Virat Kohli vs RCB : ನಾಯಕತ್ವ ತ್ಯೆಜಿಸಿದ ವಿರಾಟ್‌ ಕೊಯ್ಲಿ : ಆರ್‌ಸಿಬಿ ನಾಯಕನಾಗಿ ಗೆಲುವಿಗಿಂತ ಸೋತಿದ್ದೆ ಹೆಚ್ಚು !

ಶಾರ್ಜಾ : ಟೀಂ ಇಂಡಿಯಾ ನಾಯಕನಾಗಿರೋ ವಿರಾಟ್‌ ಕೊಯ್ಲಿ ಅತ್ಯುತ್ತಮ ಆಟಗಾರ. ಆದರೆ ನಾಯಕನಾಗಿ ನೋಡಿದ್ರೆ ಕೊಯ್ಲಿ ಸಾಧನೆ ಅಷ್ಟಕ್ಕಷ್ಟೆ. ಮಹೇಂದ್ರ ಸಿಂಗ್‌ ಧೋನಿ ನಂತರದಲ್ಲಿ ಟೀ ಇಂಡಿಯಾ ಜವಾಬ್ದಾರಿ ಹೊತ್ತಿದ್ದ ಕೊಯ್ಲಿ ಮಹತ್ವದ ಟೂರ್ನಿಯಲ್ಲಿ ಗೆಲುವು ಕಂಡಿಲ್ಲ. ಇದೀಗ ಐಪಿಎಲ್‌ ಪಂದ್ಯಾವಳಿಯಲ್ಲಿಯೂ ಕೊಯ್ಲಿ ಫ್ಲಾಪ್‌ ನಾಯಕರಾಗಿ ಹೊರಹೊಮ್ಮಿದ್ದಾರೆ. ಆರ್‌ಸಿಬಿ ನಾಯಕನಾಗಿ ಕೊಯ್ಲಿ ಗೆಲುವು ಕಂಡಿದ್ದಕ್ಕಿಂತ ಸೋಲು ಕಂಡ ಪಂದ್ಯಗಳೇ ಅಧಿಕ.

Virat kohili rcb
Virat kohli vs rcb : ನಾಯಕತ್ವ ತ್ಯೆಜಿಸಿದ ವಿರಾಟ್‌ ಕೊಯ್ಲಿ : ಆರ್‌ಸಿಬಿ ನಾಯಕನಾಗಿ ಗೆಲುವಿಗಿಂತ ಸೋತಿದ್ದೆ ಹೆಚ್ಚು! 6

2008 ರಿಂದಲೂ ವಿರಾಟ್‌ ಕೊಯ್ಲಿ ರಾಯಲ್‌ ಚಾಲೆಂಜರ್ಸ್‌ ತಂಡದ ಪರವಾಗಿ ಆಟವಾಡುತ್ತಿದ್ದಾರೆ. 2013ರಲ್ಲಿ ತಂಡದ ನಾಯಕನಾಗಿದ್ದ ಡೇನಿಯಲ್‌ ವೆಟ್ಟೋರಿ ರಾಜೀನಾಮೆಯ ಬೆನ್ನಲ್ಲೇ ವಿರಾಟ್‌ ಕೊಯ್ಲಿ ಆರ್‌ಸಿಬಿ ತಂಡ ನಾಯಕನಾಗಿ ನೇಕಮವಾಗಿದ್ದರು. ಆರ್‌ಸಿಬಿ ತಂಡದ ನಾಯಕನಾಗಿ 140 ಪಂದ್ಯಗಳಲ್ಲಿ ನಾಯಕನಾಗಿ ತಂಡವನ್ನು ಮುನ್ನಡೆಸಿದ್ದಾರೆ. ಈ ಪೈಕಿ ಕೇವಲ 66 ಪಂದ್ಯಗಳಲ್ಲಿ ಗೆಲುವನ್ನು ದಾಖಲಿಸಿದ್ದು, 70 ಪಂದ್ಯಗಳಲ್ಲಿ ಸೋಲನ್ನು ಅನುಭವಿಸಿದ್ದಾರೆ. ಈ ಮೂಲಕ ಕೊಯ್ಲಿ ಬೆಂಗಳೂರು ತಂಡದ ವಿಫಲ ನಾಯಕ ಎನಿಸಿಕೊಂಡಿದ್ದಾರೆ.

Virat kohili rcb 1
Virat kohli vs rcb : ನಾಯಕತ್ವ ತ್ಯೆಜಿಸಿದ ವಿರಾಟ್‌ ಕೊಯ್ಲಿ : ಆರ್‌ಸಿಬಿ ನಾಯಕನಾಗಿ ಗೆಲುವಿಗಿಂತ ಸೋತಿದ್ದೆ ಹೆಚ್ಚು! 7

ಇದನ್ನೂ ಓದಿ : IPL ಬೆನ್ನಲ್ಲೇ ಆರ್‌ಸಿಬಿ ನಾಯಕತ್ವಕ್ಕೆ ಕೊಯ್ಲಿ ರಾಜೀನಾಮೆ

ಆರ್‌ಸಿಬಿ ತಂಡ 2016ರಲ್ಲಿ ವಿರಾಟ್‌ ಕೊಯ್ಲಿ ನಾಯಕತ್ವದಲ್ಲಿ ಮೊದಲ ಬಾರಿಗೆ ಫೈನಲ್‌ ಪ್ರವೇಶವನ್ನು ಕಂಡಿತ್ತು. ಅಲ್ಲದೇ 2017 ಮತ್ತು 2019ರಲ್ಲಿ ಅದ್ಬುತ ಆಟದ ಪ್ರದರ್ಶನ ಕಂಡಿದ್ದರೂ ಕೂಡ ಆರ್‌ಸಿಬಿ ತಂಡ ಅಂತಿಮ ಹಂತದಲ್ಲಿ ಸೋಲಿನ ರುಚಿಯುಂಡಿತ್ತು. ಆದ್ರೀಗ ಪ್ರಸಕ್ತ ಸಾಲಿನ ಐಪಿಎಲ್‌ ಟೂರ್ನಿಯಲ್ಲಿಯೇ ಕೊಯ್ಲಿ ಪಡೆ ಎಲಿಮಿನೇಟರ್‌ ಪಂದ್ಯದಲ್ಲಿಯೇ ಸೋಲನ್ನು ಕಂಡು, ಟ್ರೋಫಿ ನಿರೀಕ್ಷೆಯಲ್ಲಿದ್ದ ಕನ್ನಡಿಗರಿಗೆ ನಿರಾಸೆ ಮೂಡಿಸಿದೆ.

Virat kohli resigns as rcb captain, as a rcb captain, i lost more than a win
Virat kohli vs rcb : ನಾಯಕತ್ವ ತ್ಯೆಜಿಸಿದ ವಿರಾಟ್‌ ಕೊಯ್ಲಿ : ಆರ್‌ಸಿಬಿ ನಾಯಕನಾಗಿ ಗೆಲುವಿಗಿಂತ ಸೋತಿದ್ದೆ ಹೆಚ್ಚು! 8

ಪ್ರಸಕ್ತ ಸಾಲಿನಲ್ಲಿ ಆರ್ ಸಿಬಿ ತಂಡ ಐಪಿಎಲ್‌ ಟ್ರೋಫಿ ಗೆಲ್ಲುವ ನೆಚ್ಚಿನ ತಂಡವಾಗಿ ಹೊರಹೊಮ್ಮಿತ್ತು. ಆದರೆ ಕೊಲ್ಕತ್ತಾ ವಿರುದ್ದ ಪಂದ್ಯದಲ್ಲಿ ಆರ್‌ಸಿಬಿ ತಂಡದ ಕೆಟ್ಟ ಬ್ಯಾಟಿಂಗ್‌ ಜೊತೆಗೆ ಕ್ಯಾಚ್‌ ಚೆಲ್ಲಿರುವುದೇ ಪಂದ್ಯದ ಸೋಲಿಗೆ ಕಾರಣವಾಗಿದೆ. ಕೆಕೆಆರ್‌ ತಂಡ ಭರ್ಜರಿ ಆಟದ ಪ್ರದರ್ಶನದ ಮೂಲಕ ಮುಂದಿನ ಹಂತಕ್ಕೆ ತೇರ್ಗಡೆ ಕಂಡಿದೆ.

ಇದನ್ನೂ ಓದಿ : K L RAHUL : ಬೆಂಗಳೂರು ತಂಡಕ್ಕೆ ಮರಳುತ್ತಾರೆ ರಾಹುಲ್‌ : ಆರ್‌ಸಿಬಿಗೆ ಕನ್ನಡಿಗನೇ ನಾಯಕ

Rcb virat kohili
Virat kohli vs rcb : ನಾಯಕತ್ವ ತ್ಯೆಜಿಸಿದ ವಿರಾಟ್‌ ಕೊಯ್ಲಿ : ಆರ್‌ಸಿಬಿ ನಾಯಕನಾಗಿ ಗೆಲುವಿಗಿಂತ ಸೋತಿದ್ದೆ ಹೆಚ್ಚು! 9

ಈ ಹಿಂದೆಯೇ ವಿರಾಟ್‌ ಕೊಯ್ಲಿ ಐಪಿಎಲ್‌ ಟೂರ್ನಿಯ ಬೆನ್ನಲ್ಲೇ ತಾನು ಆರ್‌ಸಿಬಿ ನಾಯಕನ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಣೆಯನ್ನು ಮಾಡಿದ್ದರು. ಅದರಂತೆಯೇ ವಿರಾಟ್‌ ಕೊಯ್ಲಿ ನಾಯಕತ್ವ ತ್ಯೆಜಿಸಲಿದ್ದಾರೆ. ಹೀಗಾಗಿ ಮುಂದಿನ ಋತುವಿನಲ್ಲಿ ಬೆಂಗಳೂರು ರಾಯಲ್‌ ಚಾಲೆಂಚರ್ಸ್‌ ತಂಡ ಹೊಸ ನಾಯಕನ ಹುಟುಕಾಟ ನಡೆಸಬೇಕಾಗಿದೆ.

Team india virat kohili
Virat kohli vs rcb : ನಾಯಕತ್ವ ತ್ಯೆಜಿಸಿದ ವಿರಾಟ್‌ ಕೊಯ್ಲಿ : ಆರ್‌ಸಿಬಿ ನಾಯಕನಾಗಿ ಗೆಲುವಿಗಿಂತ ಸೋತಿದ್ದೆ ಹೆಚ್ಚು! 10

ಇನ್ನೊಂದೆಡೆಯಲ್ಲಿ ವಿರಾಟ್‌ ಕೊಯ್ಲಿ ಈಗಾಗಲೇ ಟೀಂ ಇಂಡಿಯಾದ ವೈಟ್‌ ಬಾಲ್‌ ತಂಡದ ನಾಯಕನ ಸ್ಥಾನಕ್ಕೂ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ. ವಿಶ್ವಕಪ್‌ ಬೆನ್ನಲ್ಲೇ ವಿರಾಟ್‌ ಕೊಯ್ಲಿ ಕೇವಲ ಟೆಸ್ಟ್‌ ತಂಡದ ನಾಯಕನಾಗಿ ಮಾತ್ರವೇ ಮುಂದುವರಿಯಲಿದ್ದಾರೆ. ಕೊಯ್ಲಿ ಈ ಎರಡು ನಿರ್ಧಾರ ಹಲವು ಕುತೂಹಲವನ್ನು ಮೂಡಿಸಿದೆ.

ಇದನ್ನೂ ಓದಿ : ಐಪಿಎಲ್‌ನಲ್ಲಿ ವಿಶಿಷ್ಟ ದಾಖಲೆ ಬರೆದ ಧೋನಿ ಮತ್ತು ರಿಷಬ್ ಪಂತ್

( Virat Kohli resigns as RCB captain, As a RCB captain, I lost more than a win )

Comments are closed.