ಮಂಗಳವಾರ, ಏಪ್ರಿಲ್ 29, 2025
HomeSportsT20 World Cup ಗೆದ್ದ ಸಂಭ್ರಮದಲ್ಲಿ ಶೂನಲ್ಲಿ ಬಿಯರ್‌ ಕುಡಿದ ಆಸ್ಟ್ರೇಲಿಯಾ ಆಟಗಾರರು : Video...

T20 World Cup ಗೆದ್ದ ಸಂಭ್ರಮದಲ್ಲಿ ಶೂನಲ್ಲಿ ಬಿಯರ್‌ ಕುಡಿದ ಆಸ್ಟ್ರೇಲಿಯಾ ಆಟಗಾರರು : Video Viral

- Advertisement -

ದುಬೈ : ನ್ಯೂಜಿಲೆಂಡ್‌ ತಂಡವನ್ನು ಸೋಲಿಸುವ ಮೂಲಕ ಆಸ್ಟ್ರೇಲಿಯಾ ತಂಡ ಚೊಚ್ಚಲ ಬಾರಿಗೆ ಟಿ೨೦ ವಿಶ್ವಕಪ್‌ (T20 World Cup) ತನ್ನದಾಗಿಸಿಕೊಂಡಿತ್ತು. ಡ್ರೆಸ್ಸಿಂಗ್‌ ರೂಮ್‌ನಲ್ಲಿ ಸಂಭ್ರಮಾಚರಣೆಯ ವೇಳೆಯಲ್ಲಿ ಆಸ್ಟ್ರೇಲಿಯಾದ ಖ್ಯಾತ ಆಟಗಾರರಾದ ಮಾರ್ಕಸ್‌ ಸ್ಟೊಯಿನಿಸ್‌ ಹಾಗೂ ಮ್ಯಾಥ್ಯೂ ವೇಡ್‌ ಶೂನಲ್ಲಿ ಬಿಯರ್‌ ಕುಡಿದಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ದುಬೈನಲ್ಲಿ ನಡೆದ ವಿಶ್ವಕಪ್‌ (T20 World Cup) ಪಂದ್ಯಾವಳಿಯ ಫೈನಲ್‌ ಪಂದ್ಯ ಹೆಚ್ಚು ರೋಚಕವಾಗಿತ್ತು. ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡಕ್ಕೆ ನ್ಯೂಜಿಲೆಂಡ್‌ ಭರ್ಜರಿ ಪ್ರದರ್ಶನವನ್ನು ನೀಡಿತ್ತು. ಆದ್ರೆ ಆಸ್ಟ್ರೇಲಿಯಾ ಆಟಗಾರರ ಉತ್ತಮ ಆಟದಿಂದಾಗಿ ಮೊದಲ ಬಾರಿಗೆ ವಿಶ್ವಕಪ್‌ ಟ್ರೋಫಿಯನ್ನು ಗೆದ್ದು ಬೀಗಿತ್ತು.

ಟ್ರೋಫಿ ಜಯಿಸಿ ಡ್ರೆಸ್ಸಿಂಗ್‌ ರೂಂ ಪ್ರವೇಶಿಸುತ್ತಿದ್ದಂತೆಯೇ ಆಟಗಾರರು ಸಂಭ್ರಮಾಚರಣೆಯನ್ನು ಆರಂಭಿಸಿದ್ದರು. ಬಿಯರ್‌ ಬಾಟಲ್‌ ಹಿಡಿದು ಕುಡಿದು ಸಂಭ್ರಮಿಸಿದ್ದಾರೆ. ಈ ವೇಳೆಯಲ್ಲಿ ಕುಳಿತಿದ್ದ ಮ್ಯಾರ್ಥ್ಯೂ ವೇಡ್‌ ಕಾಲಿನ ಶೂ ತೆಗೆದು ಅದರಲ್ಲಿ ಬಿಯರ್‌ ಹಾಕಿ ಕುಡಿದಿದ್ದಾರೆ. ಪಕ್ಕದಲ್ಲಿಯೇ ಇದ್ದ ಸ್ಟೊಯಿನಿಸ್‌ ವೇಡ್‌ ಶೂ ತೆಗೆದುಕೊಂಡು ಬಿಯರ್‌ ಕುಡಿಯುವ ಮೂಲಕ ಸಂಭ್ರಮಾಚರಣೆಯನ್ನು ನಡೆಸಿದ್ದಾರೆ. ಈ ಕುರಿತು ಐಸಿಸಿ ಟ್ವೀಟರ್‌ನಲ್ಲಿ ವಿಡಿಯೋ ಪೋಸ್ಟ್‌ ಮಾಡಿದೆ.

ಇದನ್ನೂ ಓದಿ : ಟಿ20 ವಿಶ್ವಕಪ್‌ ಗೆದ್ದ ಆಸ್ಟ್ರೇಲಿಯಾ : ಭಗ್ನವಾಯ್ತು ನ್ಯೂಜಿಲೆಂಡ್‌ ಕನಸು

ಇದನ್ನೂ ಓದಿ : ಹಾರ್ದಿಕ್ ಪಾಂಡ್ಯ, ಮುನಾಫ್ ಪಟೇಲ್, ರಾಜೀವ್‌ ಶುಕ್ಲ ವಿರುದ್ದ ಲೈಂಗಿಕ ಕಿರುಕುಳ ದೂರು ದಾಖಲು

( Australian Players Drink from Shoes to CelebrateT20 World Cup 2021 win video goes Viral )

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular