ವಿರಾಟ್‌ ಕೊಹ್ಲಿ ಅಭಿಮಾನಿಗಳಿಗೆ ಶಾಕ್‌ : ರೋಹಿತ್ ಶರ್ಮಾಗೆ ಟೀಂ ಇಂಡಿಯಾ ನಾಯಕತ್ವ

ಮುಂಬೈ : ವಿರಾಟ್ ಕೊಹ್ಲಿ ಬದಲಿಗೆ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ನಿರೀಕ್ಷೆಯಂತೆ ಭಾರತದ ಟೆಸ್ಟ್, ಏಕದಿನ ಮತ್ತು ಟಿ20 ತಂಡಗಳ ನಾಯಕ ವಿರಾಟ್ ಕೊಹ್ಲಿ ಶೀಘ್ರದಲ್ಲೇ ಏಕದಿನ ಮತ್ತು ಟಿ20 ನಾಯಕತ್ವ ತ್ಯಜಿಸಲಿದ್ದಾರೆ.

ಟಿ20 ವಿಶ್ವಕಪ್ ನಂತರ ಕೊಹ್ಲಿ ಭಾರತದ ವೈಟ್ ಬಾಲ್ ನಾಯಕತ್ವ ತ್ಯಜಿಸಲಿದ್ದಾರೆ. ಐಪಿಎಲ್ ನ ಅತ್ಯಂತ ಯಶಸ್ವಿ ನಾಯಕ ರೋಹಿತ್ ಶರ್ಮಾ ನಾಯಕನಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಬಿಸಿಸಿಐ ಜೊತೆಗೆ ಮಾತನಾಡಿ ವಿರಾಟ್ ಕೊಹ್ಲಿ ಅವರೇ ಶೀಘ್ರದಲ್ಲೇ ಈ ಬಗ್ಗೆ ಘೋಷಣೆ ಮಾಡಲಿದ್ದಾರೆ.

ಕೊಹ್ಲಿ ಪ್ರಸ್ತುತ ಎಲ್ಲಾ ಮಾದರಿ ತಂಡಗಳನನ್‌ಉ ಮುನ್ನಡೆಸುತ್ತಿದ್ದಾರೆ. ಭಾರತದ ಅತ್ಯಂತ ಯಶಸ್ವಿ ನಾಯಕರಾಗಿದ್ದರೂ ಅವರು ರೋಹಿತ್ ಶರ್ಮಾ ರೊಂದಿಗೆ ನಾಯಕತ್ವದ ಜವಾಬ್ದಾರಿಗಳನ್ನು ಹಂಚಿಕೊಳ್ಳಲು ನಿರ್ಧಾರ ಕರೆ ತೆಗೆದುಕೊಂಡಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ಇದನ್ನೂ ಓದಿ: ಟೀ ಇಂಡಿಯಾ ಮೆಂಟರ್ ಆಯ್ಕೆ ಬೆನ್ನಲ್ಲೇ ಮಹೇಂದ್ರ ಸಿಂಗ್‌ ಧೋನಿ ವಿರುದ್ಧ ದಾಖಲಾಯ್ತು ದೂರು !

ಇದಕ್ಕೆ ಪ್ರಮುಖ ಕಾರಣವೆಂದರೆ ಕೊಹ್ಲಿ ಬ್ಯಾಟಿಂಗ್ ನತ್ತ ಹೆಚ್ಚು ಗಮನಹರಿಸಲು ಬಯಸಿದ್ದಾರೆ. ಎಲ್ಲ 3 ಮಾದರಿ ತಂಡದ ನಾಯಕತ್ವ ನಿಭಾಯಿಸಲು ಕಷ್ಟಸಾಧ್ಯವಾಗಿದ್ದು, ಇದು ಅವರ ಬ್ಯಾಟಿಂಗ್ ಯಶಸ್ಸಿನ ಮೇಲೆ ಪರಿಣಾಮ ಬೀರುತ್ತಿದೆ. ತನ್ನ ಉದ್ದೇಶದ ಬಗ್ಗೆ ಕೊಹ್ಲಿ ಈಗಾಗಲೇ ಬಿಸಿಸಿಐ, ತಂಡದ ನಿರ್ವಹಣೆಗಾರರು ಮತ್ತು ರೋಹಿತ್ ಶರ್ಮಾ ಅವರಿಗೆ ಮಾಹಿತಿ ನೀಡಿದ್ದಾರೆ ಎಂದು ಹೇಳಲಾಗಿದೆ.

ಭಾರತ ತಂಡದ ನಾಯಕನಾಗಿ ಕೊಹ್ಲಿ ಸಾಧನೆ :
ಟೀಂ ಇಂಡಿಯಾ ನಾಯಕನಾಗಿ ವಿರಾಟ್‌ ಕೊಯ್ಲಿ65 ಟೆಸ್ಟ್ ಪಂದ್ಯಗಳ ಪೈಕಿ 38 ಪಂದ್ಯಗಳಲ್ಲಿ ಗೆಲುವನ್ನು ದಾಖಲಿಸಿದ್ದಾರೆ. ಇನ್ನು95 ಏಕದಿನ ಪಂದ್ಯಗಳಲ್ಲಿ 65ರಲ್ಲಿ ಗೆಲುವು ದಾಖಲಿಸಿದ್ದರೆ, 45 ಟಿ20 ಪಂದ್ಯಗಳ ಪೈಕಿ 29 ಪಂದ್ಯಗಳಲ್ಲಿ ಗೆಲುವು ದಾಖಲಿಸಿದ್ದಾರೆ. ಅದ್ರಲ್ಲೂ ವಿಶ್ವ ಟೆಸ್ಟ್‌ ಚಾಂಪಿಯನ್‌ ಶಿಪ್‌ನಲ್ಲಿ ತಂಡವನ್ನು ಫೈನಲ್‌ಗೆ ಕೊಂಡೊಯ್ದಿದ್ದರೆ, ಈ ಬಾರಿ ಟಿ20 ವಿಶ್ವಕಪ್‌ ಗೆಲ್ಲುವ ನಿರೀಕ್ಷೆಯನ್ನು ವಿರಾಟ್‌ ಕೊಯ್ಲಿ ಮೇಲೆ ಇರಿಸಲಾಗಿದೆ.

ಐಪಿಎಲ್ ವಿಶ್ವದಲ್ಲಿ ಅತಿ ಹೆಚ್ಚು ಬೇಡಿಕೆಯ ಟಿ20 ಲೀಗ್ ಆಗಿದ್ದು, ಗರಿಷ್ಠ ಸಂಖ್ಯೆಯ ವಿಶ್ವ ದರ್ಜೆಯ ಆಟಗಾರರನ್ನು ಹೊಂದಿದೆ. ರೋಹಿತ್ 2013, 2015, 2017, 2019 ಮತ್ತು 2020 ರಲ್ಲಿ ಮುಂಬೈ ಇಂಡಿಯನ್ಸ್(ಎಂಐ) ಗೆಲುವಿಗೆ ಕಾರಣರಾಗಿದ್ದಾರೆ.

ಅವರು 2013 ರಲ್ಲಿ ಹರ್ಭಜನ್ ಸಿಂಗ್ ಅವರಿಂದ ನಾಯಕತ್ವ ವಹಿಸಿಕೊಂಡು ಯಶಸ್ಸು ಕಂಡಿದ್ದಾರೆ. ಈಡನ್ ಗಾರ್ಡನ್ಸ್‌ ನಲ್ಲಿ ನಡೆದ ಫೈನಲ್‌ನಲ್ಲಿ ಸಿಎಸ್‌ಕೆ ತಂಡವನ್ನು 23 ರನ್ಗಳಿಂದ ಸೋಲಿಸಿ ಎಂಐ ಗೆಲುವಿಗೆ ಕಾರಣರಾಗಿದ್ದರು. 2013 ರಿಂದ 2020 ರವರೆಗೆ, ರೋಹಿತ್ ಎಂಐ ತಂಡವನ್ನು 5 ಸಲ ಪ್ರಶಸ್ತಿಗೆ ಮುನ್ನಡೆಸಿದ್ದಾರೆ ಮತ್ತು 8 ಆವೃತ್ತಿಗಳಲ್ಲಿ 6 ಬಾರಿ ಪ್ಲೇಆಫ್ ಹಂತಕ್ಕೆ ಕೊಂಡೊಯ್ದಿದ್ದಾರೆ.

ಇದನ್ನೂ ಓದಿ: Shikhar Dhavan : ಶಿಖರ್‌ ಧವನ್‌ ಗೆ ಇನ್ನೂ ಮುಗಿದಿಲ್ಲ ಟೀಂ ಇಂಡಿಯಾದಲ್ಲಿ ಅವಕಾಶ

ಟಿ20 ಕ್ರಿಕೆಟ್ ನಲ್ಲಿ ಕ್ಯಾಪ್ಟನ್ ಆಗಿ ಅವರ ದಾಖಲೆ ಇನ್ನೂ ಅತ್ಯುತ್ತಮವಾಗಿದೆ. ಭಾರತವು ರೋಹಿತ್ ನಾಯಕತ್ವದಲ್ಲಿ 19 ಪಂದ್ಯಗಳಲ್ಲಿ 15 ಪಂದ್ಯಗಳನ್ನು ಗೆದ್ದಿದೆ. ಇವುಗಳಲ್ಲಿ 2018 ರಲ್ಲಿ ಶ್ರೀಲಂಕಾದಲ್ಲಿ ನಡೆದ ನಿದಹಾಸ್ ತ್ರಿಕೋನ ಸರಣಿಯ ಜಯ ಮತ್ತು 2018 ರಲ್ಲಿ ಸ್ವದೇಶದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 3-0 ಸರಣಿ ಸ್ವೀಪ್ ಸೇರಿವೆ.

(Rohit Sharma's Team India Leadership Shock For Virat Kohli Fans)

Comments are closed.