ಪ್ರತಿಯೊಬ್ಬ ವ್ಯಕ್ತಿಯು ಯಾವುದಾದರೊಂದು ರೀತಿಯ ವ್ಯಾಯಾಮ ಅಭ್ಯಾಸ ಮಾಡಬೇಕು.ನಮ್ಮ ಹೃದಯದ ಆಗೋಗ್ಯಕ್ಕೆ ಫಿಸಿಕಲ್ ವರ್ಕ್ಔಟ್ ಅತ್ಯಗತ್ಯ . ಕೆಲವರು ಹೆಚ್ಚಿನ-ತೀವ್ರತೆಯ ವರ್ಕ್ಔಟ್ ಮಾಡಲು ಆಯ್ಕೆ ಮಾಡಬಹುದು ಆದರೆ ಇತರರು ಕಡಿಮೆ-ತೀವ್ರತೆಯ ವರ್ಕ್ಔಟ್ ಮಾಡಲು ಆಯ್ಕೆ ಮಾಡಬಹುದು. ಇವೆಲ್ಲವೂ ವ್ಯಕ್ತಿಯ ವೈಯಕ್ತಿಕ ಆಯ್ಕೆಯ ಮೇಲೆ ಅವಲಂಬಿತವಾಗಿರುತ್ತದೆ(Badminton Health Benefits).
ಬ್ಯಾಡ್ಮಿಂಟನ್ ಹೆಚ್ಚಿನ ತೀವ್ರತೆಯ ಕ್ರೀಡೆಯಾಗಿದೆ .ಒಬ್ಬ ವ್ಯಕ್ತಿಯು ತಮ್ಮ ದೈಹಿಕ ವ್ಯಾಯಾಮದ ಭಾಗವಾಗಿ ಬ್ಯಾಡ್ಮಿಂಟನ್ ಅನ್ನು ಆಡಬಹುದು. ಒಬ್ಬ ವ್ಯಕ್ತಿಯು ಬ್ಯಾಡ್ಮಿಂಟನ್ ಆಡಿದಾಗ, ಅವರ ಸಂಪೂರ್ಣ ದೇಹದ ಸ್ನಾಯುಗಳಿಗೆ ವರ್ಕ್ಔಟ್ ಆಗುತ್ತದೆ. ಹೀಗಾಗಿ ಇದು ಶರೀರಕ್ಕೆ ಉತ್ತಮ ವ್ಯಾಯಾಮ ಆಗಿದೆ .
ಬ್ಯಾಡ್ಮಿಂಟನ್ ಆಡುವುದು ನಿಮ್ಮ ದೇಹ ಮತ್ತು ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ
-ಬ್ಯಾಡ್ಮಿಂಟನ್ ಆಡುವುದರಿಂದ ನಿಮ್ಮ ದೇಹದ ಫ್ಲೆಕ್ಸಿಬಿಲಿಟಿ ಹೆಚ್ಚಿಸುತ್ತದೆ. ನೀವು ಬ್ಯಾಡ್ಮಿಂಟನ್ ಆಡುವಾಗ, ನಿಮ್ಮ ದೇಹದ ಎಲ್ಲ ಸ್ನಾಯುಗಳು ವಿಸ್ತರಿಸುತ್ತದೆ ಮತ್ತು ನಿಮ್ಮ ದೇಹದ ಫ್ಲೆಕ್ಸಿಬಿಲಿಟಿ ಹೆಚ್ಚಿಸಲು ಸಹಾಯ ಮಾಡುತ್ತದೆ. ಇದರಿಂದಾಗಿ ಗಾಯಗಳ ಸಾಧ್ಯತೆ ಕಡಿಮೆ ಆಗುತ್ತದೆ .
-ಇದು ನಿಮ್ಮ ಮೆಟಬೋಲಿಸಂ ಹೆಚ್ಚಿಸಲು ಸಹಾಯ ಮಾಡುತ್ತದೆ. ನೀವು ಬ್ಯಾಡ್ಮಿಂಟನ್ ಆಡುವಾಗ, ನೀವು ಬಹಳಷ್ಟು ಬೆವರುತ್ತೀರಿ, ಮತ್ತು ಹೆಚ್ಚು ಕ್ಯಾಲೊರಿ ಬರ್ನ್ ಮಾಡುತ್ತೀರಿ. ಇದರಿಂದಾಗಿ ದೇಹದಲ್ಲಿ ಆಮ್ಲಜನಕದ ಅಗತ್ಯಕ್ಕೆ ಕಾರಣವಾಗುತ್ತದೆ. ಆಮ್ಲಜನಕದ ಅಗತ್ಯವು ಹೆಚ್ಚಿನ ರಕ್ತ ಪರಿಚಲನೆಗೆ ಕಾರಣವಾಗುತ್ತದೆ ಮತ್ತು ನಿಮ್ಮ ದೇಹದ ಮೆಟಬೋಲಿಸಂ ಅನ್ನು ಹೆಚ್ಚಿಸುತ್ತದೆ.
-ಬ್ಯಾಡ್ಮಿಂಟನ್ ನಿಮ್ಮ ವೆಯಿಟ್ ಲಾಸ್ ಮಾಡಲು ತುಂಬಾ ಸಹಾಯ ಮಾಡುತ್ತದೆ. ನೀವು ಹೆಚ್ಚು ಬೆವರುವ ಕಾರಣ ಹೆಚ್ಚು ಕ್ಯಾಲೊರಿಗಳನ್ನು ಸಹ ಬರ್ನ್ ಮಾಡುತ್ತೀರಿ. ಬ್ಯಾಡ್ಮಿಂಟನ್ ಹೆಚ್ಚು ತೀವ್ರತೆಯ ಕ್ರೀಡೆಯಾಗಿರುವುದರಿಂದ ನೀವು ವೇಗವಾಗಿ ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ.
-ಇದು ಹೃದಯವನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ. ಬ್ಯಾಡ್ಮಿಂಟನ್ ಆಡುವುದರಿಂದ ನಿಮ್ಮ ರಕ್ತ ಪರಿಚಲನೆ ಹೆಚ್ಚಾಗುತ್ತದೆ ಇದರಿಂದಾಗಿ ಹೃದಯವು ರಕ್ತವನ್ನು ಅಧಿಕವಾಗಿ ಪಂಪ್ ಮಾಡುತ್ತದೆ ಮತ್ತು ಹೃದಯವನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ.
-ಇದು ಉತ್ತಮ ನಿದ್ರೆ ಪಡೆಯಲು ನಿಮಗೆ ಸಹಾಯ ಮಾಡುತ್ತದೆ. ನೀವು ಬ್ಯಾಡ್ಮಿಂಟನ್ ಆಡಿದಾಗ, ನೀವು ಹೆಚ್ಚು ಸುಸ್ತಾಗುವ ಸಾಧ್ಯತೆಯಿದೆ ಮತ್ತು ಆದ್ದರಿಂದ, ಉತ್ತಮ ನಿದ್ರೆ ಪಡೆಯುವಿರಿ.
ಇದನ್ನೂ ಓದಿ: Rainbow Diet : ರೈನ್ ಬೋ ಡಯಟ್ ಎಂದರೇನು? ಈ ಕಲರ್ ಫುಲ್ ಡಯಟ್ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ
( Badminton Health Benefits)