Akash Singh join CSK: ಐಪಿಎಲ್ 2023 ರಲ್ಲಿ ಮುಖೇಶ್ ಚೌಧರಿ ಬದಲಿಗೆ ಸಿಎಸ್‌ಕೆ ಸೇರಿದ ಆಕಾಶ್ ಸಿಂಗ್

(Akash Singh join CSK) ಐಪಿಎಲ್ 2023ರ ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್, ಕಳೆದ ವರ್ಷದ ಚಾಂಪಿಯನ್ ಆದ ಗುಜರಾತ್ ಟೈಟಾನ್ಸ್ ತಂಡವನ್ನು ಎದುರಿಸಲಿದ್ದು, ಐಪಿಎಲ್ 2023 ರಲ್ಲಿ ಮುಖೇಶ್ ಚೌಧರಿ ಬದಲಿಗೆ ಆಕಾಶ್ ಸಿಂಗ್ ಸಿಎಸ್‌ಕೆ ಸೇರಿದ್ದಾರೆ. ನಾಲ್ಕು ಬಾರಿಯ ಚಾಂಪಿಯನ್ ಸಿಎಸ್ ಕೆ ತಂಡದ ಬೌಲರ್‌ ಚೌದರಿ ಅವರು ಗಾಯಗೊಂಡಿದ್ದು, ಅದರಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಈ ಕಾರಣಕ್ಕೆ ಟಾಟಾ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನ 16 ನೇ ಆವೃತ್ತಿಯಿಂದ ಹೊರಗುಳಿದಿದ್ದಾರೆ.

2020 ರಲ್ಲಿ ಭಾರತದ ಅಂಡರ್-19 ವಿಶ್ವಕಪ್ ತಂಡದ ಭಾಗವಾಗಿದ್ದ ಆಕಾಶ್ ಸಿಂಗ್ ಈ ಹಿಂದೆ ರಾಜಸ್ಥಾನ್ ರಾಯಲ್ಸ್ ಪರ ಆಡಿದ್ದರು. ಎಡಗೈ ವೇಗಿ ಇದುವರೆಗೆ ಒಂಬತ್ತು ಲಿಸ್ಟ್ ಎ ಪಂದ್ಯಗಳು ಮತ್ತು ಐದು ಪ್ರಥಮ ದರ್ಜೆ ಪಂದ್ಯಗಳ ಜೊತೆಗೆ ಒಂಬತ್ತು ಟಿ 20 ಪಂದ್ಯಗಳನ್ನು ಆಡಿದ್ದು, 31 ವಿಕೆಟ್‌ಗಳನ್ನು ಪಡೆದಿದ್ದಾರೆ. ಇದೀಗ ಅವರು ತಮ್ಮ ಮೂಲ ಬೆಲೆ 20 ಲಕ್ಷದಲ್ಲಿ CSK ತಂಡ ಸೇರಿಕೊಂಡಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸ್ಟಾರ್ ಆಟಗಾರ ಮುಖೇಶ್ ಚೌಧರಿ ಅವರು ಗಾಯಗೊಂಡು ಐಪಿಎಲ್ 2023 ರಿಂದ ಹೊರಗುಳಿದಿದ್ದಾರೆ. ಆರಂಭದಲ್ಲಿ ಎಡಗೈ ವೇಗಿ ಚೌಧರಿ ಅವರು ಪಂದ್ಯದ ಮೊದಲಾರ್ಧದಲ್ಲಿ ಆಡುವುದಿಲ್ಲ ಎಂದು ನಿರ್ಧರಿಸಲಾಗಿತ್ತು. ಆದರೆ ಅವರ ಹದಗೆಟ್ಟ ಆರೋಗ್ಯ ಸ್ಥೀತಿಯಿಂದಾಗಿ ಐಪಿಎಲ್ ೨೦೨೩ ರಿಂದ ಹೊರಗುಳಿದಿದ್ದಾರೆ. ಈ ಸುದ್ದಿಯು ಗುಜರಾತ್ ಟೈಟಾನ್ಸ್ ವಿರುದ್ಧ ತಮ್ಮ ಅಭಿಯಾನವನ್ನು ಪ್ರಾರಂಭಿಸುವ ಎಂಎಸ್ ಧೋನಿ ಮತ್ತು ತಂಡಕ್ಕೆ ದೊಡ್ಡ ಹೊಡೆತವಾಗಿದೆ.

ಮುಖೇಶ್ ಚೌಧರಿ ಪ್ರಸ್ತುತ NCA ಯಲ್ಲಿ ತಮ್ಮ ಅಭ್ಯಾಸ ಮುಂದುವರೆಸುತ್ತಿದ್ದಾರೆ. ಎಡಗೈ ಸೀಮರ್ ಬೆನ್ನುನೋವಿನಿಂದ ಹೋರಾಡುತ್ತಿದ್ದು, ಇಡೀ ಪಂದ್ಯಾವಳಿಯನ್ನು ಕಳೆದುಕೊಳ್ಳಲಿದ್ದಾರೆ. ಕಳೆದ ವರ್ಷ ಐಪಿಎಲ್ 2022 ರ ಮೆಗಾ ಹರಾಜಿನಲ್ಲಿ ಮಹಾರಾಷ್ಟ್ರದ ಎಡಗೈ ವೇಗಿ ಅವರನ್ನು CSK 20 ಲಕ್ಷಕ್ಕೆ ಖರೀದಿಸಿತು.

ಇದನ್ನೂ ಓದಿ : WPL 2023: ಚಾಂಪಿಯನ್ ಅದ ಮುಂಬೈ ಇಂಡಿಯನ್ಸ್

ಇದನ್ನೂ ಓದಿ : Women’s Premier League final : ಮುಂಬೈ ಇಂಡಿಯನ್ಸ್ Vs ಡೆಲ್ಲಿ ಕ್ಯಾಪಿಟಲ್ಸ್, ಯಾರು ಚಾಂಪಿಯನ್ಸ್? ಇಲ್ಲಿದೆ ಫೈನಲ್ ಪಂದ್ಯದ ಕಂಪ್ಲೀಟ್ ಮಾಹಿತಿ

ಇದನ್ನೂ ಓದಿ : RCB Unbox : ನಾಳೆ ಚಿನ್ನಸ್ವಾಮಿಯಲ್ಲಿ ಮಹಾ ಸಂಗಮ, ಮತ್ತೆ ಒಟ್ಟಾಗಿ ಕಾಣಿಸಿಕೊಳ್ಳಲಿದ್ದಾರೆ ಕಿಂಗ್ ಕೊಹ್ಲಿ, ಗೇಲ್, ಎಬಿಡಿ

Akash Singh join CSK: Akash Singh to replace Mukesh Chaudhary in IPL 2023

Comments are closed.