Suicide on lodge: ಮಂಗಳೂರಿನ ಲಾಡ್ಜ್ ನಲ್ಲಿ ಒಂದೇ ಕುಟುಂಬದ ನಾಲ್ವರು ಸಾಮೂಹಿಕ ಆತ್ಮಹತ್ಯೆ

ಮಂಗಳೂರು : (Suicide on lodge) ನಗರದ ಲಾಡ್ಜ್‌ ಒಂದರಲ್ಲಿ ಒಂದೇ ಕುಟುಂಬದ ನಾಲ್ಕು ಮಂದಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳೂರಿನ ಕೆಎಸ್‌ ರಾವ್‌ ರೋಡ್‌ ನಲ್ಲಿರುವ ಕರುಣಾ ಲಾಡ್ಜ್‌ ನಲ್ಲಿ ನಡೆದಿದೆ. ಆದರೆ ಆತ್ಮಹತ್ಯೆ ಮಾಡಿಕೊಂಡವರ ವಿವರ ಇನ್ನೂ ಲಭ್ಯವಾಗಿಲ್ಲ. ಇದೀಗ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.

ಕೆಎಸ್‌ ರಾವ್‌ ರೋಡ್‌ ನಲ್ಲಿರುವ ಕರುಣಾ ಲಾಡ್ಜ್‌ ನಲ್ಲಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣಗಳೇನು ಎನ್ನುವುದು ತಿಳಿದುಬಂದಿಲ್ಲ. ಪ್ರಾಥಮಿಕವಾಗಿ ಆತ್ಮಹತ್ಯೆ ಮಾಡಿಕೊಂಡ ಕುಟುಂಬ ಕೇರಳ ಅಥವಾ ಕಾಸರಗೋಡು ಮೂಲದವರು ಎನ್ನುವುದು ಕಂಡುಬಂದಿದೆ. ನಂತರದಲ್ಲಿ ಇವರು ಮೈಸೂರು ಮೂಲದವರು ಎಂಬ ಮಾಹಿತಿ ಲಭ್ಯವಾಗಿದೆ.

ಕರುಣಾ ಲಾಡ್ಜ್‌ ನಲ್ಲಿ ಮೈಸೂರು ಮೂಲದ ದೇವೇಂದ್ರ ಎನ್ನುವವರ ಕುಟುಂಬ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದೇವೇಂದ್ರ ಅವರು ಎರಡು ಹೆಣ್ಣು ಮಕ್ಕಳ ಸಹಿತ ಆತ್ಮಹತ್ಯೆಗೆ ಶರಣಾಗಿದ್ದು, ಡೆತ್‌ ನೋಟ್‌ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ. ಹೆಂಡತಿ ಹಾಗೂ ಮಕ್ಕಳಿಗೆ ವಿಷ ನೀಡಿ ನಂತರ ತಾನು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರು ಮೈಸೂರಿನ ವಾಣಿವಿಲಾಸ ಬಡಾವಣೆಯ ನಿವಾಸಿ ಎಂದು ತನಿಖೆಯ ವೇಳೆ ತಿಳಿದುಬಂದಿದೆ.

ಇದರ ಹೊರತಾಗಿ ಸಾವಿಗೆ ಸಂಬಂಧಿಸಿದಂತೆ ಯಾವುದೇ ಮಾಹಿತಿಗಳು ಲಭ್ಯವಾಗಿಲ್ಲ. ಸ್ಥಳಕ್ಕೆ ಧಾವಿಸಿದ ಮಂಗಳೂರು ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ. ಈ ಬಗ್ಗೆ ನಿಖರ ಮಾಹಿತಿಗಳು ಇನ್ನಷ್ಟೇ ಲಭ್ಯವಾಗಬೇಕಿದೆ.

ಇದನ್ನೂ ಓದಿ : Dhaiva nartaka death : ದೈವ ನರ್ತನ ಸೇವೆ ಮಾಡುತ್ತಿರುವಾಗಲೇ ಕುಸಿದು ಬಿದ್ದು ದೈವ ನರ್ತಕ ಸಾವು

ಎರಡು ಟ್ರಕ್‌ಗಳ ನಡುವೆ ಢಿಕ್ಕಿ: ಸೇತುವೆಯಿಂದ ಟ್ರಕ್‌ ಬಿದ್ದು 3 ಮಂದಿ ಸಾವು

ಉತ್ತರ ಪ್ರದೇಶ: ಫಾಫಮೌ ಸೇತುವೆಯಲ್ಲಿ ಶುಕ್ರವಾರ ಎರಡು ಟ್ರಕ್‌ಗಳು ಪರಸ್ಪರ ಢಿಕ್ಕಿ ಹೊಡೆದು ಮೂವರು ಸಾವನ್ನಪ್ಪಿರುವ ಘಟನೆ ಪ್ರಯಾಗ್‌ರಾಜ್‌ನಲ್ಲಿ ನಡೆದಿದೆ. ಢಿಕ್ಕಿಯ ರಭಸಕ್ಕೆ ಒಂದು ಟ್ರಕ್ ಸೇತುವೆಯಿಂದ ಕೆಳಗೆ ಬಿದ್ದರೆ, ಇನ್ನೊಂದು ಸೇತುವೆಯ ರೇಲಿಂಗ್‌ನಲ್ಲಿ ಸಿಲುಕಿಕೊಂಡಿದೆ.

ಫಾಫಮೌ ಸೇತುವೆಯಲ್ಲಿ ಶುಕ್ರವಾರ ಎರಡು ಟ್ರಕ್‌ಗಳು ಪರಸ್ಪರ ಢಿಕ್ಕಿ ಹೊಡೆದು ಒಂದು ಟ್ರಕ್ ಸೇತುವೆಯಿಂದ ಕೆಳಗೆ ಬಿದ್ದರೆ, ಇನ್ನೊಂದು ಸೇತುವೆಯ ರೇಲಿಂಗ್‌ನಲ್ಲಿ ಸಿಲುಕಿಕೊಂಡಿದೆ. ಪರಿಣಾಮ ಕೆಳಗೆ ಬಿದ್ದ ಟ್ರಕ್‌ ನಲ್ಲಿದ್ದ ಚಾಲಕ ಮತ್ತು ಸಹಾಯಕನ ಜೊತೆಗೆ ಇನ್ನೋರ್ವ ಬೈಕ್‌ ಸವಾರ ಸೇರಿದಂತೆ ಮೂವರು ಸಾವನ್ನಪ್ಪಿದ್ದಾರೆ. ಮೃತರನ್ನು ಹಿಮಾಂಶು ಸಾಹು (ಟ್ರಕ್ ಚಾಲಕ), ಸಹಾಯಕ ಅಂಶು ಸಾಹು ಮತ್ತು ಮೋಟಾರ್ ಸೈಕಲ್ ಸವಾರ ಬಜರಂಗ್ ಬಹದ್ದೂರ್ ಸಿಂಗ್ ಎಂದು ಗುರುತಿಸಲಾಗಿದೆ. ಅಪಘಾತದ ಬಳಿಕ ಸ್ಥಳದಲ್ಲಿ ಭಾರೀ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರಿಂದ ವಾಹನ ಸಂಚಾರ ಸ್ಥಗಿತಗೊಂಡಿತು

ಇದನ್ನೂ ಓದಿ : Rama Navami: ಹಿಂಸಾತ್ಮಕ ರೂಪ ತಾಳಿದ ರಾಮನವಮಿ: ರಾಮಮಂದಿರದ ಹೊರಗೆ ಕಲ್ಲು ತೂರಾಟ, ವಾಹನಗಳಿಗೆ ಬೆಂಕಿ

ಇದನ್ನೂ ಓದಿ : Shoot and escape: ಕುರ್ಚಿಯ ವಿಚಾರಕ್ಕೆ ವಾದ: ಸಹೋದ್ಯೋಗಿಯ ಮೇಲೆ ಗುಂಡು ಹಾರಿಸಿ ವ್ಯಕ್ತಿ ಪರಾರಿ

Suicide on lodge: Four members of the same family committed mass suicide at a lodge in Mangalore

Comments are closed.