹೀನಾಯ ಸೋಲು ಕಂಡಿದೆ. ಈ ಮೂಲಕ ಎಂಟನೇ ಬಾರಿಗೆ ಭಾರತ ತಂಡ ಯಾವುದೇ ವಿಕೆಟ್‌ ನಷ್ಟವಿಲ್ಲದೇ ಏಷ್ಯಾಕಪ್‌ ಜಯಿಸಿದೆ. 

ಕೊಲಂಬೋ : ಭಾರತ ವೇಗದ ಬೌಲರ್‌ ಮೊಹಮ್ಮದ್‌ ಸಿರಾಜ್‌ ‌ (Mohammed Siraj ) ಬೆಂಕಿ ಬೌಲಿಂಗ್‌ಗೆ ಶ್ರೀಲಂಕಾ ತತ್ತರಿಸಿ ಹೋಗಿದೆ. ಏಷ್ಯಾಕಪ್‌ ಫೈನಲ್‌ (Asia Cup 2023 ) ಪಂದ್ಯದಲ್ಲಿ ಭಾರತ ವಿರುದ್ದ ಶ್ರೀಲಂಕಾ (india vs Srilanka) ಕೇವಲ 50 ರನ್‌ಗಳಿಗೆ ಆಲೌಟ್‌ ಆಗಿದ್ದು, ಭಾರತ 8ನೇ ಬಾರಿಗೆ ಏಷ್ಯಾಕಪ್‌ ಗೆದ್ದಿದೆ. 7ನೇ ಬಾರಿಗೆ ಏಷ್ಯಾಕಪ್‌ ಗೆಲ್ಲುವ ಕನಸಲ್ಲಿದ್ದ ಶ್ರೀಲಂಕಾ ತಂಡಕ್ಕೆ ನಿರಾಸೆಯಾಗಿದೆ.

Asia Cup 2023 Won Team India IND Vs SL Siraj best Bowling 6 wicket India won the Asia Cup for the 8th time
Image Credit :BCCI

ಕೊಲಂಬೋದ ಆರ್‌ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ಏಷ್ಯಾಕಪ್‌ ಫೈನಲ್‌ ಪಂದ್ಯದಲ್ಲಿ ಮೊದಲು ಟಾಸ್‌ ಗೆದ್ದ ಶ್ರೀಲಂಕಾ ತಂಡ ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡಿದೆ. ಫೈನಲ್‌ ಪಂದ್ಯದಲ್ಲಿ ಬೃಹತ್‌ ಗುರಿ ನೀಡುವ ವಿಶ್ವಾಸದಲ್ಲಿದ್ದ ಶ್ರೀಲಂಕಾ ತಂಡಕ್ಕೆ ಮೊಹಮ್ಮದ್‌ ಸಿರಾಜ್‌ ಆರಂಭದಲ್ಲೇ ಆಘಾತ ನೀಡಿದ್ದಾರೆ.

Asia Cup 2023 Won Team India IND Vs SL Siraj best Bowling 6 wicket India won the Asia Cup for the 8th time
Image Credit :BCCI

ಕುಶಲ್‌ ಪೆರೆರಾ ಎರಡು ಎಸೆತಕ್ಕೆ ಶೂನ್ಯ ಗಳಿಸಿದ್ದ ವೇಳೆಯಲ್ಲಿ ಜಸ್ಪ್ರಿತ್‌ ಬೂಮ್ರಾ ಎಸೆತದಲ್ಲಿ ಕೆಎಲ್‌ ರಾಹುಲ್‌ಗೆ ಕ್ಯಾಚ್‌ ನೀಡಿ ನಿರ್ಗಮಿಸಿದ್ರು. ನಂತರ 3 ರನ್‌ ಗಳಿಸಿದ್ದ ಪಿ ನಿಶಾಂಕ್‌ ಅವರನ್ನು ಮೊಹಮ್ಮದ್‌ ಸಿರಾಜ್‌ ಬಲಿ ಪಡೆದ್ರು. ನಿಶಾಂಕ್‌ ಬೆನ್ನಲ್ಲೇ ಸಮರವಿಕ್ರಮ ಶೂನ್ಯಕ್ಕೆ ವಿಕೆಟ್‌ ಒಪ್ಪಿಸಿದ್ದಾರೆ.

Asia Cup 2023 Won Team India IND Vs SL Siraj best Bowling 6 wicket India won the Asia Cup for the 8th time
Image Credit :BCCI

ಸಮರ ವಿಕ್ರಮ ನಂತರ ಕ್ರೀಸ್‌ಗೆ ಬಂದ ಅಸಲಂಕಾ ಶೂನ್ಯ ಸುತ್ತಿದ್ದಾರೆ. ನಂತರ ಉತ್ತಮವಾಗಿ ಆಡುತ್ತಿದ್ದ ಧನಂಜಯ ಡಿಸಿಲ್ವಾ ಕೂಡ 4 ರನ್‌ ಗೆ ವಿಕೆಟ್‌ ಒಪ್ಪಿಸಿದ್ದಾರೆ. ಮೊಹಮ್ಮದ್‌ ಸಿರಾಜ್‌ ಒಂದೇ ಓವರ್‌ನಲ್ಲಿ 4 ವಿಕೆಟ್‌ ಪಡೆಯುವ ಮೂಲಕ ಶ್ರೀಲಂಕಾವನ್ನು ಸಂಕಷ್ಟಕ್ಕೆ ಸಿಲುಕಿಸಿದ್ದಾರೆ.

Asia Cup 2023 Won Team India IND Vs SL Siraj best Bowling 6 wicket India won the Asia Cup for the 8th time
Image Credit : Bcci

ನಂತರ ಬಂದ ಶನಕ, ವೆಲ್ಲಲಗೆ, ದುಶ್ಯನ್‌ ಹೇಮಂತ್‌, ಮಧುಶನ, ಪರಿತರಣ ವಿಕೆಟ್‌ ಕೊಟ್ಟು ನಿರ್ಗಮಿಸಿದ್ದಾರೆ. ಶ್ರೀಲಂಕಾ ತಂಡ ಅಂತಿಮವಾಗಿ 15.6 ಓವರ್‌ಗಳಲ್ಲಿ 50  ರನ್‌ಗಳಿಗೆ ಆಲೌಟ್‌ ಆಗಿದೆ. ಭಾರತ ತಂಡದ ಪರ ಮೊಹಮ್ಮದ್‌ ಸಿರಾಜ್‌ 21ರನ್‌ಗಳಿಗೆ 6ವಿಕೆಟ್‌ ಪಡೆದುಕೊಂಡ್ರೆ, ಹಾರ್ದಿಕ್‌ ಪಾಂಡ್ಯ 3 ರನ್‌ ನೀಡಿ 3 ವಿಕೆಟ್‌ ಕಬಳಿಸಿದ್ದಾರೆ. ಇನ್ನು ಜಸ್ಪ್ರಿತ್‌ ಬೂಮ್ರಾ 23 ರನ್‌ ನೀಡಿ ಒಂದು ವಿಕೆಟ್‌ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ : ಬೆನ್‌ಸ್ಟೋಕ್ಸ್‌ ನಿವೃತ್ತಿ ವಾಪಾಸ್‌ ಬೆನ್ನಲ್ಲೇ ದಾಖಲೆಯ ಶತಕ : 6,6,6,6,6,6,6,6,6 ಸಿಕ್ಸರ್ 124 ಎಸೆತಕ್ಕೆ 182 ರನ್‌

ಶ್ರೀಲಂಕಾ ನೀಡಿದ್ದ 51ರನ್‌ ಗುರಿಯನ್ನು ಬೆನ್ನತ್ತಿದ ಭಾರತ ತಂಡ ಯಾವುದೇ ವಿಕೆಟ್‌ ನಷ್ಟವಿಲ್ಲದೇ ಗುರಿಯನ್ನು ತಲುಪಿದೆ. ರೋಹಿತ್‌ ಶರ್ಮಾ ಬದಲು ಇಶಾನ್‌ ಕಿಶನ್‌ ಹಾಗೂ ಶುಭಮನ್‌ ಗಿಲ್‌ ಜೋಡಿ ಕಣಕ್ಕೆ ಇಳಿದಿದ್ದು, ಭಾರತಕ್ಕೆ ಗೆಲುವು ತಂದುಕೊಟ್ರು. ಇಶಾನ್‌ ಕಿಶನ್‌ 18  ಎಸೆತಗಳಲ್ಲಿ  23 ರನ್‌ ಗಳಿಸಿದ್ರೆ, ಶುಭಮನ್‌ ಗಿಲ್‌ 19 ಎಸೆತಗಳಲ್ಲಿ 27 ರನ್‌ ಬಾರಿಸಿದ್ದಾರೆ.

ಇದನ್ನೂ ಓದಿ : ಏಷ್ಯಾ ಕಪ್ ಫೈನಲ್‌ IND V SL : ಭಾರತಕ್ಕೆ ಆನೆ ಬಲ : ಅಕ್ಷರ್‌ ಪಟೇಲ್‌ ಔಟ್‌, ಟಾಪ್‌ ಆಲ್‌ರೌಂಡರ್‌ ತಂಡಕ್ಕೆ ಸೇರ್ಪಡೆ

8 ನೇ ಬಾರಿಗೆ ಏಷ್ಯಾಕಪ್‌ ಗೆದ್ದ ಭಾರತ :

1984ರಲ್ಲಿ ಮೊದಲ ಬಾರಿಗೆ ಏಷ್ಯಾಕಪ್‌ ಪ್ರಶಸ್ತಿಯನ್ನು ಜಯಿಸಿರುವ ಭಾರತ ತಂಡ ನಂತರದಲ್ಲಿ ಒಟ್ಟು 8 ಬಾರಿ ಪ್ರಶಸ್ತಿಯನ್ನು ಪಡೆದುಕೊಂಡಿದೆ. 1998 , 1990, 1995, 2010, 2016 , 2018 ಹಾಗೂ 2023 ರಲ್ಲಿ ಏಷ್ಯಾಕಪ್‌ ಗೆಲ್ಲುವ ಮೂಲಕ ಅತೀ ಹೆಚ್ಚು ಏಷ್ಯಾಕಪ್‌ ಜಯಿಸಿದ ತಂಡ ಅನ್ನೋ ಖ್ಯಾತಿಗೆ ಪಾತ್ರವಾಗಿದೆ.

Asia Cup 2023 Won Team India IND Vs SL Siraj best Bowling 6 wicket India won the Asia Cup for the 8th time
Image Credit : BCCI

ಇನ್ನು ಶ್ರೀಲಂಕಾ ತಂಡ ಇದುವರೆಗೆ ಒಟ್ಟು 6 ಬಾರಿ ಏಷ್ಯಾಕಪ್‌ ವಿಜೇತ ತಂಡವಾಗಿ ಹೊರಹೊಮ್ಮಿದ್ರೆ, ಪಾಕಿಸ್ತಾನ ಕೇವಲ 2 ಬಾರಿ ಮಾತ್ರ ಏಷ್ಯಾಕಪ್‌ ಜಯಿಸಿದೆ. ಈ ಬಾರಿಯ ಏಷ್ಯಾ ಕಪ್‌ ನ್ನು ಪಾಕಿಸ್ತಾನ ಹಾಗೂ ಶ್ರೀಲಂಕಾ ತಂಡಗಳು ಜಂಟಿಯಾಗಿ ಆಯೋಜಿಸಿತ್ತು. ಏಕದಿನ ವಿಶ್ವಕಪ್‌ಗೂ ಮೊದಲೇ ಭಾರತ ಏಷ್ಯಾಕಪ್‌ ಗೆದ್ದಿರುವುದು ಆನೆಬಲ ಬಂದಂತಾಗಿದೆ.

Asia Cup 2023 Won Team India IND Vs SL Siraj best Bowling 6 wicket India won the Asia Cup for the 8th time

Comments are closed.