Mantri Mall : ಪ್ರತಿಷ್ಠಿತ ಮಂತ್ರಿ ಮಾಲ್ ಗೆ ಬಿತ್ತು ಬೀಗ : ಬಿಬಿಎಂಪಿ ನಿರ್ಧಾರಕ್ಕೆ ಕಾರಣ ಏನು ಗೊತ್ತಾ?

ಬೆಂಗಳೂರು : ಪ್ರತಿಷ್ಠಿತ ಶಾಪಿಂಗ್ ಸ್ಪಾಟ್ ಮಂತ್ರಿ ಮಾಲ್ ಗೆ (Mantri Mall) ಹೋಗಿ ಬರೋಣ ಅಂತ ನೀವು ಅಂದುಕೊಂಡಿದ್ರೇ ಒಂದೆರಡು ದಿನ ನಿಮ್ಮ ಪ್ಲ್ಯಾನ್ ಬದಲಾಯಿಸಿ ಕೊಳ್ಳಿ. ಯಾಕಂದ್ರೆ ಸದ್ಯ ಬೆಂಗಳೂರಿನ ಮಂತ್ರಿ ಮಾಲ್ ಗೆ ಬೀಗ ಬಿದ್ದಿದೆ.

ಹೀಗಾಗಿ ತೆರಿಗೆ ಪಾವತಿಸಲು ನೀಡಲಾದ ಗಡುವು ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಬಿಬಿಎಂಪಿ ಅಧಿಕಾರಿಗಳು‌ ಮತ್ತೆ ಮಂತ್ರಿ‌ಮಾಲ್ ಗೆ ಬೀಗ ಹಾಕಿದ್ದಾರೆ.ಬಿಬಿಎಂಪಿಗೆ 27 ಕೋಟಿ ತೆರಿಗೆ ಬಾಕಿ ಉಳಿಸಿಕೊಂಡ ಹಿನ್ನೆಲೆಯಲ್ಲಿ ಬಿಬಿಎಂಪಿ ಅಧಿಕಾರಿಗಳು ಮಂತ್ರಿ ಮಾಲ್ ಬಾಗಿಲು ಮುಚ್ಚಿಸಿದ್ದಾರೆ.

ಕಳೆದ ತಿಂಗಳು 35 ಕೋಟಿಗೂ ಅಧಿಕ‌ ಮೊತ್ತದ ತೆರಿಗೆ ಬಾಕಿ ಉಳಿಸಿಕೊಂಡ ಹಿನ್ನೆಲೆಯಲ್ಲಿ ಬೀಗ ಹಾಕಲಾಗಿತ್ತು. ಈ ವೇಳೆ ಮಂತ್ರಿ ಮಾಲ್ ಐದೂವರೆ ಕೋಟಿ ಚೆಕ್ ನೀಡಿತ್ತು .‌ಮಾತ್ರವಲ್ಲ ಉಳಿದ ತೆರಿಗೆ ಪಾವತಿಗೆ ಒಂದೂವರೆ ತಿಂಗಳು ಕಾಲಾವಕಾಶ ಕೋರಿತ್ತು. ಈಗ ಕಾಲಾವಕಾಶ ಮುಗಿದಿದ್ದರೂ ತೆರಿಗೆ ಪಾವತಿಸುವ ಲ್ಲಿ ಮಂತ್ರಿ ಮಾಲ್ ವಿಫಲವಾಗಿದೆ. ಹೀಗಾಗಿ ಬಿಬಿಎಂಪಿ ಕ್ರಮಕ್ಕೆ ಮುಂದಾಗಿದ್ದು ಬೀಗ ಹಾಕಲಾಗಿದೆ.

ಕಳೆದ ವರ್ಷವೂ ಮಂತ್ರಿ‌ಮಾಲ್ ತೆರಿಗೆ ಪಾವತಿಸಿರಲಿಲ್ಲ. ಕೇವಲ ಮಂತ್ರಿ ಮಾಲ್ ಮಾತ್ರವಲ್ಲ. ರಾಕ್ ಲೈನ್ ಒಡೆತನದ ಮಾಲ್ ಮೇಲೂ ತೆರಿಗೆ ವಂಚನೆ ಆರೋಪ ಕೇಳಿಬಂದಿತ್ತು.
ಮಾತ್ರವಲ್ಲ ವರ್ಷಗಳ ಕಾಲ ತೆರಿಗೆ ಪಾವತಿಸದ ಕಾರಣಕ್ಕೆ ರಾಕ್ ಲೈನ್ ಮಾಲ್ ಗೂ ಬೀಗ ಹಾಕಿದ್ದ ಬಿಬಿಎಂಪಿ ತೆರಿಗೆ ಕಟ್ಟಿದ ಬಳಿಕ ಬಾಗಿಲು ತೆರೆಯುವಂತೆ ಖಡಕ್ ಸಂದೇಶ ರವಾನಿಸಿತ್ತು.

ಇದನ್ನೂ ಓದಿ : ಬಿರಿಯಾನಿ ಆಸೆಗೆ 2 ಲಕ್ಷ ರೂಪಾಯಿ ಕಳೆದುಕೊಂಡ ಆಟೋ ಚಾಲಕ !

ಇದನ್ನೂ ಓದಿ : ಸಿಲಿಕಾನ್ ಸಿಟಿ ಜನರಿಗೆ ಅಟೋಶಾಕ್ : ಜೇಬಿಗೆ ಕತ್ತರಿ ಹಾಕಲಿದೆ ಮೀಟರ್

(BBMP to Lock the prestigious Mantri Mall )

Comments are closed.