ಮುಂಬೈ: ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಬಿಹಾರ ತಂಡದ ವಿರುದ್ದ ಕೇರಳ ಭಾರಿ ಅಂತರದ ಗೆಲುವು ದಾಖಲಿಸಿದೆ. ಆರಂಭಿಕರಾದ ರಾಬಿನ್ ಉತ್ತಪ್ಪ ಹಾಗೂ ಸಂಜು ಸ್ಯಾಮ್ಸನ್ ಉತ್ತಮ ಆಟದ ನೆರವಿನಿಂದ ಕೇರಳ ತಂಡ 35 ಎಸೆತ ಬಾಕಿ ಇರುವಂತೆಯೇ ಗೆಲುವಿನ ನಗೆ ಬೀರಿದೆ.ಈ ಗೆಲುವಿನೊಂದಿಗೆ ಕೇರಳ ತಂಡ ಅಂಕಪಟ್ಟಿ ಯಲ್ಲಿ ಮೂರನೇ ಸ್ಥಾನದಲ್ಲಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ಬಿಹಾರ ತಂಡ ನಿಗದಿತ 20 ಓವರ್ ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 131 ರನ್ ಗಳಿಸಿತು. ರಾಬಿನ್ ಉತ್ತಪ್ಪ ಉತ್ತಮ ಲಯ ಕಂಡುಕೊಂಡಿ ದ್ದಾರೆ. ರಾಬಿನ್ ಉತ್ತಪ್ಪ 34 ಎಸೆತಗಳಲ್ಲಿ ಐದು ಬೌಂಡರಿ ಹಾಗೂ ನಾಲ್ಕು ಸಿಕ್ಸರ್‌ಗಳೊಂದಿಗೆ 57 ರನ್ ಗಳಿಸಿ, ನಿವೃತ್ತರಾಗಿದ್ದಾರೆ. ನಂತರ ಕ್ರೀಸ್‌ಗೆ ಇಳಿದ ಸಂಜು ಸ್ಯಾಮ್ಸನ್ 20 ಎಸೆತಗಳಲ್ಲಿ ಮೂರು ಬೌಂಡರಿ ಹಾಗೂ 4 ಸಿಕ್ಸರ್ ನೆರವಿನಿಂದ 45 ರನ್ ಗಳಿಸಿ ಅಜೇಯರಾಗುಳಿದರು. ಈ ಮೂಲಕ ಕೇರಳ ಭರ್ಜರಿ ಶುಭಾರಂಭ ಮಾಡಿದೆ.
ಇದನ್ನೂ ಓದಿ : ಯುವಿ ಅಭಿಮಾನಿಗಳಿಗೆ ಸಿಹಿ ಸುದ್ದಿ : ಟೀಂ ಇಂಡಿಯಾಗೆ ವಾಪಾಸಾಗ್ತಾರೆ ಯುವರಾಜ್ ಸಿಂಗ್
ಇದನ್ನೂ ಓದಿ : ಕೆ.ಎಲ್. ರಾಹುಲ್ – ರೋಹಿತ್ ಶರ್ಮಾ ಆರ್ಭಟ : ದಾಖಲೆಯ ಗೆಲುವು ದಾಖಲಿಸಿ ಟೀಂ ಇಂಡಿಯಾ
ಗೆಲುವಿನೊಂದಿಗೆ ಕೇರಳ ನಾಲ್ಕು ಅಂಕಗಳೊಂದಿಗೆ ಡಿ ಗುಂಪಿನಲ್ಲಿ ಮೂರನೇ ಸ್ಥಾನ ಪಡೆದಿದೆ. ಎರಡೂ ಪಂದ್ಯಗಳನ್ನು ಗೆದ್ದಿರುವ ಮಧ್ಯಪ್ರದೇಶ ಎಂಟು ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಮೊದಲ ಪಂದ್ಯದಲ್ಲಿ ಕೇರಳವನ್ನು ಸೋಲಿಸಿದ ಗುಜರಾತ್ ನಾಲ್ಕು ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ.
( Syed Mushtaq Ali trophy Uthappa and Sanju Samson Batting, Kerala beat bihar by a huge margin )