ಮುಂಬೈ : ಟೀಂ ಇಂಡಿಯಾ ನಾಯಕ ವಿರಾಟ್ ಕೊಯ್ಲಿ ಅಧಿಕಾರ ತ್ಯೆಜಿಸಲು ಸಜ್ಜಾಗುತ್ತಿದ್ದಂತೆಯೇ ರೋಹಿತ್ ಶರ್ಮಾ ಹೆಸರು ಕೇಳಿಬಂದಿದೆ. ಅದ್ರಲ್ಲೂ ಸೈಲೆಂಟ್ ಮ್ಯಾನ್, ಐಪಿಎಲ್ ಹಿರೋ ಟೀಂ ಇಂಡಿಯಾದ ನಾಯಕನಾಗೋದು ಬಹುತೇಕ ಖಚಿತ.
ವಿಶ್ವಶ್ರೇಷ್ಟ ಬ್ಯಾಟ್ಸಮನ್ ಆಗಿರುವ ವಿರಾಟ್ ಕೊಯ್ಲಿ ಬ್ಯಾಟಿಂಗ್‌ನತ್ತ ಹೆಚ್ಚು ಗಮನ ಹರಿಸುವ ನಿಟ್ಟಿನಲ್ಲಿ ಟೀಂ ಇಂಡಿಯಾದ ನಾಯಕ ಸ್ಥಾನದಿಂದ ಕೆಳಗಿಳಿಯಲು ಮುಂದಾಗಿ ದ್ದಾರೆ. ಮೂರು ಮಾದರಿಯ ಕ್ರಿಕೆಟ್ ತಂಡಕ್ಕೆ ನಾಯಕನಾಗೋದು ಸವಾಲಿನ ಕೆಲಸ. ಹೀಗಾಗಿಯೇ ಟೆಸ್ಟ್ ಹೊರತು ಪಡಿಸಿ, ಏಕದಿನ ಹಾಗೂ ಟಿ೨೦ ತಂಡದ ನಾಯಕತ್ವವನ್ನು ತ್ಯೆಜಿಸಲಿದ್ದಾರೆ. ಹೀಗಾಗಿ ಟೀಂ ಇಂಡಿಯಾದ ಮುಂದಿರುವ ಆಯ್ಕೆ ಹಿಟ್ ಮ್ಯಾನ್ ರೋಹಿತ್ ಶರ್ಮಾ.
ಈಗಾಗಲೇ ಟಿ೨೦ ಹಾಗೂ ಏಕದಿನ ತಂಡದ ಉಪನಾಯಕನಾಗಿರುವ ರೋಹಿತ್ ಶರ್ಮಾ ನಾಯಕನಾಗಿಯೂ ಟೀಂ ಇಂಡಿಯಾವನ್ನು ಮುನ್ನಡೆಸಿದ್ದಾರೆ. ಅದ್ರಲ್ಲೂ ಐಪಿಎಲ್ ಪಂದ್ಯಾವಳಿಯಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ರೋಹಿತ್ ಶರ್ಮಾ ಮುನ್ನೆಡೆಸಿದ ರೀತಿ ಇಂದು ಟೀಂ ಇಂಡಿಯಾದ ನಾಯಕನ ಪಟ್ಟ ಕಟ್ಟುವವರೆಗೂ ತಂದು ನಿಲ್ಲಿಸಿದೆ.
ಐಪಿಎಲ್ ಪಂದ್ಯಾವಳಿಯಲ್ಲಿ ರೋಹಿತ್ ಶರ್ಮಾ ಅತೀ ಹೆಚ್ಚು ಬಾರಿ ಪ್ರಶಸ್ತಿಯನ್ನು ಗೆದ್ದ ನಾಯಕ ಅನ್ನೋ ದಾಖಲೆ ಬರೆದಿದ್ದಾರೆ. ರೋಹಿತ್ ನಾಯಕತ್ವ ವಹಿಸಿಕೊಂಡ ನಂತರದಲ್ಲಿ ಮುಂಬೈ ಇಂಡಿಯನ್ಸ್ ತಂಡ 2013, 2015, 2017, 2019 ಮತ್ತು 2020 ಚಾಂಪಿಯನ್ ಆಗಿ ಹೊರಹೊಮ್ಮಿದೆ. ಅದ್ರಲ್ಲೂ 2013 ರಲ್ಲಿ ಹರ್ಭಜನ್ ಸಿಂಗ್ ಅವರಿಂದ ನಾಯಕತ್ವ ವಹಿಸಿಕೊಂಡ ನಂತರದಲ್ಲಿ ತಂಡವನ್ನು ಚಾಂಪಿಯನ್ ಆಗಿ ಮಾಡಿದ್ದರು.
ಐಪಿಎಲ್ ಪಂದ್ಯಾವಳಿಯ ಪೈಕಿ ರೋಹಿತ್ ಶರ್ಮಾ ಅವರ ನಾಯಕತ್ವದಲ್ಲಿ ಮುಂಬೈ ಇಂಡಿಯನ್ಸ್ ತಂಡ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೂ ಸೋಲಿನ ರುಚಿ ಪಾಠ ಕಲಿಸಿದ್ದರು. 2013 ರಿಂದ 2020 ರವರೆಗೆ, ರೋಹಿತ್ ಶರ್ಮಾ ನಾಯಕತ್ವದಲ್ಲಿ ಮುಂಬೈ ಇಂಡಿಯನ್ಸ್ ತಂಡ 5 ಬಾರಿ ಐಪಿಎಲ್ ಚಾಂಪಿಯನ್ಸ್ ಆಗಿದ್ರೆ, 8 ಆವೃತ್ತಿಗಳಲ್ಲಿ 6 ಬಾರಿ ಪ್ಲೇಆಫ್ ಪ್ರವೇಶಿಸಿದ ಸಾಧನೆಯನ್ನು ಮಾಡಿದೆ.
ವಿರಾಟ್ ಕೊಯ್ಲಿ ಅನುಪಸ್ಥಿತಿಯಲ್ಲಿ 2018 ರಲ್ಲಿ ದುಬೈನಲ್ಲಿ ನಡೆದ ಏಷ್ಯಾಕಪ್‌ನಲ್ಲಿ ಜಯವನ್ನು ಒಳಗೊಂಡಂತೆ ಅವರ ನಾಯಕತ್ವದಲ್ಲಿ ಭಾರತ 10 ಏಕದಿನ ಪಂದ್ಯಗಳಲ್ಲಿ 8 ಗೆದ್ದಿದೆ. ಟಿ 20 ಐ ಕ್ರಿಕೆಟ್ ನಲ್ಲಿ ಕ್ಯಾಪ್ಟನ್ ಆಗಿ ಅವರ ದಾಖಲೆ ಇನ್ನೂ ಅತ್ಯುತ್ತಮವಾಗಿದೆ. ಭಾರತವು ರೋಹಿತ್ ನಾಯಕತ್ವದಲ್ಲಿ 19 ಪಂದ್ಯಗಳಲ್ಲಿ 15 ಪಂದ್ಯಗಳನ್ನು ಗೆದ್ದಿದೆ. ಇವುಗಳಲ್ಲಿ 2018 ರಲ್ಲಿ ಶ್ರೀಲಂಕಾದಲ್ಲಿ ನಡೆದ ನಿದಹಾಸ್ ತ್ರಿಕೋನ ಸರಣಿಯ ವಿಜಯಗಳು ಮತ್ತು 2018 ರಲ್ಲಿ ಸ್ವದೇಶದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 3-0 ಸರಣಿ ಸ್ವೀಪ್ ಸೇರಿವೆ.
ಇದನ್ನು ಓದಿ : ವಿರಾಟ್ ಕೊಹ್ಲಿ ಅಭಿಮಾನಿಗಳಿಗೆ ಶಾಕ್ : ರೋಹಿತ್ ಶರ್ಮಾಗೆ ಟೀಂ ಇಂಡಿಯಾ ನಾಯಕತ್ವ
ಇದನ್ನೂ ಓದಿ : Viral Video : ಕ್ರಿಕೆಟ್ ಮೈದಾನದಲ್ಲಿ ನಾಯಿಯ ಭರ್ಜರಿ ಫೀಲ್ಡಿಂಗ್ : ಚೆಂಡು ಕದ್ದ ನಾಯಿ, ಕ್ರಿಕೆಟ್ ಪಂದ್ಯವೇ ಸ್ಥಗಿತ !
(Rohit Sharma to Replace Virat Kohli as Limited Overs Captain After T20 World Cup )