ನಾಪತ್ತೆಯಾಗಿದ್ದ ಶಂಕಿತ ಕೊರೊನಾ ವ್ಯಕ್ತಿ ಪತ್ತೆ ?

0

ಮಂಗಳೂರು : ವೆನ್ಲಾಕ್ ಆಸ್ಪತ್ರೆಯಿಂದ ನಾಪತ್ತೆಯಾಗಿರೊ ಶಂಕಿತ ಕೊರೊನಾ ವ್ಯಕ್ತಿ ಇದೀಗ ಸಂಬಂಧಿಕರ ಮನೆಗೆ ತೆರಳಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ. ಈ ಹಿನ್ನೆಲೆಯಲ್ಲಿ ಆರೋಗ್ಯಾಧಿಕಾರಿಗಳು ಶಂಕಿತ ವ್ಯಕ್ತಿಯ ಸಂಬಂಧಿಕರ ಊರಿಗೆ ತೆರಳಿದ್ದಾರೆ.

ನಿನ್ನೆ ದುಬೈನಿಂದ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ವ್ಯಕ್ತಿಗೆ ಶಂಕಿತ ಕೊರೊನಾ ಪತ್ತೆಯಾಗಿತ್ತು. ಹೀಗಾಗಿ ವ್ಯಕ್ತಿಯನ್ನು ಅಂಬುಲೆನ್ಸ್ ಮೂಲಕ ವೆನ್ಲಾಕ್ ಆಸ್ಪತ್ರೆಗೆ ಕರೆತಂದು ಚಿಕಿತ್ಸೆಯನ್ನು ಕೊಡಿಸಲಾಗಿತ್ತು. ಆದರೆ ಬೆಳಿಗ್ಗೆ ಕೊರೊನಾ ಶಂಕಿತ ವ್ಯಕ್ತಿ ಆಸ್ಪತ್ರೆಯಿಂದ ನಾಪತ್ತೆಯಾಗಿದ್ದ. ಈ ಕುರಿತು ವೈದ್ಯರು ಪಾಂಡೇಶ್ವರ ಠಾಣೆಯ ಪೊಲೀಸರಿಗೆ ದೂರು ನೀಡಿದ್ದರು.


ಈ ಹಿನ್ನೆಲೆಯಲ್ಲಿ ಪೊಲೀಸರು ಶಂಕಿತ ಕೊರೊನಾ ಪೀಡಿತ ವ್ಯಕ್ತಿಯ ಮನೆಯಲ್ಲಿ ವಿಚಾರಿಸಿದಾಗ ಆತ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನಲ್ಲಿರುವ ಸಂಬಂಧಿಕರ ಮನೆಯಲ್ಲಿ ಇರೋದು ಪತ್ತೆಯಾಗಿದೆ. ಇದೀಗ ಆರೋಗ್ಯಾಧಿಕಾರಿಗಳು ಬಂಟ್ವಾಳಕ್ಕೆ ತೆರಳಿದ್ದಾರೆ.

Leave A Reply

Your email address will not be published.