ಚೀನಾದಲ್ಲಿ ಮರಣ ಮೃದಂಗ ಬಾರಿಸಿದ್ದ ಕೊರೊನಾ (ಕೋವಿದ್ -19) ವೈರಸ್ ದೇಶವನ್ನೂ ಕಾಡುತ್ತಿದೆ. ರಾಜ್ಯ, ಕೇಂದ್ರ ಸರಕಾರಗಳು ಕೊರೊನಾ ನಿಯಂತ್ರಣಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಆದರೆ ಕೊರೊನ ಪೀಡಿತರ ಸಮಖ್ಯೆ ಮಾತ್ರ ಹೆಚ್ಚುತ್ತಲೇ ಇದ್ದು, ಕೊರೊನಾ ಭೀತಿ ಇದೀಗ ಐಪಿಎಲ್ ಗೂ ತಟ್ಟಿದೆ. ಮಾರ್ಚ್ 29 ರಿಂದ ಆರಂಭಗೊಳ್ಳಲಿರೋ ಐಪಿಎಲ್ ಮುಂದೂಡಿಕೆಯಾಗುತ್ತೆ ಅನ್ನೋ ಮಾತುಗಳು ಹರಿದಾಡುತ್ತಿದೆ.

ದೇಶದ ಪ್ರಮುಖ ಸುದ್ದಿ ಸಂಸ್ಥೆ ಎಎನ್ ಐ ಕೂಡ ಐಪಿಎಲ್ ಮುಂದೂಡಿಕೆಯಾಗೋ ಸೂಚನೆಯನ್ನು ನೀಡಿದೆ. ಕೊರೊನಾ ಭೀತಿ ಹೆಚ್ಚುತ್ತಿರೋ ಹಿನ್ನೆಲೆಯಲ್ಲಿ ಗುಂಪು ಸೇರುವುದನ್ನು ಸಾಧ್ಯವಾದಷ್ಟು ನಿಯಂತ್ರಣ ಮಾಡಿ ಅಂತಾ ಕೇಂದ್ರ ಸರಕಾರ ಹೇಳುತ್ತಿದೆ.

ಇದೀಗ ಐಪಿಎಲ್ ಪಂದ್ಯಗಳಿಗೆ ಲಕ್ಷಾಂತರ ಮಂದಿ ಸೇರೋದ್ರಿಂದ ಕೊರೊನಾ ಸೋಂಕು ಹರಡುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಐಪಿಎಲ್ ಮುಂದೂಡಿಕೆಯಾಗುತ್ತೆ ಅನ್ನೋ ಸುದ್ದಿ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ.

ಮಾರ್ಚ್ 29ರಂದು ಮುಂಬೈನ್ ವಾಖಂಡೆ ಮೈದಾನದಲ್ಲಿ ಚೆನೈ ಸೂಪರ್ ಕಿಂಗ್ಸ್ ವಿರುದ್ದ ಮುಂಬೈ ಇಂಡಿಯನ್ಸ್ ಸೆಣೆಸಲಿದೆ. ಒಂದೆಡೆ ಐಪಿಎಲ್ ಪಂದ್ಯಾವಳಿಗೆ ತಂಡಗಳು ಸಜ್ಜಾಗುತ್ತಿವೆ. ಇದೀಗ ಕೊರೊನಾ ಭೀತಿ ಆಟಗಾರರನ್ನೂ ಕಾಡುತ್ತಿದೆ.

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಕೂಡ ಕೊರೊನಾ ಭೀತಿಯಿಂದ ಐಪಿಎಲ್ ಪಂದ್ಯಾವಳಿಯನ್ನು ಮುಂದೂಡಲು ಚಿಂತನೆ ನಡೆಸುತ್ತಿದೆ ಅನ್ನೋ ಸುದ್ದಿಯೂ ಹರಿದಾಡುತ್ತಿದೆ.

ಆದರೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಐಪಿಎಲ್ ಮುಂದೂಡಿಕೆಯ ಸೂಚನೆಯನ್ನು ಕೊಟ್ಟಿಲ್ಲ. ಐಪಿಎಲ್ ಪಂದ್ಯಗಳು ನಿಗದಿತ ಅವಧಿಯಲ್ಲಿಯೇ ನಡೆಯಲಿದೆ. ಆದರೆ ಕೊರೊನಾ ಮುನ್ನೆಚ್ಚರಿಕೆಯ ಕುರಿತು ಕೇಂದ್ರ ಸರಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ.

ಇನ್ನು ಐಪಿಎಲ್ ಪಂದ್ಯಗಳಿಗೆ ಕೊರೊನಾ ಎಫೆಕ್ಟ್ ಆಗದಂತೆ ಬಿಸಿಸಿಐ ಈಗಾಗಲೇ ಕೇಂದ್ರ ಆರೋಗ್ಯ ಇಲಾಖೆಯ ನೆರವು ಕೋರಿದೆ. ಹೀಗಾಗಿ ಈ ಬಾರಿ ಐಪಿಎಲ್ ಮುಂದೂಡಿಕೆಯಾಗೋ ಸಾಧ್ಯತೆ ತೀರಾ ಕಡಿಮೆ ಎನ್ನಲಾಗುತ್ತಿದ್ದು, ಕೊರೊನಾ ನಡುವಲ್ಲೇ ಮಾರ್ಚ್ 29ರಿಂದ ಐಪಿಎಲ್ ಹಬ್ಬ ಆರಂಭಗೊಳ್ಳಲಿದೆ.
