ದುಬೈ : ಏಷ್ಯನ್ ಬಾಕ್ಸಿಂಗ್ ಚಾಂಪಿಯನ್ ಶಿಪ್ ನಲ್ಲಿ 6 ಬಾರಿ ವಿಶ್ವ ಚಾಂಪಿಯನ್ ಆಗಿದ್ದ ಭಾರತದ ಮೇರಿ ಕೋಮ್ (51 ಕೆಜಿ) ಬೆಳ್ಳಿ ಪದಕ ಗೆದ್ದಿದ್ದಾರೆ. ಈ ಮೂಲಕ ಏಷ್ಯನ್ ಚಾಂಪಿಯನ್ಶಿಪ್ನಲ್ಲಿ 7ನೇ ಪದಕ ಪಡೆದ ಖ್ಯಾತಿಗೆ ಪಾತ್ರರಾಗಿದ್ದಾರೆ.
ಏಷ್ಯನ್ ಚಾಂಪಿಯನ್ಶಿಪ್ನ ಫೈನಲ್ ಪಂದ್ಯದಲ್ಲಿ ಕಜಕಿಸ್ತಾನದ ನಜಿಮ್ ಕಿಜೈಬಿ ಅವರ ವಿರುದ್ಧ ಸೋಲನ್ನು ಕಾಣುವ ಮೂಲಕ ಮೇರಿ ಕೋಮ್ ನಿರಾಶೆ ಅನುಭವಿಸಿದ್ದಾರೆ. ಚಾಂಪಿಯನ್ ಆದ ನಜಿಮ್ 10 ಸಾವಿರ ಯುಎಸ್ ಡಾಲರ್ ಹಾಗೂ ಬೆಳ್ಳಿ ಪದಕ ಪಡೆದ ಮೇರಿ ಕೋಮ್ 5000 ಯುಎಸ್ ಡಾಲರ್ ಬಹುಮಾನ ಮೊತ್ತವನ್ನು ಪಡೆದಿದ್ದಾರೆ.
ಮೊದಲ ಸುತ್ತಿನಲ್ಲಿ ಗೆಲುವು ಪಡೆದುಕೊಂಡಿದ್ದ, ಮೇರಿಕೋಮ್ 2ನೇ ಸುತ್ತಿನಲ್ಲಿ ಸೋಲು ಕಂಡರು. ಅಂತಿಮವಾಗಿ 2-3 ರ ಅಂತರದಲ್ಲಿ ಸೋಲು ಕಾಣುವ ಬೆಳ್ಳಿ ಪದಕಕ್ಕೆ ತೃಪ್ತಿ ಪಟ್ಟುಕೊಂಡಿದ್ದಾರೆ.