ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಐಪಿಎಲ್ ( ಇಂಡಿಯನ್ ಪ್ರೀಮಿಯರ್ ಲೀಗ್)ಗೆ ವಿವಾಯ ಹೇಳಲಿದ್ದಾರೆ ಅನ್ನೋ ಮಾತುಗಳು ಹರಿದಾಡುತ್ತಿದೆ. ಈ ನಡುವಲ್ಲೇ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಧೋನಿ ತಮ್ಮ ರಾಜೀನಾಮೆಯ ಬಗ್ಗೆ ಮಾತನಾಡಿದ್ದು, ಚೆನ್ನೈನಲ್ಲೇ ನಿವೃತ್ತನಾಗಲಿದ್ದೇನೆ ಎಂದಿದ್ದಾರೆ.

ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಅದ್ಬುತ ಪ್ರದರ್ಶನ ನೀಡುತ್ತಿದೆ. ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ತಂಡ ಈಗಾಗಲೇ ಫ್ಲೇ ಆಪ್ ಪ್ರವೇಶಿಸಿದ್ದು ಐಪಿಎಲ್ ಟ್ರೋಫಿ ಮೇಲೆ ಕಣ್ಣಿಟ್ಟಿದೆ. ಆದರೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಧೋನಿ ವಿದಾಯದ ಮಾತು ಕೇಳಿಬರುತ್ತಿದ್ದು, ಈ ಬಗ್ಗೆ ಸ್ಪಷ್ಟನೆ ನೀಡುವ ಕಾರ್ಯವನ್ನು ಮಾಡಿದ್ದಾರೆ.

ಸಂವಾದ ಕಾರ್ಯಕ್ರಮವೊಂದರಲ್ಲಿ ಧೋನಿ ತಮ್ಮ ಅಭಿಮಾನಿಗಳ ಜೊತೆಗೆ ಸಂವಾದ ನಡೆಸಿದ್ದಾರೆ. ಈ ವೇಳೆಯಲ್ಲಿ ನನ್ನ ಕೊನೆಯ ಪಂದ್ಯ ಚೆನ್ನೈನಲ್ಲಿ ನಡೆಯಬಹುದು. ಅದುವೇ ವಿದಾಯ ಪಂದ್ಯವಾಗಿರಲಿದೆ. ನನ್ನನ್ನು ಬೀಳ್ಕೊಡಲು ನಿಮಗೂ ಅವಕಾಶ ದೊರೆಯಲಿದೆ. ಅಲ್ಲದೇ ಅಭಿಮಾನಿಗಳನ್ನೂ ಭೇಟಿ ಯಾಗಲೂ ಅವಕಾಶ ದೊರೆಯಲಿದೆ ಎಂದು ಧೋನಿ ಹೇಳಿದ್ದಾರೆ.
ಇದನ್ನೂ ಓದಿ : 1 ಗಂಟೆಯಲ್ಲಿ ಸೋಲ್ಡೌಟ್ ಆಯ್ತು ಭಾರತ – ಪಾಕ್ ಪಂದ್ಯದ ಟಿಕೆಟ್

ಮಹೇಂದ್ರ ಸಿಂಗ್ ಧೋನಿ ಚೆನ್ನೈನಲ್ಲಿಯೇ ವೃತ್ತಿ ಜೀವನಕ್ಕೆ ವಿದಾಯ ಹೇಳುವುದಾಗಿ ಘೋಷಿಸಿದ್ದಾರೆ. ಹೀಗಾಗಿ ಧೋನಿ ಮುಂದಿನ ಋತುವಿನಲ್ಲಿಯೂ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನೇ ಪ್ರತಿನಿಧಿಸುವ ಸಾಧ್ಯತೆ ದಟ್ಟವಾಗಿದೆ.
ಇದನ್ನೂ ಓದಿ : ಕಾಮನ್ವೆಲ್ತ್ ಗೇಮ್ಸ್ ನಿಂದ ಹಿಂದೆ ಸರಿದ ಭಾರತದ ಹಾಕಿ ತಂಡ
( Mahindra Singh Dhoni is a retired, farewell CSK Captain in Chennai )