ಬೆಂಗಳೂರು: Women’s IPL 2023 : ಇಂಡಿಯನ್ ಪ್ರೀಮಿಯರ್ ಲೀಗ್ 15 ವರ್ಷಗಳನ್ನು ಪೂರೈಸಿ 16ನೇ ವರ್ಷಕ್ಕೆ ಕಾಲಿಡುತ್ತಿದ್ದು, ಇದೇ ಮೊದಲ ಬಾರಿ ಮಹಿಳಾ ಐಪಿಎಲ್ ಆಯೋಜಿಸಲು ಬಿಸಿಸಿಐ (BCCI) ಮುಂದಾಗಿದೆ. ಚೊಚ್ಚಲ ಆವೃತ್ತಿಯ ಮಹಿಳಾ ಐಪಿಎಲ್ ಟೂರ್ನಿ ಮುಂದಿನ ವರ್ಷದ ಮಾರ್ಚ್ ತಿಂಗಳಲ್ಲಿ ನಡೆಯಲಿದ್ದು, ಒಟ್ಟು 5 ತಂಡಗಳು ಕಾಣಿಸಿ ಕೊಳ್ಳಲಿವೆ. ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ಮಹಿಳಾ ಟಿ20 ವಿಶ್ವಕಪ್ ಟೂರ್ನಿ ಮುಂದಿನ ವರ್ಷದ ಫೆಬ್ರವರಿ 26ರಂದು ಕೊನೆಗೊಳ್ಳಲಿದ್ದು, ಇದರ ಬೆನ್ನಲ್ಲೇ ಭಾರತದಲ್ಲಿ ಮಹಿಳಾ ಐಪಿಎಲ್ ಟೂರ್ನಿ ಆರಂಭವಾಗಲಿದೆ.
ಮಹಿಳಾ ಐಪಿಎಲ್’ನಲ್ಲಿ ಒಟ್ಟು 22 ಪಂದ್ಯಗಳು ನಡೆಯಲಿದ್ದು, ಪ್ರತೀ ತಂಡಗಳಳಲ್ಲಿ ಗರಿಷ್ಠ 18 ಆಟಗಾರ್ತಿಯರಿಗೆ ಅವಕಾಶ ಕಲ್ಪಿಸಬಹುದಾಗಿದೆ. ಈ ಪೈಕಿ 6 ಮಂದಿ ವಿದೇಶಿ ಆಟಗಾರ್ತಿಯರಿಗಷ್ಟೇ ಅವಕಾಶ. ವಿಶೇಷ ಏನೆಂದರೆ ಪ್ಲೇಯಿಂಗ್ XIನಲ್ಲಿ ಐವರು ವಿದೇಶೀ ಆಟಗಾರ್ತಿಯರನ್ನು ಆಡಿಸಬಹುದಾಗಿದೆ. ಈ ಪೈಕಿ ನಾಲ್ವರು ಆಟಗಾರ್ತಿಯರು ಐಸಿಸಿಯ ಪೂರ್ಣ ಸದಸ್ಯತ್ವ ಹೊಂದಿದ ದೇಶದವರಾಗಿರಬೇಕು ಮತ್ತು ಒಬ್ಬ ಆಟಗಾರ್ತಿ ಐಸಿಸಿಯ ಅಸೋಸಿಯೇಟ್ ಸ್ಥಾನ ಪಡೆದ ರಾಷ್ಟ್ರದವರಾಗಿಬೇಕು. ಪುರುಷರ ಐಪಿಎಲ್’ನಲ್ಲಿ ನಾಲ್ವರು ವಿದೇಶಿ ಆಟಗಾರರಿಗಷ್ಟೇ ಪ್ಲೇಯಿಂಗ್ XIನಲ್ಲಿ ಅವಕಾಶವಿದೆ.
ಮಹಿಳಾ ಐಪಿಎಲ್’ನ ಲೀಗ್ ಹಂತದಲ್ಲಿ ಒಟ್ಟು 20 ಪಂದ್ಯಗಳು ನಡೆಯಲಿದ್ದು, ಅಗ್ರಸ್ಥಾನ ಪಡೆಯುವ ತಂಡ ನೇರ ಫೈನಲ್ ಪ್ರವೇಶಿಸಲಿದೆ. ಎರಡು ಹಾಗೂ 3ನೇ ಸ್ಥಾನ ಪಡೆಯುವ ತಂಡಗಳ ಮಧ್ಯೆ ಎಲಿಮಿನೇಟರ್ ಪಂದ್ಯ ನಡೆಯಲಿದ್ದು, ಅಲ್ಲಿ ಗೆಲ್ಲುವ ತಂಡ ಫೈನಲ್’ಗೆ ಎಂಟ್ರಿ ಕೊಡಲಿದೆ.
ಮೊದಲ ಆವೃತ್ತಿಯ ಮಹಿಳಾ ಐಪಿಎಲ್ (Women’s IPL 2023): ಕೀ ಪಾಯಿಂಟ್ಸ್
- 5 ತಂಡಗಳು
- 22 ಪಂದ್ಯಗಳು
- ಪ್ರತೀ ತಂಡದಲ್ಲಿ 18 ಆಟಗಾರ್ತಿಯರು
- ಪ್ರತೀ ತಂಡದಲ್ಲಿ ಗರಿಷ್ಠ 6 ವಿದೇಶಿ ಆಟಗಾರ್ತಿಯರು
- ಪ್ಲೇಯಿಂಗ್ XIನಲ್ಲಿ ಗರಿಷ್ಠ 5 ವಿದೇಶಿ ಆಟಗಾರ್ತಿಯರು
- ಲೀಗ್’ನಲ್ಲಿ ಒಟ್ಟು 20 ಪಂದ್ಯಗಳು
- ಲೀಗ್’ನಲ್ಲಿ ಅಗ್ರಸ್ಥಾನ ಪಡೆದ ತಂಡಕ್ಕೆ ನೇರ ಫೈನಲ್ ಅರ್ಹತೆ
- 2 ಹಾಗೂ 3ನೇ ಸ್ಥಾನ ಪಡೆದ ತಂಡಗಳ ಮಧ್ಯೆ ಎಲಿಮಿನೇಟರ್ ಪಂದ್ಯ
- ಎಲಿಮಿನೇಟರ್’ನಲ್ಲಿ ಗೆದ್ದ ತಂಡಕ್ಕೆ ಫೈನಲ್ ಟಿಕೆಟ್
ಇದನ್ನೂ ಓದಿ : T20 World Cup : ಕೆ.ಎಲ್ ರಾಹುಲ್ ಏಕಾಂಗಿ ಹೋರಾಟ ವ್ಯರ್ಥ, 2ನೇ ಅಭ್ಯಾಸ ಪಂದ್ಯದಲ್ಲಿ ಭಾರತಕ್ಕೆ ಸೋಲು
ಇದನ್ನೂ ಓದಿ : Super 10 League : ಕ್ರಿಕೆಟ್+ಸಿನಿಮಾ: ಕಿಚ್ಚನ ಸೂಪರ್ 10 ಲೀಗ್‌ನಲ್ಲಿ ಆಡಲಿದ್ದಾರೆ ವಿಂಡೀಸ್ ದೈತ್ಯ ಕ್ರಿಸ್ ಗೇಲ್
BCCI Set five Team Women’s IPL 2023 in March