ಪ್ರತಿ ತಿಂಗಳು 1500ರೂ. ಹೂಡಿಕೆ ಮಾಡಿದ್ರೆ ಸಿಗುತ್ತೆ 35 ಲಕ್ಷ : ಅಂಚೆ ಇಲಾಖೆ ನೀಡಿದೆ ಗ್ರಾಮ ಸುರಕ್ಷಾ ಯೋಜನೆ

ದೆಹಲಿ : ಹೆಚ್ಚಿನ ಜನರು ತಮ್ಮ ಹೂಡಿಕೆಯನ್ನು ಎಲ್ಲಾದರೂ ಸುರಕ್ಷಿತ ಯೋಜನೆಯಲ್ಲಿ ಹೂಡಿಕೆ ಮಾಡಲು ಬಯಸುತ್ತಾರೆ. ಸುರಕ್ಷಿತ ಮತ್ತು ಭರವಸೆಯ ಯೋಜನೆಯನ್ನು ನಮ್ಮ ಭಾರತದ ಅಂಚೆ ಕಚೇರಿಯು ಹೊಂದಿದೆ. ಹೂಡಿಕೆದಾರರು ತಮ್ಮ ಭವಿಷ್ಯವನ್ನು ಭದ್ರಪಡಿಸಿಕೊಳ್ಳಲು ಅಂಚೆ ಕಚೇರಿ ‘ಗ್ರಾಮ ಸುರಕ್ಷಾ ಯೋಜನೆ’ಯಲ್ಲಿ ಹೂಡಿಕೆ ಮಾಡಬಹುದು.

ಭಾರತೀಯ ಅಂಚೇ ಕಚೇರಿಯ ಈ ಯೋಜನೆಯಲ್ಲಿ ಪ್ರತೀ ತಿಂಗಳು 1500 ರೂ. ಹೂಡಿಕೆಯನ್ನು ಮಾಡಿದರೆ ಮೆಚ್ಯೂರಿಟಿ ಸಮಯದಲ್ಲಿ 35 ಲಕ್ಷ ರೂ. ಪಡೆಯಬಹುದು. ಅಂಚೆ ಕಚೇರಿ ‘ಗ್ರಾಮ ಸುರಕ್ಷಾ ಯೋಜನೆಯಲ್ಲಿ ಪ್ರತಿ ತಿಂಗಳು ಕೇವಲ 1,500 ರೂ.ಗಳನ್ನು ಮೊತ್ತವನ್ನು ನಿಯಮಿತವಾಗಿ ಠೇವಣಿ ಇಡುವ ಮೂಲಕ, ಹೂಡಿಕೆದಾರರು 31 ರಿಂದ 35 ಲಕ್ಷ ರೂ.ಗಳ ಲಾಭವನ್ನು ಪಡೆಯಬಹುದು.

ಇದನ್ನೂ ಓದಿ: PF’ ಚಂದಾದಾರರಿಗೆ ಭರ್ಜರಿ ಸಿಹಿಸುದ್ದಿ : PF ಖಾತೆಗೆ ಶೇ.8.5 ಬಡ್ಡಿ ಹಣ ಜಮೆ

ಭಾರತೀಯ ಅಂಚೆ ಕಚೇರಿ ಯೋಜನೆಯಲ್ಲಿ 19 ರಿಂದ 55 ವರ್ಷ ವಯಸ್ಸಿನ ಯಾವುದೇ ಭಾರತೀಯ ನಾಗರಿಕ ಹೂಡಿಕೆ ಮಾಡಬಹುದು. ಈ ಗ್ರಾಮ ಸುರಕ್ಷಾ ಯೋಜನೆಯಲ್ಲಿ ಕನಿಷ್ಠ ಭರವಸೆ ನೀಡಿದ ಮೊತ್ತ 10,000 ಗಳಿಂದ 10 ಲಕ್ಷ ಗಳವರೆಗೆ ಇರಬಹುದು. ಅಂಚೆ ಕಚೇರಿ ಯೋಜನೆಯಡಿ ಪ್ರೀಮಿಯಂಗಳನ್ನು ಮಾಸಿಕ, ತ್ರೈಮಾಸಿಕ, ಅರ್ಧ ವಾರ್ಷಿಕ ಅಲ್ಲದೇ ವಾರ್ಷಿಕವಾಗಿ ಮಾಡಬಹುದು.

ಹೂಡಿಕೆದಾರರು ಪ್ರೀಮಿಯಂ ಪಾವತಿಸಲು 30 ದಿನಗಳ ಗ್ರೇಸ್ ಅವಧಿಯನ್ನು ಸಹ ಪಡೆಯುತ್ತಾರೆ. ಇದಲ್ಲದೆ, ಆಯ್ದ ಅವಧಿಗೆ ಯೋಜನೆಯಲ್ಲಿ ನಿರಂತರವಾಗಿ ಹೂಡಿಕೆ ಮಾಡಿದ ನಂತರ ಅವರು ತಮ್ಮ ಹೂಡಿಕೆಗಳ ವಿರುದ್ಧ ಮುಂಗಡವನ್ನು ತೆಗೆದುಕೊಳ್ಳಬಹುದು. ತಿಂಗಳಿಗೆ ಸುಮಾರು 1500 ರೂಪಾಯಿ ಹೂಡಿಕೆ ಮಾಡಿ 35 ಲಕ್ಷ ರೂ ಮಾಡಿ 35 ಲಕ್ಷ ಹೇಗೆ ಪಡೆಯುವುದು ಎಂದು ನೀವು ಚಿಂತಿಸ ಬಹುದು.

ಇದನ್ನೂ ಓದಿ: Paytm IPO : ನವೆಂಬರ್ 8 ಆರಂಭವಾಗಲಿದೆ ಪೇಟಿಎಂ ಐಪಿಒ

ಒಬ್ಬ ಅಂಚೆ ಕಚೇರಿಯ ‘ಗ್ರಾಮ ಸುರಕ್ಷಾ ಯೋಜನೆಯ ಹೂಡಿಕೆದಾರ ತನ್ನ 19 ನೇ ವಯಸ್ಸಿನಲ್ಲಿ 10 ಲಕ್ಷ ದ ಭರವಸೆಯ ಮೊತ್ತವನ್ನು ಖರೀದಿಸಿ ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸಿದರೆ 55 ವರ್ಷಗಳ ಕಾಲ ಈ ಯೋಜನೆಯಲ್ಲಿ ಹೂಡಿಕೆ ಮಾಡಿದ ನಂತರ 31.60 ಲಕ್ಷ ರೂ.ಗಳನ್ನು ಪಡೆದುಕೊಳ್ಳ ಬಹುದು.

(1500 per month. 35 lakhs to invest: Grama Suraksha Yojana given by Postal Department)

Comments are closed.