IPL 2022 Team Auction : 2022 ಐಪಿಎಲ್‌ಗೆ ಎಂಟ್ರಿ ಕೊಟ್ಟ ಲಕ್ನೋ, ಅಹಮದಾಬಾದ್‌ ಹೊಸ ತಂಡ

ದುಬೈ: ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್‌ ಲೀಗ್‌ ಎನಿಸಿಕೊಂಡಿರುವ ಇಂಡಿಯನ್‌ ಪ್ರೀಮಿಯರ್‌ ಲೀಗ್‌ಗೆ ಹೊಸದಾಗಿ ಎರಡು ತಂಡಗಳು ಎಂಟ್ರಿ ಕೊಟ್ಟಿವೆ. 2022ರ ಐಪಿಎಲ್‍ಗೆ ಆರ್‌ಪಿ ಸಂಜೀವ್ ಗೋಯೆಂಕಾ (ಆರ್‌ಪಿಎಸ್‌ಜಿ) ಸಮೂಹದ ಲಕ್ನೋ ತಂಡ ಮತ್ತು ಸಿವಿಸಿ ಕ್ಯಾಪಿಟಲ್ಸ್‌ ಅಹಮದಾಬಾದ್‌ ತಂಡವನ್ನು ಖರೀದಿ ಮಾಡಿದೆ.

ದುಬೈನಲ್ಲಿ ನಡೆದ ಬಿಡ್‍ನಲ್ಲಿ ಅಹಮದಾಬಾದ್ ತಂಡವನ್ನು ಸಿವಿಸಿ ಕ್ಯಾಪಿಟಲ್ಸ್‌ ತಂಡ 5,600 ಕೋಟಿ ರೂ. ಬಿಡ್ ಮಾಡಿದ್ರೆ, ಲಕ್ನೋ ತಂಡಕ್ಕೆ ಆರ್‌ಪಿಎಸ್‌ಜಿ ಗ್ರೂಪ್ 7,090 ಕೋಟಿ ರೂ. ಬಿಡ್‌ ಮಾಡುವ ಮೂಲಕ ಐಪಿಎಲ್‌ನ ಎರಡು ಹೊಸ ತಂಡಗಳಾಗಿ ಎಂಟ್ರಿ ಕೊಟ್ಟಿವೆ. ಹೀಗಾಗಿ ಮುಂದಿನ ಐಪಿಎಲ್‌ ಋತುವಿನಲ್ಲಿ 8 ತಂಡಗಳ ಬದಲಾಗಿ 10 ತಂಡಗಳು ಕಣಕ್ಕೆ ಇಳಿಯಲಿವೆ.

ಬಿಸಿಸಿಐ ಮುಂದಿನ ಸಾಲಿನಲ್ಲಿ ಎರಡು ಹೊಸ ತಂಡಗಳ ಸೇರ್ಪಡೆಗೆ ಮುಂದಾಗಿದ್ದು, ಹೊಸ ತಂಡಗಳ ಖರೀದಿಗೆ ಅದಾನಿ, ಕೋಟಕ್, ಹಿಂದೂಸ್ತಾನ್‌ ಟೈಮ್ಸ್‌ ಸೇರಿದಂತೆ ಹಲವು ಕಂಪೆನಿಗಳು ಮುಂದಾಗಿದ್ದವು. ಆದರೆ ಆರ್‌ಪಿಎಸ್‌ಜಿ ಹಾಗೂ ಸಿವಿವಿ ಕ್ಯಾಪಿಟಲ್ಸ್‌ ತಂಡಗಳು ಹೊಸ ತಂಡಗಳನ್ನು ಖರೀದಿ ಮಾಡಿವೆ.

ಅಹಮದಾಬಾದ್‌ ತಂಡ ನರೇಂದ್ರ ಮೋದಿ ಸ್ಟೇಡಿಯಂ ತವರು ಕ್ರೀಡಾಂಗಣವಾಗಲಿದ್ದು, ಬರೋಬ್ಬರಿ ಒಂದು ಲಕ್ಷ ಪ್ರೇಕ್ಷಕರ ಸಾಮರ್ಥ್ಯವನ್ನು ಹೊಂದಿದೆ. ಅಲ್ಲದೇ ಲಕ್ನೋ ತಂಡ ಭಾರತ ರತ್ನ ಶ್ರೀ ಅಟಲ್‌ ಬಿಹಾರಿ ವಾಜಪೇಯಿ ಸ್ಟೇಡಿಯಂ ತವರು ಕ್ರೀಡಾಂಗಣವಾಗಲಿದ್ದು, ಐವತ್ತು ಸಾವಿರ ಪ್ರೇಕ್ಷಕರ ಸಾಮರ್ಥ್ಯವನ್ನು ಹೊಂದಿದೆ. ಹೊಸ ತಂಡಗಳ ಸೇರ್ಪಡೆಯಿಂದಾಗಿ ಈ ಬಾರಿ ಮಹಾ ಹರಾಜು ಪ್ರಕ್ರಿಯೆ ನಡೆಯಲಿದೆ.

ಇದನ್ನೂ ಓದಿ : ವಿರಾಟ್‌ ಕೊಯ್ಲಿ ಎಡವಟ್ಟಿಗೆ ಪಾಕ್‌ ವಿರುದ್ದ ಸೋತ ಭಾರತ

ಇದನ್ನೂ ಓದಿ : ಐಪಿಎಲ್‌ ಹೊಸ ತಂಡ ಖರೀದಿಗೆ ಅದಾನಿ, ಮ್ಯಾಂಚೆಸ್ಟರ್‌, ಹಿಂದೂಸ್ತಾನ್‌ ಟೈಮ್ಸ್‌ ಸೇರಿ ಹಲವು ಕಂಪೆನಿಗಳು ಬಿಡ್‌

IPL2022: RP-Sanjiv Goenka Group and CVC Capital Win Bids for Lucknow, Ahmedabad IPL Teams

Comments are closed.