ಸೋಮವಾರ, ಏಪ್ರಿಲ್ 28, 2025
HomeSportsCricketMurali Vijay : ಡಿಕೆ ಕಂಬ್ಯಾಕ್ ಮಾಡಿದ್ದನ್ನು ನೋಡಿ ರೊಚ್ಚಿಗೆದ್ದ ಮುರಳಿ ವಿಜಯ್ ಮಾಡಿದ್ದೇನು...

Murali Vijay : ಡಿಕೆ ಕಂಬ್ಯಾಕ್ ಮಾಡಿದ್ದನ್ನು ನೋಡಿ ರೊಚ್ಚಿಗೆದ್ದ ಮುರಳಿ ವಿಜಯ್ ಮಾಡಿದ್ದೇನು ಗೊತ್ತಾ?

- Advertisement -

ಚೆನ್ನೈ: ದಿನೇಶ್ ಕಾರ್ತಿಕ್ (Dinesh Karthik) 37ನೇ ವರ್ಷದಲ್ಲಿ ಟೀಮ್ ಇಂಡಿಯಾಗೆ ಕಂಬ್ಯಾಕ್ ಮಾಡಿದ್ದೇ ಒಂದು ರೋಚಕ ಸ್ಟೋರಿ. ಡಿಕೆ ಕಂಬ್ಯಾಕ್ ಮಾಡಿದ್ದನ್ನು ನೋಡಿ ರೊಚ್ಚಿಗೆದ್ದೋ ಏನೋ, ಕ್ರಿಕೆಟ್’ನಿಂದ ದೂರ ಉಳಿದಿದ್ದ ಮುರಳಿ ವಿಜಯ್ ಮತ್ತೆ ಕ್ರಿಕೆಟ್ ಮೈದಾನಕ್ಕೆ ಮರಳಿದ್ದಾರೆ (Murali Vijay Comeback to cricket).

ದಿನೇಶ್ ಕಾರ್ತಿಕ್ ಮತ್ತು ಮುರಳಿ ವಿಜಯ್ ಅಂದಾಕ್ಷಣ ಕಣ್ಮುಂದೆ ಬರುವುದು ಇವರಿಬ್ಬರ ಗೆಳೆತನ, ಆ ಗೆಳೆತನಕ್ಕೆ ಮುರಳಿ ವಿಜಯ್ ಮಾಡಿದ್ದ ಮೋಸ. ಬಾಲ್ಯದ ಗೆಳೆಯ ದಿನೇಶ್ ಕಾರ್ತಿಕ್ ಅವರ ಪತ್ನಿಯನ್ನೇ ಪ್ರೀತಿಸಿ ಕೊನೆಗೆ ಆಕೆಯನ್ನೇ ಮದುವೆಯಾದವರು ಮುರಳಿ ವಿಜಯ್. ಸ್ನೇಹಿತ ಮಾಡಿದ್ದ ಮಿತ್ರದ್ರೋಹ ದಿನೇಶ್ ಕಾರ್ತಿಕ್ ಅವರನ್ನು ಇನ್ನಿಲ್ಲದಂತೆ ಕಂಗೆಡಿಸಿ ಬಿಟ್ಟಿತ್ತು. ಆದರೆ ಛಲದಂಕಮಲ್ಲನಂತೆ ಮತ್ತೆ ಪುಟಿದೆದ್ದು ನಿಂತಿದ್ದ ಡಿಕೆ, ಐಪಿಎಲ್’ನಲ್ಲಿ ಮಿಂಚಿ ಈಗ 37ನೇ ವರ್ಷದಲ್ಲಿ ಭಾರತ ತಂಡಕ್ಕೆ ಮರಳಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಗೆ (India Vs South Africa T20 Series) ಆಯ್ಕೆಯಾಗಿದ್ದ ಡಿಕೆ, ಐರ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲೂ ಆಡುತ್ತಿದ್ದಾರೆ. ಮುಂದಿನ ಅಕ್ಟೋಬರ್-ನವೆಂಬರ್’ನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್”ನಲ್ಲಿ (ICC T20 World Cup 2022) ಆಡಲಿರುವ ಭಾರತ ತಂಡದಲ್ಲಿ ದಿನೇಶ್ ಕಾರ್ತಿಕ್ ಸ್ಥಾನ ಪಡೆಯುವುದು ಖಚಿತ.

ಹೀಗೆ ಡಿಕೆ ಕ್ರಿಕೆಟ್ ಕರಿಯರ್ ಏರುಗತಿಯಲ್ಲಿ ಸಾಗುತ್ತಿದ್ದರೆ, ಅತ್ತ ಮುರಳಿ ವಿಜಯ್ (Murali Vijay) ಕಳೆದೆರಡು ವರ್ಷಗಳಿಂದ ಕ್ರಿಕೆಟ್’ನಿಂದ ದೂರವಾಗಿದ್ರು. 2020ರ ಸೆಪ್ಟೆಂಬರ್ 25ರಂದು ದುಬೈನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಐಪಿಎಲ್ ಪಂದ್ಯವಾಡಿದ್ದೇ ಕೊನೆ. ನಂತರ ಮುರಳಿ ವಿಜಯ್ ಮೈದಾನದಲ್ಲಿ ಕಾಣಿಸಿಕೊಂಡಿರಲಿಲ್ಲ. ಈಗ ಮತ್ತೆ ಕ್ರಿಕೆಟ್ ಮೈದಾನಕ್ಕೆ ಮರಳಿರುವ 38 ವರ್ಷದ ಮುರಳಿ ವಿಜಯ್, ತಮಿಳುನಾಡು ಪ್ರೀಮಿಯರ್ ಲೀಗ್”ನಲ್ಲಿ (Tamil Nadu Premier League TNPL) ರುಬಿ ತ್ರಿಚಿ ವಾರಿಯರ್ಸ್ (Ruby Trichy Warriors) ತಂಡದ ಪರ ಆಡಲಿದ್ದಾರೆ.

2018ರಲ್ಲಿ ಪರ್ತ್”ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಪಂದ್ಯದ ನಂತ್ರ ಮುರಳಿ ವಿಜಯ್ ಭಾರತ ಪರ ಟೆಸ್ಟ್ ಆಡಿಲ್ಲ. ಟೀಮ್ ಇಂಡಿಯಾ ಪರ ಕೊನೆಯ ಏಕದಿನ ಹಾಗೂ ಟಿ20 ಪಂದ್ಯವಾಡಿದ್ದು 2015ರಲ್ಲಿ. ಬಲಗೈ ಬ್ಯಾಟ್ಸ್’ಮನ್ ಮುರಳಿ ವಿಜಯ್ ಭಾರತ ಪರ 61 ಟೆಸ್ಟ್ ಪಂದ್ಯಗಳನ್ನಾಡಿದ್ದು, 38ರ ಸರಾಸರಿಯಲ್ಲಿ 12 ಶತಕಗಳ ಸಹಿತ 3,982 ರನ್ ಗಳಿಸಿದ್ದಾರೆ. 17 ಏಕದಿನ ಪಂದ್ಯಗಳಿಂದ 339 ರನ್ ಮತ್ತು 9 ಟಿ20 ಪಂದ್ಯಗಳಿಂದ 169 ರನ್ ಕಲೆ ಹಾಕಿದ್ದಾರೆ.

ಇದನ್ನೂ ಓದಿ : India tour of England : ಇಂಗ್ಲೆಂಡ್ ಪ್ರವಾಸದಲ್ಲಿರುವ ಟೀಮ್ ಇಂಡಿಯಾಗೆ ಬಿಗ್ ಶಾಕ್

ಇದನ್ನೂ ಓದಿ : India vs Leicestershire warm up match : ಪೂಜಾರ ಕ್ಲೀನ್ ಬೌಲ್ಡ್ ಮಾಡಿದ ಶಮಿ

After Dinesh Karthik Comeback to cricket Murali Vijay Playing Tamil Nadu Premier League TNPL Ruby Trichy Warriors

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular