ತಲಕಾವೇರಿ ತೀರ್ಥೋದ್ಭವ : ಭಕ್ತರಿಗೆ ಮುಕ್ತ ಅವಕಾಶ ಕಲ್ಪಿಸಿದ ಸರಕಾರ

ಮಡಿಕೇರಿ : ತಲಕಾವೇರಿ ತೀರ್ಥೋದ್ಭವ ನೋಡಲು ಬಯಸುವ ಭಕ್ತರಿಗೆ ಸರ್ಕಾರ ಸಿಹಿ ಸುದ್ದಿಯೊಂದನ್ನು ನೀಡಿದೆ. ಕೊರೊನಾ ವೈರಸ್‌ ಸೋಂಕಿನ ಹಿನ್ನೆಲೆಯಲ್ಲಿ ಕಳೆದ ಬಾರಿ ತಲಕಾವೇರಿ ತೀರ್ಥೋದ್ಭವಕ್ಕೆ ಭಕ್ತರಿಗೆ ನಿರ್ಬಂಧ ಹೇರಲಾಗಿತ್ತು. ಆದ್ರೆ ಈ ಬಾರಿ ತೀರ್ಥೋದ್ಭವಕ್ಕೆ ಆಗಮಿಸುವ ಭಕ್ತರಿಗೆ ಸರ್ಕಾರ ಮುಕ್ತ ಅವಕಾಶ ನೀಡಿದೆ

ಕಾವೇರಿ ನದಿಯ ಉಗಸ್ಥಾನವಾಗಿರುವ ತಲಕಾವೇರಿಯಲ್ಲಿ ಅಕ್ಟೋಬರ್‌ 17ರ ಮಧ್ಯಾಹ್ನ 1.11ಕ್ಕೆ ತೀರ್ಥೋದ್ಭವಕ್ಕೆ ಆಗಮಿಸುವ ಭಕ್ತರಿಗೆ ಮುಕ್ತ ಅವಕಾಶ ನೀಡಲಾಗಿದೆ. ಭಕ್ತರು ಕೋವಿಡ್‌ ನೆಗೆಟಿವ್‌ ರಿಪೋರ್ಟ್‌ ತರಬೇಕಾಗಿಲ್ಲ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

ಇದನ್ನೂ ಓದಿ: Karnataka Weather Report : ಕರ್ನಾಟಕದಲ್ಲಿ ಎರಡು ದಿನ ಭಾರೀ ಮಳೆ: ಯೆಲ್ಲೋ ಅಲರ್ಟ್‌, ಆರೆಂಜ್‌ ಅಲರ್ಟ್‌ ಘೋಷಣೆ

ಮಡಿಕೇರಿಯಲ್ಲಿ ಮಾತನಾಡಿದ ಸಚಿವರು, ಭಕ್ತರ ಭಾವನೆಗಳಿಗೆ ಗೌರವ ಕೊಟ್ಟು ಅವಕಾಶ ನೀಡಿದ್ದೇವೆ. ತಲಕಾವೇರಿಗೆ ವಾಹನಗಳ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ. ಭಕ್ತರ ಕೋವಿಡ್‌ ನೆಗೆಟಿವ್‌ ರಿಪೋರ್ಟ್‌ ತರಬೇಕಾಗಿಲ್ಲ. ತಲಕಾವೇರಿಗೆ ಕಾಲ್ನಡಿಗೆಯಲ್ಲಿ ಭಕ್ತರು ತೆರಳಬೇಕಾಗಿಲ್ಲ. ಆದ್ರೆ, ಮಾಸ್ಕ್‌ ಧರಿಸಿ, ದೈಹಿಕ ಅಂತರವನ್ನ ಪಾಲಿಸಬೇಕು ಎಂದು ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಕೋವಿಡ್‌ನಿಂದ ಮೃತಪಟ್ಟ ಅನಾಥರಿಗೆ ಮುಕ್ತಿ ದೊರಕಿಸಿದ ಸಚಿವ ಆರ್.‌ ಅಶೋಕ್‌

(The government is open to devotees who want to see Talakaveri)

Comments are closed.