ಇಂಡಿಯನ್ ಪ್ರೀಮಿಯರ್ ಲೀಗ್‌ಗೆ ಇದೀಗ ಕೋವಿಡ್ ಕಾಟ ಶುರುವಾಗಿದೆ. ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ತಂಡದ ಆಟಗಾರರು ಇದೀಗ ಕೋವಿಡ್ ಸೋಂಕಿಗೆ ತುತ್ತಾಗಿದ್ದಾರೆ. ಹೀಗಾಗಿ ಪಂಜಾಬ್ ವಿರುದ್ದ ನಡೆಯಲಿರುವ ಪಂದ್ಯವನ್ನು ಈಗಾಗಲೇ ಪುಣೆಯಿಂದ ಮುಂಬೈಗೆ ಶಿಫ್ಟ್ ಮಾಡಲಾಗಿದೆ. ಇನ್ನೊಂದೆಡೆಯಲ್ಲಿ ತಂಡ ದಲ್ಲಿಯೂ ಹಲವು ಬದಲಾವಣೆಯನ್ನು ಮಾಡಿಕೊಳ್ಳಲಾಗಿದೆ. ತಂಡದ ಖ್ಯಾತ ಆಲ್‌ರೌಂಡರ್ ಇದೀಗ ಹೊರ ಬಿದ್ದಿರುವುದು ನಾಯಕ ರಿಷಬ್ ಪಂತ್ ತಲೆನೋವಿಗೆ ಕಾರಣವಾಗಿದೆ.
ಕಳೆದ ಎರಡು ವರ್ಷಗಳಂತೆ ಈ ಬಾರಿಯೂ ಕೋವಿಡ್ ವೈರಸ್ ಸೋಂಕು ಐಪಿಎಲ್ ಮೇಲೆ ಕಾರ್ಮೋಡ ಕವಿದಿದೆ. BCCI ತನ್ನ ಮೇಲ್‌ನಲ್ಲಿ COVID-19 ಗೆ ಧನಾತ್ಮಕ ಪರೀಕ್ಷೆ ಮಾಡಿದ ದೆಹಲಿ ಕ್ಯಾಪಿಟಲ್ಸ್ ತಂಡದ ಐದು ಸದಸ್ಯರ ಹೆಸರನ್ನು ಬಿಡುಗಡೆ ಮಾಡಿದೆ. ಪ್ಯಾಟ್ರಿಕ್ ಫರ್ಹತ್ – ಫಿಸಿಯೋಥೆರಪಿಸ್ಟ್ (ಏಪ್ರಿಲ್ 15 ರಂದು ಧನಾತ್ಮಕ ಪರೀಕ್ಷೆ), ಚೇತನ್ ಕುಮಾರ್ – ಸ್ಪೋರ್ಟ್ಸ್ ಮಸಾಜ್ ಥೆರಪಿಸ್ಟ್ (ಏಪ್ರಿಲ್ 16 ರಂದು ಧನಾತ್ಮಕ ಪರೀಕ್ಷೆ) ಸೇರಿದ್ದಾರೆ. ಮಿಚೆಲ್ ಮಾರ್ಷ್ – ಆಟಗಾರ (ಏಪ್ರಿಲ್ 18 ರಂದು ಧನಾತ್ಮಕ ಪರೀಕ್ಷೆ), ಡಾ ಅಭಿಜಿತ್ ಸಾಲ್ವಿ – ತಂಡದ ವೈದ್ಯರು (ಏಪ್ರಿಲ್ 18 ರಂದು ಧನಾತ್ಮಕ ಪರೀಕ್ಷೆ) ಮತ್ತು ಆಕಾಶ್ ಮಾನೆ – ಸಾಮಾಜಿಕ ಮಾಧ್ಯಮ ವಿಷಯ ತಂಡದ ಸದಸ್ಯ (ಏಪ್ರಿಲ್ 18 ರಂದು ಧನಾತ್ಮಕ ಪರೀಕ್ಷೆ). ಎಲ್ಲಾ ಸಕಾರಾತ್ಮಕ ಸದಸ್ಯರನ್ನು ಪ್ರತ್ಯೇಕವಾಗಿ ಇರಿಸಲಾಗಿದೆ ಮತ್ತು ಇಡೀ ಡಿಸಿ ತುಕಡಿಯು ಬುಧವಾರ ಬೆಳಿಗ್ಗೆ ಆರ್‌ಟಿ-ಪಿಸಿಆರ್ ಪರೀಕ್ಷೆಗೆ ಒಳಗಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಪುಣೆಯಿಂದ ಮುಂಬೈಗೆ ಪಂದ್ಯವನ್ನು ಶಿಫ್ಟ್ ಮಾಡಲಾಗಿದ್ದು, ಆಟಗಾರರನ್ನು ಬಸ್ಸಿನ ಮೂಲಕ ಸ್ಥಳಾಂತರ ಮಾಡಲಾಗಿದೆ. ಆದರೆ ಈ ವೇಳೆಯಲ್ಲಿ ಯಾವುದೇ ರೀತಿಯಲ್ಲಿಯೂ ಕೋವಿಡ್ ಸೋಂಕು ಹರಡದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಡೆಲ್ಲಿ ಕ್ಯಾಫಿಟಲ್ಸ್ ತಂಡದ ಸದಸ್ಯರನ್ನು ಈಗಾಗಲೇ ಕೋವಿಡ್ ಟೆಸ್ಟ್‌ಗೆ ಒಳಪಡಿಸಲಾಗಿದೆ. ಕೋವಿಡ್ ಪಾಸಿಟಿವ್ ಬಂದಿರುವ ಆಟಗಾರರು ಹಾಗೂ ಸಿಬ್ಬಂದಿಗಳನ್ನೂ ಈಗಾಗಲೇ ಪ್ರತ್ಯೇಕವಾಗಿ ಇರಿಸಲಾಗಿದೆ.
ಏಪ್ರಿಲ್ 16 ರಂದು ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಕೋವಿಡ್ ತಪಾಸಣೆಗೆ ಒಳಪಡಿಸಲಾಗಿದ್ದು, ಏಪ್ರಿಲ್ 19 ರಂದು ನಡೆಸಲಾದ 4 ನೇ ಸುತ್ತಿನ ಆರ್‌ಟಿ-ಪಿಸಿಆರ್ ಪರೀಕ್ಷೆಯಲ್ಲಿ ಹಲವು ಆಟಗಾರರ ವರದಿಯು ನೆಗೆಟಿವ್ ಬಂದಿದೆ. ದೆಹಲಿ ಕ್ಯಾಪಿಟಲ್ಸ್ ತಂಡವು ಏಪ್ರಿಲ್ 20 ರಂದು ಬೆಳಿಗ್ಗೆ ಮತ್ತೊಂದು ಸುತ್ತಿನ ಆರ್‌ಟಿ-ಪಿಸಿಆರ್ ಪರೀಕ್ಷೆಗೆ ಒಳಗಾಗಿದೆ ಎಂದು ಬಿಸಿಸಿಐ ಅಧಿಕೃತ ಪ್ರಕಟಣೆ ತಿಳಿಸಿದೆ.
UPDATE:
— Delhi Capitals (@DelhiCapitals) April 19, 2022
The #DCvPBKS match scheduled for tomorrow, 20th April, has been shifted to the Brabourne Stadium, Mumbai from MCA Stadium, Pune in light of the recent COVID-19 cases in the camp.
The entire contingent will undergo another round of RT-PCR testing on Wednesday morning. pic.twitter.com/EgZojafHLQ
ಇದನ್ನೂ ಓದಿ : IPL 2022 ಪ್ರವೇಶಿಸಿದ ಭಾರತದ ವೇಗದ ಬೌಲರ್ ಇಶಾಂತ್ ಶರ್ಮಾ
ಇದನ್ನೂ ಓದಿ : ಐಪಿಎಲ್‌ಗೆ ಸುರೇಶ್ ರೈನಾ ಎಂಟ್ರಿ : ದೀಪಕ್ ಚಹರ್ ಬದಲು ಚೆನ್ನೈಗೆ ಸ್ಟಾರ್ ಆಲ್‌ರೌಂಡರ್
Covid cases in Delhi Capitals team, BCCI made big change in IPL 2022