ಚಿನ್ನ ಕಳ್ಳ ಸಾಗಾಣಿಕೆ ಆರೋಪಿ ಸ್ವಪ್ನಾ ಸುರೇಶ್‌ ಬಿಡುಗಡೆ : ಕೇರಳ ಸಿಎಂಗೆ ಉರುಳಾಗುತ್ತಾ ಪ್ರಕರಣ ?

ತಿರುವನಂತಪುರಂ : ಕೇರಳದಲ್ಲಿ ನಡೆದಿರುವ ವಿವಾದಿತ ಚಿನ್ನ ಕಳ್ಳಸಾಗಣೆ ಪ್ರಕರಣದ ಆರೋಪಿ ಸ್ವಪ್ನಾ ಸುರೇಶ್ ಇಂದು ಜೈಲಿನಿಂದ ಬಿಡುಗಡೆಯಾಗಲಿದ್ದಾರೆ. ಸ್ವಪ್ನಾ ಸುರೇಶ್‌ ಅವರ ವಿರುದ್ದ ದಾಖಲಾಗಿರುವ ಆರು ಪ್ರಕರಣಗಳಲ್ಲಿ ಜಾಮೀನು ದೊರೆತಿದೆ. ಜಾಮೀನಿಗೆ ಸಂಬಂಧಿಸಿದ ದಾಖಲೆಗಳನ್ನುಅಟ್ಟಕ್ಕುಳಂಗರ ಜೈಲಿಗೆ ಕಳುಹಿಸಿದ ಬಳಿಕ ಸ್ವಪ್ನ ಬಿಡುಗಡೆಯಾಗುವ ಸಾಧ್ಯತೆಯಿದೆ.

ರಾಜತಾಂತ್ರಿಕ ಮಾರ್ಗದ ಮೂಲಕ ಕೋಟ್ಯಾಂತರ ರೂಪಾಯಿ ಮೌಲ್ಯದ ಚಿನ್ನ ಸಾಗಾಣಿಕೆ ಮಾಡಿದ ಆರೋಪದಡಿಯಲ್ಲಿ ಬಂಧನಕ್ಕೆ ಒಳಗಾಗಿರುವ ಸ್ವಪ್ನಾ ಸುರೇಶ್‌ ಇಂದು ಬಿಡುಗಡೆಯಾಗುತ್ತಿರುವುದು ತೀವ್ರ ಕುತೂಹಲ ಮೂಡಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವಪ್ನಾ ಸುರೇಶ್‌ ಬಿಡುಗಡೆಯ ನಂತರದಲ್ಲಿ ಮಾಧ್ಯಮಗಳ ಮುಂದೆ ಮಾತನಾಡುವ ಸಾಧ್ಯತೆಯಿದೆ. ಸ್ವಪ್ನಾ ಸುರೇಶ್‌ ಬಿಡುಗಡೆಯ ಬೆನ್ನಲ್ಲೇ ಕೇರಳ ಸರಕಾರ ಉಳುವ ಸಾಧ್ಯತೆಯಿದೆ ಎಂದು ಕೇರಳ ಮಾಧ್ಯಮಗಳು ವರದಿ ಮಾಡುತ್ತಿವೆ. ಸಿಎಂ ಕಚೇರಿಯ ಜೊತೆಗಿನ ಸಂಬಂಧ ಸೇರಿದಂತೆ ವಿವಾದದ ಕುರಿತು ಸ್ವಪ್ನಾ ಸುರೇಶ್‌ ಹೇಗೆ ಪ್ರತಿಕ್ರೀಯೆ ನೀಡುತ್ತಾರೆ ಅನ್ನೋದು ತೀವ್ರ ಕುತೂಹಲ ಮೂಡಿಸಿದೆ.

ರಾಜತಾಂತ್ರಿಕ ಮಾರ್ಗದ ಮೂಲಕ ಚಿನ್ನದ ಕಳ್ಳಸಾಗಣೆಗೆ ಸಂಬಂಧಿಸಿದಂತೆ ಹಲವಾರು ಉನ್ನತ ಶ್ರೇಣಿಯ ಸರ್ಕಾರಿ ಅಧಿಕಾರಿಗಳನ್ನು ಬಂಧಿಸಲಾಗಿದೆ. ಸ್ವಪ್ನಾ, ಸಂದೀಪ್ ಮತ್ತು ಸರಿತ್ ಪ್ರಮುಖ ಆರೋಪಿಗಳು. ಈ ಪ್ರಕರಣವನ್ನು ಮುಖ್ಯವಾಗಿ ಎನ್‌ಐಎ, ಇಡಿ ಮತ್ತು ಕಸ್ಟಮ್ಸ್‌ನಂತಹ ಕೇಂದ್ರೀಯ ಸಂಸ್ಥೆಗಳು ತನಿಖೆ ನಡೆಸಿದ್ದವು. ಪ್ರಕರಣದಲ್ಲಿ ಕೇರಳ ಸಿಎಂ ಪಿಣರಾಯಿ ವಿಜಯನ್‌ ವಿರುದ್ದ ಗಂಭೀರ ಆರೋಪ ಕೇಳಿಬಂದಿತ್ತು. ಹಲವು ಸಮಯಗಳಿಂದಲೂ ಜೈಲಿನಲ್ಲಿಯೇ ಇದ್ದ ಸ್ವಪ್ನಾ ಸುರೇಶ್‌ ಬಹುತೇಕ ಇಂದು ಜೈಲಿನಿಂದ ಬಿಡುಗಡೆಯಾಗಲಿದ್ದು, ಬಿಡುಗಡೆಯ ನಂತರ ಯಾರಿಗೆಲ್ಲಾ ಈ ಪ್ರಕರಣ ಉರುಳಾಗಲಿದೆ ಅನ್ನೋದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ :‌ ಕೇರಳ ಸಿಎಂ ಗೆ ಆಪತ್ತು ತಂದ ಸ್ವಪ್ನ ಸುಂದರಿ : ಅವಿಶ್ವಾಸ ಗೊತ್ತುವಳಿಗೆ ಮುಂದಾದ ಯುಡಿಎಫ್

ಇದನ್ನೂ ಓದಿ : ಚಿನ್ನ ಕಳ್ಳ ಸಾಗಾಣಿಕೆ ಪ್ರಕರಣ : ಸ್ವಪ್ನಾ ಸುರೇಶ್ ಲಾಕರ್ ನಲ್ಲಿತ್ತು ಬರೋಬ್ಬರಿ 38 ಕೋಟಿ !

( Kerala Gold Smuggling Case Swapna Suresh may be released Today )

Comments are closed.