ind vs wi t20 : ವೆಸ್ಟ್‌ ಇಂಡಿಸ್‌ ವಿರುದ್ದ ಸರಣಿ ಗೆದ್ದ ಟೀಂ ಇಂಡಿಯಾ

ಕೋಲ್ಕತ್ತಾ : ವೆಸ್ಟ್‌ ಇಂಡಿಸ್‌ ವಿರುದ್ದದ (ind vs wi t20) ಮೂರು ಪಂದ್ಯಗಳ T20 ಸರಣಿಯನ್ನು ರೋಹಿತ್‌ ಶರ್ಮಾ ನೇತೃತ್ವದ ಟೀಂ ಇಂಡಿಯಾ ಕ್ಲೀನ್‌ ಸ್ವೀಪ್‌ ಮಾಡಿದೆ. ವಿರಾಟ್‌ ಕೊಹ್ಲಿ, ರಿಷಬ್‌ ಪಂತ್‌, ಕೆ.ಎಲ್.ರಾಹುಲ್‌ ಅನುಪಸ್ಥಿತಿಯಲ್ಲಿಯೂ ಭಾರತ ಅಂತಿಮ T20 ಪಂದ್ಯದಲ್ಲಿ ಅದ್ಬುತ ಪ್ರದರ್ಶನ ನೀಡಿದೆ. ಸೂರ್ಯಕುಮಾರ್‌ ಯಾದವ್‌ ಅವರ ಆಕರ್ಷಕ ಅರ್ಧ ಶತಕ ಹಾಗೂ ಹರ್ಷಲ್‌ ಪಟೇಲ್‌ ಉತ್ತಮ ಬೌಲಿಂಗ್‌ ನೆರವಿನಿಂದ ಭಾರತ ತಂಡ 17ರನ್‌ಗಳ ಗೆಲುವು ದಾಖಲಿಸಿದೆ. ಈ ಮೂಲಕ ಮೂರು ಪಂದ್ಯಗಳ ಸರಣಿಯನ್ನು ೩-೦ ಅಂತರದಿಂದ ಜಯಿಸಿದೆ.

ಕೋಲ್ಕತ್ತಾದ ಈಡನ್‌ ಗಾರ್ಡನ್ಸ್‌ ಮೈದಾನದಲ್ಲಿ ನಡೆದ ಮೂರನೇ T20 ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಭಾರತ ತಂಡಕ್ಕೆ ಆರಂಭಿಕ ಆಟಗಾರ ರುತುರಾಜ್‌ ಗಾಯಗ್ವಾಡ್‌ ನಿರಾಸೆ ಮೂಡಿಸಿದ್ರು. ಕೇವಲ 4 ರನ್‌ ಗಳಿಸಿದ್ದಾ ರುತುರಾಜ್‌ ವಿಕೆಟ್‌ ಒಪ್ಪಿಸುತ್ತಿದ್ದಂತೆಯೇ, ಇಶಾನ್‌ ಕಿಶನ್‌ಗೆ ಜೊತೆಯಾದ ಶ್ರೇಯಸ್‌ ಅಯ್ಯರ್‌ 53 ರನ್‌ಗಳ ಜೊತೆಯಾಟ ನೀಡಿದ್ರು. ಶ್ರೇಯಸ್‌ ಅಯ್ಯರ್‌ 25ರನ್‌ಗಳಿಗೆ ವಿಕೆಟ್‌ ಒಪ್ಪಿಸಿದ್ರೆ ನಂತರದ ಓವರ್‌ನಲ್ಲಿ ೩೪ರನ್‌ ಗಳಿಸಿದ್ದ ಇಶಾನ್‌ ಕಿಶನ್‌ ಕೂಡ ಔಟಾಗಿ ಫೆವಿಲಿಯನ್‌ ಹಾದಿ ಹಿಡಿದಿದ್ರು.

ನಾಯಕ ರೋಹಿತ್‌ ಶರ್ಮಾ ನಿರಾಸೆ ಮೂಡಿಸಿದ್ರು. 7 ರನ್‌ ಗಳಿಸಿ ರೋಹಿತ್‌ ಶರ್ಮಾ ಔಟಾಗುತ್ತಲೇ, ಕ್ರೀಸ್‌ಗೆ ಬಂದ ಸೂರ್ಯ ಕುಮಾರ್‌ ಯಾದವ್‌ ಹಾಗೂ ವೆಂಕಟೇಶ್‌ ಅಯ್ಯರ್‌ ಜೋಡಿ ಉತ್ತಮ ಆಟದ ಪ್ರದರ್ಶನ ನೀಡಿದ್ದಾರೆ. ಕೇವಲ 31 ಎಸೆತಗಳಲ್ಲಿ ಸೂರ್ಯಕುಮಾರ್‌ ಯಾದವ್‌ 65 ರನ್‌ ಸಿಡಿಸಿದ್ರೆ, ವೆಂಕಟೇಶ್‌ ಅಯ್ಯರ್‌ 19 ಎಸೆತಗಳಲ್ಲಿ 35 ರನ್‌ ಬಾರಿಸುವ ಮೂಲಕ 20 ಓವರ್‌ ಗಳಲ್ಲಿ 5 ವಿಕೆಟ್‌ ಕಳೆದುಕೊಂಡು 184 ರನ್‌ ಬಾರಿಸಿದೆ.

ಭಾರತ ನೀಡಿದ ಸವಾಲಿನ ಬೆನ್ನತ್ತಿದ್ದ ವೆಸ್ಟ್‌ ಇಂಡಿಸ್‌ ತಂಡಕ್ಕೆ ದೀಪಕ್‌ ಚಹಾರ್‌ ಆರಂಭದಲ್ಲೇ ಆಘಾತ ನೀಡಿದ್ರು. ತಂಡದ ಮೊತ್ತ 26 ರನ್‌ ಆಗುವಷ್ಟರಲ್ಲಿಯೇ ಆರಂಭಿಕ ಆಟಗಾರರಾದ ಕೈಲೆ ಮೇಯರ್ಸ್‌ ಹಾಗೂ ಶಿಹೋಪ್‌ ಫೆವಿಲಿಯನ್‌ ಹಾದಿಹಿಡಿದಿದ್ದರು. ನಂತರ ನಿಕೋಲಸ್‌ ಪೂರಾನಾ ಹಾಗೂ ರೋಮನ್‌ ಪೋವೆಲ್‌ ಉತ್ತಮ ಜೊತೆಯಾಟ ವಾಡಿದ್ದಾರೆ. ಆದರೆ ಹರ್ಷಲ್‌ ಪಟೇಲ್‌ 25 ರನ್‌ ಗಳಿಸಿದ್ದ ರೋಮನ್‌ ಪೊವೆಲ್‌ ರನ್ನು ಬಲಿ ಪಡೆದ್ರೆ, ವೆಂಕಟೇಶ್‌ ಅಯ್ಯರ್‌ ಪೊಲಾರ್ಡ್‌ ಹಾಗೂ ಹೋಲ್ಡರ್‌ ಅವರನ್ನು ಎರಡಂಕಿ ದಾಟುವ ಮೊದಲೇ ಬಲಿ ಪಡೆದ್ರು. ರೋಸ್ಟರ್‌ ಚೇಸ್‌ ಹಾಗೂ ಶೇಫ್‌ ಯಾರ್ಡ್‌ ಗೆಲುವಿನ ಆಸೆ ಮೂಡಿಸಿದ್ರು ಕೂಡ ಹರ್ಷಲ್‌ ಪಟೇಲ್‌ ಅವಕಾಶವನ್ನೇ ನೀಡಲಿಲ್ಲ. ಅಂತಿಮವಾಗಿ ವೆಸ್ಟ್‌ ಇಂಡಿಸ್‌ ತಂಡ 20 ಓವರ್‌ಗಳಲ್ಲಿ 9 ವಿಕೆಟ್‌ ಕಳೆದುಕೊಂಡು ಕೇವಲ 167 ರನ್‌ಗಳಿಸಲಷ್ಟೇ ಶಕ್ತವಾಯಿತು.

ಸಂಕ್ಷಿಪ್ತ ಸ್ಕೋರ್‌ :

ಭಾರತ ತಂಡ : ಸೂರ್ಯ ಕುಮಾರ್‌ ಯಾದವ್‌ 65, ವೆಂಕಟೇಶ್‌ ಅಯ್ಯರ್‌ 35, ಇಶಾನ್‌ ಕಿಶನ್‌ 34 , ಶ್ರೇಯಸ್‌ ಅಯ್ಯರ್‌ 25, ಹೋಲ್ಡರ್‌ 29/1,ಶೇಫ್ ಯಾರ್ಡ್‌ 50/1, ರೋಸ್ಟರ್‌ ಚೇಸ್‌ 23/1, ವಾಲ್ಶ್‌ 30/1, ಡ್ರೇಕ್ಸ್‌ 37/1.

ವೆಸ್ಟ್‌ ಇಂಡಿಸ್‌ ತಂಡ : ನಿಕೋಲಸ್‌ ಪೂರನಾ 61, ಶೇಫ್‌ಯಾರ್ಡ್‌ 29, ರೋಮನ್‌ ಪೊವೆಲ್‌ 25, ರೋಸ್ಟ್‌ ಚೇಸ್‌ 12 , ಹರ್ಷಲ್‌ ಪಟೇಲ್‌ 22/3, ವೆಂಕಟೇಶ್‌ ಅಯ್ಯರ್‌ 23/2, ಶಾರ್ದೂಲ್‌ ಠಾಕೂರ್‌ 33/2, ದೀಪಕ್‌ ಚಹರ್‌ 15/2

ಇದನ್ನೂ ಓದಿ : WWE ರಣರೋಚಕ ಹೋರಾಟಕ್ಕೆ ಕ್ಷಣಗಣನೆ; ಎಲಿಮಿನೇಷನ್ ಚೇಂಬರ್ ಪಂದ್ಯಗಳನ್ನು ಎಲ್ಲಿ ನೋಡಬಹುದು?

ಇದನ್ನೂ ಓದಿ : IPL 2022 RCB captain : ಆರ್‌ಸಿಬಿಗೆ ಯಾರು ನಾಯಕ : ಹೇಗಿರಲಿದೆ ಗೊತ್ತಾ ತಂಡ

(India Whitewash West Indies Following 17Run Win In Third And Final T20I)

Comments are closed.