ಸೋಮವಾರ, ಏಪ್ರಿಲ್ 28, 2025
HomeSportsCricketAB de Villiers RCB : ಐಪಿಎಲ್ 2023ರಲ್ಲಿ ಆರ್‌ಸಿಬಿ ಪರ ಆಡುತ್ತೆನೆ ಎಂದ...

AB de Villiers RCB : ಐಪಿಎಲ್ 2023ರಲ್ಲಿ ಆರ್‌ಸಿಬಿ ಪರ ಆಡುತ್ತೆನೆ ಎಂದ ಎಬಿ ಡಿವಿಲಿಯರ್ಸ್

- Advertisement -

ಬೆಂಗಳೂರು : AB de Villiers RCB :ಇಂಡಿಯನ್‌ ಪ್ರೀಮಿಯರ್‌ ಲೀಗ್‌ 2023ರ (IPL 2023) ಆವೃತ್ತಿಗೆ ಸಿದ್ದತೆಗಳು ಈಗಾಗಲೇ ನಡೆಯುತ್ತಿದೆ. ಇದುವರೆಗೂ ಐಪಿಎಲ್‌ ಟ್ರೋಫಿ ಗೆಲ್ಲದ ಆರ್‌ಸಿಬಿ ತಂಡ ಟ್ರೋಫಿ ಗೆಲ್ಲಲು ಸಕಲ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದೆ. ಈ ನಡುವಲ್ಲೇ ಆರ್‌ಸಿಬಿ ಅಭಿಮಾನಿಗಳಿಗೆ ದಕ್ಷಿಣ ಆಫ್ರಿಕಾದ ಬಲಾಢ್ಯ ಆಟಗಾರ ಎಬಿ ಡಿವಿಲಿಯರ್ಸ್‌ ಗುಡ್‌ನ್ಯೂಸ್‌ ಕೊಟ್ಟಿದ್ದಾರೆ. ಮುಂದಿನ ವರ್ಷದ ಐಪಿಎಲ್‌ನಲ್ಲಿ ಆರ್‌ಸಿ ತಂಡಕ್ಕೆ ಪುನರಾಗಮನದ ಸುದ್ದಿ ಕೊಟ್ಟಿದ್ದಾರೆ.

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಸ್ಪೋಟಕ ಆಟಗಾರ ಎಬಿ ಡಿವಿಲಿಯರ್ಸ್‌ ಐಪಿಎಲ್‌ಗೆ ಗುಡ್‌ಬೈ ಹೇಳಿದ್ದರು. ನಂತರದಲ್ಲಿ ಮತ್ತೆ ಆರ್‌ಸಿಬಿ ತಂಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಅನ್ನೋ ಸುದ್ದಿಗಳು ಹರಿದಾಡಿದ್ದವು. ಆದರೆ ಕಳೆದ ಸೀಸನ್‌ನಲ್ಲಿ ಎಬಿಡಿ ಕಾಣಿಸಿಕೊಂಡಿರಲಿಲ್ಲ. ಆದ್ರೀಗ ಮತ್ತೆ ಎಬಿಡಿ ಆರ್‌ಸಿಬಿ ಪರ ಆಡ್ತಾರೆ ಅನ್ನೋ ಮಾತುಗಳು ಕೇಳಿಬಂದಿದ್ದವು. ಈ ನಡುವಲ್ಲೇ ಟ್ವಿಟರ್ ಸ್ಪೇಸ್‌ಗಳ ಸಂವಾದ ನಡೆಸಿರುವ ಎಬಿ ಡಿವಿಲಿಯರ್ಸ್ ತಮ್ಮ ಪುನರಾಗಮನದ ಸುಳಿವು ಕೊಟ್ಟಿದ್ದಾರೆ. ಮುಂದಿನ ವರ್ಷ ನಾನು ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಮರಳುವುದಾಗಿ ಹೇಳಿಕೊಂಡಿದ್ದಾರೆ. ಅಲ್ಲದೇ ಕಳೆದ ಒಂದು ದಶಕಗಳಿಂದಲೂ ಬೆಂಬಲ ನೀಡಿರುವ ಎಲ್ಲಾ ಅಭಿಮಾನಿಗಳಿಗೂ ಅವರು ಧನ್ಯವಾದ ಹೇಳಿದ್ದಾರೆ.

ಕಳೆದ ಒಂದು ವರ್ಷದಿಂದಲೂ ವಿಶ್ರಾಂತಿಯಲ್ಲಿರುವ ಎಬಿಡಿ ಇದೀಗ ಮತ್ತೆ ತನ್ನ ಎರಡನೇ ತವರಿಗೆ ಮರಳುವುದಾಗಿ ವಿಯು ಸ್ಟೋರ್ಟ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಬೆಂಗಳೂರು ನನ್ನ ಎರಡನೇ ತವರು ಮನೆ ಹೀಗಾಗಿ ನಾನು ಎರಡನೇ ತವರಿಗೆ ಮರಳಲು ಇಷ್ಟಪಡುತ್ತಿದ್ದೇನೆ. ನಾನು ಮುಂದಿನ ವರ್ಷ ಆರ್‌ಸಿಬಿ ತಂಡದಲ್ಲಿ ಇರಲಿದ್ದೇನೆ. ಕಳೆದ ಒಂದು ವರ್ಷಗಳ ಕಾಲ ಸಾಕಷ್ಟು ಮಿಸ್‌ ಮಾಡಿಕೊಂಡಿದ್ದೇನೆ. ಆದರೆ ನಾನು ಯಾವ ರೀತಿಯಲ್ಲಿ ಆರ್‌ಸಿಬಿ ತಂಡದಲ್ಲಿಇರುತ್ತೇನೆ ಅನ್ನೋದು ನನಗೆ ಗೊತ್ತಿಲ್ಲ ಎಂದಿದ್ದಾರೆ.

ದಕ್ಷಿಣ ಆಫ್ರಿಕಾ ತಂಡದ ಖ್ಯಾತ ಆಟಗಾರ ಎಬಿಡಿ 360 ಡಿಗ್ರಿ ಆಟದ ಮೂಲಕ ಹೆಚ್ಚು ಪ್ರಖ್ಯಾತಿಯನ್ನು ಪಡೆದುಕೊಂಡಿದ್ದರು. ದಕ್ಷಿಣ ಆಫ್ರಿಕಾ ತಂಡದ ಪರವಾಗಿ ಒಟ್ಟಿ 228 ಏಕದಿನ ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದು, ಈ ಪೈಕಿ 9,577 ರನ್ ಗಳಿಸುವ ಮೂಲಕ ಶ್ರೇಷ್ಟ ವೈಟ್‌ ಬಾಲ್‌ ಕ್ರಿಕೆಟಿಗ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ಏಪ್ರಿಲ್ 2008 ರಲ್ಲಿ ಭಾರತದ ವಿರುದ್ಧ 217 ರನ್ ಸಿಡಿಸಿದಾಗ ಟೆಸ್ಟ್‌ನಲ್ಲಿ ದ್ವಿಶತಕ ಗಳಿಸಿದ ಮೊದಲ ದಕ್ಷಿಣ ಆಫ್ರಿಕಾದ ಆಟಗಾರ ಎಂಬ ಖ್ಯಾತಿಗೆ ಪಾತ್ರರಾಗಿದ್ದರು. ಏಕದಿನ ಪಂದ್ಯಗಳಲ್ಲಿ ಅತ್ಯಂತ ಅಪಾಯಕಾರಿ ಆಟಗಾರ ಎನಿಸಿಕೊಂಡಿರುವ ಡಿವಿಲಿಯರ್ಸ್ ಜನವರಿ 2018ರಲ್ಲಿ ಕ್ರಮವಾಗಿ 16 ಎಸೆತಗಳಲ್ಲಿ ಅರ್ಧ ಶತಕ ಹಾಗೂ 31 ಎಸೆತಗಳಲ್ಲಿ ವೇಗದ ಶತಕ ಬಾರಿಸುವ ಮೂಲಕ ವಿಶಿಷ್ಟ ದಾಖಲೆಯನ್ನು ಬರೆದಿದ್ದರು.

2008 ರಲ್ಲಿ ಐಪಿಎಲ್‌ ಪಂದ್ಯಾವಳಿ ಆರಂಭವಾದಾಗಲೇ ಎಡಿಬಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸೇರಿದ್ದರು. ಐಪಿಎಲ್‌ನಲ್ಲಿ 170 ಇನ್ನಿಂಗ್ಸ್‌ಗಳಿಂದ 38.70 ಸರಾಸರಿ ಮತ್ತು 151.68 ಸ್ಟ್ರೈಕ್ ರೇಟ್‌ನಲ್ಲಿ 5,162 ರನ್‌ಗಳಿಸಿದ್ದು, ಐಪಿಎಲ್‌ ಪಂದ್ಯಾವಳಿಯಲ್ಲಿ ಅತೀ ಹೆಚ್ಚು ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದ್ದಾರೆ.

ಇದನ್ನೂ ಓದಿ : KL Rahul T20 cricket : 22 ಅರ್ಧಶತಕ, 19 ಗೆಲುವು, ಮೂರೇ ಸೋಲು, ಟಿ20 ಕ್ರಿಕೆಟ್‌ನಲ್ಲಿ ರಾಹುಲ್ ಕಮಾಲ್

ಇದನ್ನೂ ಓದಿ : Mitchell Johnson Yusuf Pathan : ಲೆಜೆಂಡ್ಸ್ ಲೀಗ್ ಕ್ರಿಕೆಟ್: ಯೂಸುಫ್ ಪಠಾಣ್ ಮೇಲೆ ಮೈದಾನದಲ್ಲೇ ಹಲ್ಲೆ ನಡೆಸಿದ ಆಸೀಸ್ ವೇಗಿ ಜಾನ್ಸನ್

AB de Villiers said he will play for RCB in IPL 2023

Arun Gundmi | ಅರುಣ್ ಗುಂಡ್ಮಿ
Arun Gundmi Editor In Chief News Next Kannada. Working in more than 20 Years in Kannada Media (Print, Digital and News Channels. Kannada News Next Live brings latest news from Karnataka, India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular