ಶನಿವಾರ, ಏಪ್ರಿಲ್ 26, 2025
HomeSportsCricketಚಾಂಪಿಯನ್ಸ್ ಟ್ರೋಫಿ 2025 : ಕೆ.ಎಲ್. ರಾಹುಲ್ ಔಟ್, Playing XIನಲ್ಲಿ ಬಾರೀ ಬದಲಾವಣೆ

ಚಾಂಪಿಯನ್ಸ್ ಟ್ರೋಫಿ 2025 : ಕೆ.ಎಲ್. ರಾಹುಲ್ ಔಟ್, Playing XIನಲ್ಲಿ ಬಾರೀ ಬದಲಾವಣೆ

Champions Trophy 2025 IND vs AUS : ಭಾರತ ಮತ್ತು ಆಸ್ಟ್ರೇಲಿಯಾ ಎರಡೂ ತಂಡಗಳು ಚಾಂಪಿಯನ್ಸ್‌ ಟ್ರೋಫಿ ಪಂದ್ಯಾವಳಿಯಲ್ಲಿ ಅಜೇಯವಾಗಿ ಸೆಮಿಫೈನಲ್‌ ಹಂತಕ್ಕೆ ಎಂಟ್ರಿ ಕೊಟ್ಟಿವೆ. ಸದ್ಯ ಎರಡೂ ತಂಡಗಳು ಇದೀಗ ಫೈನಲ್‌ ಮೇಲೆ ಕಣ್ಣಿಟ್ಟಿವೆ.

- Advertisement -

ಚಾಂಪಿಯನ್ಸ್ ಟ್ರೋಫಿ 2025 (Champions Trophy 2025) ಸೆಮಿಫೈನಲ್‌ ಪಂದ್ಯದಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ (India vs Australia) ತಂಡಗಳು ಇಂದು ಮುಖಾಮುಖಿಯಾಗಲಿವೆ. ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ಭಾರತ ( Indian Cricket Team) ಮತ್ತು ಆಸ್ಟ್ರೇಲಿಯಾ ನಡುವೆ ಸೆಮಿಫೈನಲ್ ಪಂದ್ಯಕ್ಕೆ ಸಜ್ಜಾಗಿ ಭಾರತ ತಂಡದಲ್ಲಿ ಕೆಲವು ಬದಲಾವಣೆಗಳನ್ನು ನಿರೀಕ್ಷೆ ಮಾಡಬಹುದಾಗಿದೆ.

2023 ರ ವಿಶ್ವಕಪ್ ಫೈನಲ್‌ (World Cup Final) ಪಂದ್ಯದಲ್ಲಿ ಭಾರತ ಕ್ರಿಕೆಟ್‌ ತಂಡ ಆಸ್ಟ್ರೇಲಿಯಾ ವಿರುದ್ದ ಸೋಲು ಕಂಡಿತ್ತು. ಈ ಸೋಲಿಗೆ ಪ್ರತೀಕಾರ ತೀರಿಸಿಕೊಳ್ಳಲು ಭಾರತಕ್ಕೆ ಇಂದು ಉತ್ತಮ ಅವಕಾಶ. ಈ ಬಾರಿಯ ಚಾಂಪಿಯನ್ಸ್‌ ಟ್ರೋಫಿಯಲ್ಲಿ ಎರಡೂ ತಂಡಗಳು ಮೇಲ್ನೋಟಕ್ಕೆ ಬಲಿಷ್ಟವಾಗಿದೆ.

Champions Trophy 2025 IND vs AUS KL Rahul out, big change in India Playing XI in Kannada News
Image Credit to Original Source

ಭಾರತ ಮತ್ತು ಆಸ್ಟ್ರೇಲಿಯಾ ಎರಡೂ ತಂಡಗಳು ಚಾಂಪಿಯನ್ಸ್‌ ಟ್ರೋಫಿ ಪಂದ್ಯಾವಳಿಯಲ್ಲಿ ಅಜೇಯವಾಗಿ ಸೆಮಿಫೈನಲ್‌ ಹಂತಕ್ಕೆ ಎಂಟ್ರಿ ಕೊಟ್ಟಿವೆ. ಸದ್ಯ ಎರಡೂ ತಂಡಗಳು ಇದೀಗ ಫೈನಲ್‌ ಮೇಲೆ ಕಣ್ಣಿಟ್ಟಿವೆ. ಆದರೆ ಭಾರತ ಕ್ರಿಕೆಟ್‌ ತಂಡದಲ್ಲಿ ಕೆಲವು ಬದಲಾವಣೆಗಳನ್ನು ನಿರೀಕ್ಷಿಸಲಾಗುತ್ತಿದೆ.

ಕೆಎಲ್ ರಾಹುಲ್ ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್‌ ಗೆ ಇಳಿಯುತ್ತಿದ್ದ ಹೇಳಿಕೊಳ್ಳುವಂತಹ ಆಟ ಅವರ ಬ್ಯಾಟ್‌ ನಿಂದ ಬರುತ್ತಿಲ್ಲ. ಇನ್ನು ಕೀಪಿಂಗ್‌ ಕೂಡ ಹೇಳಿಕೊಳ್ಳುವಂತೆ ಕಾಣಿಸುತ್ತಿಲ್ಲ. ಒಂದೊಮ್ಮೆ ಭಾರತ ಕ್ರಿಕೆಟ್‌ ಮ್ಯಾನೇಜ್ಮೆಂಟ್‌ ಕೆಎಲ್‌ ರಾಹುಲ್‌ (KL Rahul) ಅವರನ್ನು ಕೈ ಬಿಟ್ಟು ರಿಷಬ್‌ ಪಂತ್‌ (Rishabh Pant) ಅವರನ್ನು ಇಂದಿನ ಪಂದ್ಯದಲ್ಲಿ ಆಡಿಸುವ ಸಾಧ್ಯತೆಯೂ ಇದೆ.

Also Read : IPL 2025 RCB : ಐಪಿಎಲ್‌ 2025 ಕ್ಕೆ ಆರ್‌ಸಿಬಿಯ ಅತ್ಯುತ್ತಮ ಪ್ಲೇಯಿಂಗ್ 11

ಇನ್ನು ಕಳೆದ ಪಂದ್ಯದಲ್ಲಿ ನ್ಯೂಜಿಲೆಂಡ್‌ ತಂಡಕ್ಕೆ ಸೋಲಿನ ರುಚಿ ತೋರಿಸಿರುವ ತಂಡವನ್ನೇ ಇಂದಿನ ಸೆಮಿಫೈನಲ್‌ ಪಂದ್ಯದಲ್ಲಿ ಕಣಕ್ಕೆ ಇಳಿಸುವ ಸಾಧ್ಯೆತೆಯೂ ಇದೆ. ಭಾರತ ತಂಡದಲ್ಲಿ ಇಂದಿನ ಪಂದ್ಯಕ್ಕೆ ಕನಿಷ್ಠ ಎರಡು ಬದಲಾವಣೆಗಳನ್ನು ನಿರೀಕ್ಷೆ ಮಾಡಲಾಗುತ್ತಿದೆ.

Champions Trophy 2025 IND vs AUS KL Rahul out, big change in India Playing XI in Kannada News
Image Credit to Original Source

ಇಂಗ್ಲೆಂಡ್ ಪ್ರವಾಸ ಮತ್ತು ಚಾಂಪಿಯನ್ಸ್ ಟ್ರೋಫಿಯ ಸಮಯದಲ್ಲಿ, ಕೋಚ್ ಗೌತಮ್ ಗಂಭೀರ್ ಅವರು ಕೆಎಲ್ ರಾಹುಲ್ ಬದಲಿಗೆ ಅಕ್ಷರ್ ಪಟೇಲ್ ಅವರನ್ನು 5 ನೇ ಸ್ಥಾನದಲ್ಲಿ ಕಳುಹಿಸಲು ಆದ್ಯತೆ ನೀಡಿದರು. ಇದಲ್ಲದೆ, ಕಳೆದ ಚಾಂಪಿಯನ್ಸ್ ಟ್ರೋಫಿ 2025 ರ ಕೆಲವು ಪಂದ್ಯಗಳಲ್ಲಿ ಅವರು ಹಲವಾರು ಕ್ಯಾಚ್‌ಗಳನ್ನು ಕೈಬಿಟ್ಟಿದ್ದರಿಂದ ಅವರ ಕೀಪಿಂಗ್ ಕೂಡ ಪರಿಣಾಮ ಬೀರಿದೆ.

Also Read : Virat Kohli : ಟೀಂ ಇಂಡಿಯಾಕ್ಕೆ ಭರ್ಜರಿ ಗುಡ್‌ನ್ಯೂಸ್‌ ಕೊಟ್ಟ ವಿರಾಟ್‌ ಕೊಹ್ಲಿ

ರಿಷಬ್‌ ಪಂತ್‌ ಯಾಕೆ ಬೇಕು ?

ಷಭ್ ಪಂತ್ ಅವರ ಸ್ಟ್ರೈಕ್ ರೇಟ್ 106.21ನಲ್ಲಿ ಬ್ಯಾಟಿಂಗ ನಡೆಸುತ್ತಿದ್ದಾರೆ.ಇದು ಆಸೀಸ್ ವಿರುದ್ಧ ಪಂದ್ಯಕ್ಕೆ ಅಗತ್ಯವಾಗಬಹುದು. ಕಿವೀಸ್‌ನಂತೆ, ಆಸ್ಟ್ರೇಲಿಯಾ ಅದ್ಭುತ ಫೀಲ್ಡಿಂಗ್ ಹೊಂದಿದೆ. ಹೀಗಾಗಿ ಭಾರತ ತಂಡಕ್ಕೆ ಒಂದೊಂದು ರನ್‌ ಕೂಡ ಹೆಚ್ಚು ಮಹತ್ವದ್ದಾಗಿದೆ. ಅದ್ರಲ್ಲೂ ಭಾರತ ತಂಡಕ್ಕೆ ಮಧ್ಯಮ ಕ್ರಮಾಂಕದಲ್ಲಿ ರಿಷಬ್‌ ಪಂತ್‌ ಫೀಟ್‌ ಅಂತಾ ಹಲವು ಅಭಿಪ್ರಾಯ ಪಡುತ್ತಿದ್ದಾರೆ.

Champions Trophy 2025 IND vs AUS KL Rahul out, big change in India Playing XI in Kannada News
Image Credit to Original Source

Champions Trophy 2025 : ಭಾರತ ಸಂಭಾವ್ಯ ಆಡುವ XI

ರೋಹಿತ್ ಶರ್ಮಾ (C), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಅಕ್ಷರ್ ಪಟೇಲ್, ಕೆಎಲ್ ರಾಹುಲ್ / ರಿಷಭ್ ಪಂತ್ (WK), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಕುಲದೀಪ್ ಯಾದವ್, ವರುಣ್ ಚಕ್ರವರ್ತಿ.

Champions Trophy 2025 IND vs AUS KL Rahul out, big change in India Playing XI in Kannada News

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular