ವಿಮಾನ ದುರಂತಕ್ಕೆ ಹಾಲಿವುಡ್ ನಟ ಬಲಿ…! ಟಾರ್ಜನ್ ಖ್ಯಾತಿಯ ಜೋ ಲಾರಾ ಇನ್ನಿಲ್ಲ…!!

ಹಾಲಿವುಡ್ ಸಿನಿಮಾ ಹಾಗೂ ಕಿರುತೆರೆಯ ಕಾರ್ಯಕ್ರಮಗಳ ಮೂಲಕ ಪ್ರಸಿದ್ಧಿಗೆ ಬಂದಿದ್ದ ನಟ  ಜೋ ಲಾರಾ ವಿಮಾನ ದುರಂತದಲ್ಲಿ ಸಾವನ್ನಪ್ಪಿದ್ದಾರೆ. ಅಮೆರಿಕದ ಟಿನಸಿಯಲ್ಲಿ ಈ ದುರ್ಘಟನೆ ನಡೆದಿದ್ದು, ವಿಮಾನದಲ್ಲಿ ಜೋ ಲಾರಾ , ಅವರ ಪತ್ನಿ ಸೇರಿದಂತೆ 7 ಜನರು ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ.

https://kannada.newsnext.live/karnataka-108-108-ambulance-drivers-no-salary/

ಶನಿವಾರ ಮುಂಜಾನೆ ಈ ಘಟನೆ ನಡೆದಿದ್ದು,  ಅಮೆರಿಕದ ಟಿನಸಿ ವಿಮಾನ ನಿಲ್ದಾಣದಿಂದ ಹೊರಟ ಕೆಲವೇ ನಿಮಿಷಗಳಲ್ಲಿ ಈ ವಿಮಾನ ದುರಂತ ಸಂಭವಿಸಿದೆ.  58 ವರ್ಷದ ಜೋ ಲಾರಾ ಪತ್ನಿಹಾಗು ಸಹಾಯಕರೊಂದಿಗೆ ಪ್ರಯಾಣಿಸುತ್ತಿದ್ದರು.

https://kannada.newsnext.live/asian-boxing-champianship-mericom/

ಜೋಲಾರಾ ದಂಪತಿಗೆ ಇಬ್ಬರು ಮಕ್ಕಳಿದ್ದು, ಅವರ ಪತ್ನಿ ಡಯಶಿಯನ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ವಿಮಾನ ದುರಂತ ನಡೆಯುತ್ತಿದ್ದಂತೆ ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದರೂ ಪ್ರಯೋಜನವಾಗಿಲ್ಲ. ಅದಾಗಲೇ ವಿಮಾನದಲ್ಲಿದ್ದ ಎಲ್ಲರೂ ಸಾವನ್ನಪ್ಪಿದ್ದರು ಎಂದು ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.

https://kannada.newsnext.live/sandalwood-movie-title-contraversy-love-me-or-hate-me-darlingkrishna-rachitaram/

ಅಮೆರಿಕದ ಟಿವಿ ಸೀರಿಯಲ್,  ಟಾರ್ಜನ್ ದಿ ಎಪಿಕ್ ಅಡ್ವೆಂಚರ್ಸ್ ನಲ್ಲಿ ಟಾರ್ಜನ್ ಪಾತ್ರದ ಮೂಲಕ  ಜೋ ಲಾರಾ ಹೆಚ್ಚು ಪ್ರಸಿದ್ಧಿ ಪಡೆದಿದ್ದರು.  ಅಷ್ಟೇ ಅಲ್ಲ ಜೋ ಲಾರಾ ಸಂಗೀತಗಾರನಾಗಿ,ನಟನಾಗಿ,ಮಾರ್ಷಲ್ ಆರ್ಟ್ಸ್ ಕಲಾವಿದನಾಗಿ ಗುರುತಿಸಿಕೊಂಡಿದ್ದರು.

ಜೋ ಲಾರಾ ವಿಶ್ವದಾದ್ಯಂತ ಅಭಿಮಾನಿಗಳಿದ್ದು, ಈಗ ನಟನ ದುರಂತ ಸಾವಿಗೆ ಕಣ್ಣೀರು ಮಿಡಿಯುತ್ತಿದ್ದಾರೆ. ಟಾರ್ಜನ್ ವಿ ಮಿಸ್ ಯೂ ಎಂದು ಸೋಷಿಯಲ್ ಮೀಡಿಯಾದಲ್ಲಿ ತಮ್ಮ ದುಃಖ ಹಂಚಿಕೊಳ್ಳುತ್ತಿದ್ದಾರೆ.

Comments are closed.