ಬೆಳೆದು ನಿಂತ ತೋಟವನ್ನ ಸರ್ವನಾಶ ಮಾಡಿಸಿದ್ರಾ ತಹಶೀಲ್ದಾರ್..?

0

ತುಮಕೂರು : ದೇವರ ಜಾತ್ರೆಗೆ ಜಾಗ ಕಡಿಮೆಯಾಗುತ್ತೆ ಅನ್ನೋ ಕಾರಣಕ್ಕೆ 30 ವರ್ಷಗಳಿಂದ ಕಷ್ಟಪಟ್ಟು ಬೆಳೆಸಿದ ತೋಟವನ್ನೇ ಕಡಿದು ಹಾಕಿರೋ ಘಟನೆ ತುಮಕೂರಿನ ಗುಬ್ಬಿಯಲ್ಲಿ ನಡೆದಿದೆ.

ಗುಬ್ಬಿ ತಾಲೂಕಿನ ತಿಪ್ಪೂರು ಗ್ರಾಮದ ಸಣ್ಣ ಕೆಂಪಯ್ಯ ಮತ್ತು ಸಿದ್ದಮ್ಮ ದಂಪತಿಗಳಿಗೆ ಗ್ರಾಮದ ಉಡಸಲಮ್ಮ ದೇವಸ್ಥಾನದಿಂದ ಸುಮಾರು 5.18 ಎಕರೆ ಜಮೀನುನನ್ನು ಉಡುಗೊರೆಯಾಗಿ ನೀಡಲಾಗಿತ್ತು. ದೇವಸ್ಥಾನದ ಅರ್ಚಕರಾಗಿದ್ದ ಸಣ್ಣ ಕೆಂಪಯ್ಯ ಮತ್ತು ಸಿದ್ದಮ್ಮ ದಂಪತಿಗಳು ಕಳೆದ 30 ವರ್ಷಗಳಿಂದಲೂ ಜಾಗದಲ್ಲಿ ತೆಂಗು, ಅಡಿಕೆ, ಬಾಳೆ ಬೆಳೆದು ಕುಟುಂಬ ಜೀವನ ಸಾಗಿಸುತ್ತಿತ್ತು.

ಆದರೆ ದೇವರ ಜಾತ್ರೆಗೆ ಜಾಗ ಸಾಕಾಗೋದಿಲ್ಲಾ ಅಂತಾ ಸಾರ್ವಜನಿಕರಿಂದ ದೂರು ಬಂದ ಮೇರೆಗೆ ಗುಬ್ಬಿ ತಹಶೀಲ್ದಾರ್ ಮಮತಾ ತೋಟವನ್ನು ಉರುಳಿಸಲು ಆದೇಶ ಹೊರಡಿಸಿದ್ದಾರೆ. ತಹಶೀಲ್ದಾರ್ ಆದೇಶ ನೀಡುತ್ತಿದ್ದಂತೆಯೇ ಗ್ರಾಮ ಲೆಕ್ಕಿಗ ಮುರುಳು ಯಾವುದೇ ನೋಟಿಸ್ ಅನ್ನೂ ನೀಡದೇ ಏಕಾಏಕಿಯಾಗಿ ಫಸಲಿಗೆ ಬಂದಿದ್ದ ತೋಟಕ್ಕೆ ನುಗ್ಗಿ 150 ಅಡಿಕೆ, 20 ತೆಂಗು ಮತ್ತು ಬಾಳೆ ಗಿಡಗಳನ್ನು ನೆಲಕ್ಕುರುಳಿಸಿದ್ದಾರೆ.

ಸಣ್ಣ ಕೆಂಪಯ್ಯ ಮತ್ತು ಸಿದ್ದಮ್ಮ ಕುಟುಂಬ ಉಡುಸಲಮ್ಮ ದೇವಸ್ಥಾನದ ಅರ್ಚಕರಾಗಿ ಕೆಲಸ ಮಾಡುತ್ತಿದ್ದುದರಿಂದ ಈ ಕುಟುಂಬಕ್ಕೆ ದೇವಸ್ಥಾನದಿಂದಲೇ ಜಾಗವನ್ನು ಕೊಡುಗೆಯಾಗಿ ನೀಡಲಾಗಿತ್ತು.

ಈ ನಡುವೆ ಸಣ್ಣ ಕೆಂಪಯ್ಯ ಮತ್ತು ಸಿದ್ದಮ್ಮರ ನಡುವೆ ಜಮೀನು ಹಂಚಿಕೆಯಲ್ಲಿ ವಿಚಾರದಲ್ಲಿ ವಿವಾದ ಉಂಟಾಗಿತ್ತು. ಇದರ ಲಾಭ ಪಡೆದುಕೊಂಡ ತಾಲೂಕಾ ಆಡಳಿತ ಏಕಾಏಕಿ ತೋಟವನ್ನು ಉರುಳಿಸಿದೆ ಎಂದು ಆರೊಪಿಸಲಾಗಿದೆ.

Leave A Reply

Your email address will not be published.