ಬರ್ಮಿಂಗ್‌ಹ್ಯಾಮ್ : (CWG 2022 India Women ) ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭರ್ಜರಿ ಆಟದ ಪ್ರದರ್ಶನ ನೀಡುತ್ತಿದ್ದ ಭಾರತೀಯ ಮಹಿಳಾ ಕ್ರಿಕೆಟ್ ತಂಡ ಫೈನಲ್ ನಲ್ಲಿ ಮುಗ್ಗರಿಸಿದೆ. ಆಸ್ಟ್ರೇಲಿಯಾ ವಿರುದ್ದದ ಫೈನಲ್ ಪಂದ್ಯದಲ್ಲಿ ಅಬ್ಬರದ ಆಟದ ನಡುವಲ್ಲೇ ಟೀಂ ಇಂಡಿಯಾ ಸೋಲು ಕಂಡಿದೆ. ಈ ಮೂಲಕ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಗೆದ್ದ ಸಾಧನೆಯನ್ನು ಮಾಡಿದ್ದಾರೆ.
ಮೊದಲು ಬ್ಯಾಟಿಂಗ್ ನಡೆಸಿದ್ದ ಆಸ್ಟ್ರೇಲಿಯಾ ತಂಡ ನೀಡಿದ್ದ 161 ರನ್‌ಗಳ ಗುರಿಯನ್ನ ಬೆನ್ನಟ್ಟಿದ ಭಾರತ ತಂಡ ಕೇವಲ 152 ಆಲೌಟ್ ಆಗುವ ಮೂಲಕ ಸೋಲಿಗೆ ಶರಣಾಗಿದೆ. ಆರಂಭದಿಂದಲೂ ಸಮಬಲದ ಹೋರಾಟವನ್ನೇ ನೀಡುತ್ತಲೇ ಬಂದಿದ್ದ ಟೀಂ ಇಂಡಿಯಾ, ಅಂತಿಮ ಹಂತದಲ್ಲಿ ಸೋಲಿಗೆ ಶರಣಾಗಿದೆ.
ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಆಸ್ಟ್ರೇಲಿಯಾ ಮಹಿಳಾ ತಂಡದ ಪರ ಮೂನಿ(61), ಲ್ಯಾನಿಂಗ್(36), ಗಾರ್ಡನರ್(25), ಹೇನ್ಸ್(18) ರನ್ ನೆರವಿನಿಂದ ಆಸ್ಟ್ರೇಲಿಯಾ ತಂಡ 161 ರನ್ ಗಳಿಸಿತ್ತು. ಭಾರತ ಮಹಿಳಾ ಕ್ರಿಕೆಟ್ ತಂಡದ ಪರ ರೇಣುಕಾ ಸಿಂಗ್(2), ಸ್ನೇಹ ರಾಣಾ(2) ದೀಪ್ತಿ ಶರ್ಮಾ, ರಾಧಾ ಯಾದವ್ ತಲಾ ಒಂದು ವಿಕೆಟ್ ಪಡೆದಿದ್ದರು.
Congratulations on bagging the SILVER at #CWG2022. We are proud of you 👏👏 pic.twitter.com/8bU8BJZMEY
— BCCI Women (@BCCIWomen) August 7, 2022
ನಂತರ ಆಸ್ಟ್ರೇಲಿಯಾ ತಂಡ ನೀಡಿದ ಗುರಿಯನ್ನು ಬೆನ್ನತ್ತಿದ್ದ ಭಾರತ ತಂಡದ ಪರ ನಾಯಕಿ ಹರ್ಮನ್‌ಪ್ರೀತ್ ಕೌರ್ ಜವಾಬ್ದಾರಿಯುತ ಆಟವಾಡಿ 65 ರನ್ ಗಳಿಸಿದ್ರು. ಆದರೆ ಉತ್ತಮ ಆಟವಾಡುತ್ತಿದ್ದ ಜೆಮಿಯಾ ರೋಡ್ರಿಗಸ್ 33 ರನ್‌ಗಳಿಗೆ ವಿಕೆಟ್ ಒಪ್ಪಿಸಿದ್ರು. ಭರವಸೆಯ ಆಲ್‌ರೌಂಡರ್ ಆಟಗಾರ್ತಿ ದೀಪ್ತಿ ಶರ್ಮಾ ಅವರ ಆಟ ಕೇವಲ 13 ರನ್‌ಗಳಿಗೆ ಸೀಮಿತವಾಯ್ತು. ಆಸ್ಟ್ರೇಲಿಯಾ ತಂಡದ ಪರ ಮೇಗನ್ ಶುಟ್(2), ಡಾರ್ಸಿ ಬ್ರೌನ್(10) ಹಾಗೂ ಡಾರ್ಸಿ ಬ್ರೌನ್(3) ವಿಕೆಟ್ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ : KL Rahul offers special Pooja ಘಾಟಿ ಸುಬ್ರಹ್ಮಣ್ಯನಿಗೆ ವಿಶೇಷ ಪೂಜೆ ಸಲ್ಲಿಸಿದ ಕ್ರಿಕೆಟಿಗ ಕೆ.ಎಲ್.ರಾಹುಲ್
CWG 2022 Australia Women Won By 9 runs Against India Women Final Match