ಶಾರ್ಜಾ: (Angry Afghanistan Fans) ಕ್ರಿಕೆಟ್’ನಲ್ಲಿ ಭಾರತ ಹಾಗೂ ಪಾಕಿಸ್ತಾನ (India vs Pakistan) ತಂಡಗಳು ಹೇಗೆ ಸಾಂಪ್ರದಾಯಿಕ ಎದುರಾಳಿಗಳೋ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ (Pakistan And Afghanistan) ಮಧ್ಯೆಯೂ ಅದೇ ರೀತಿಯ ಕ್ರಿಕೆಟ್ ವೈರತ್ವವಿದೆ. ಎರಡೂ ದೇಶಗಳ ನಡುವಿನ ರಾಜಕೀಯ ಸಂಘರ್ಷದ ಬಿಸಿ ಕ್ರಿಕೆಟ್ ಮೈದಾನಕ್ಕೂ ತಟ್ಟಿದ್ದು, ಆಫ್ಘನ್-ಪಾಕ್ ಪಂದ್ಯಗಳು ಭಾರೀ ಪೈಪೋಟಿಯಿಂದ ಕೂಡಿರುತ್ತವೆ.
ಬುಧವಾರ ಶಾರ್ಜಾದಲ್ಲಿ ನಡೆದ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ (Pakistan And Afghanistan) ನಡುವಿನ ಏಷ್ಯಾ ಕಪ್ (Asia Cup 2022) ಪಂದ್ಯವೂ ಅಂಥದ್ದೇ ಘಟನೆಗಳಿಗೆ ಸಾಕ್ಷಿಯಾಯ್ತು. ಪಾಕಿಸ್ತಾನ ವಿರುದ್ಧ ಕೇವಲ ಒಂದು ವಿಕೆಟ್ ಅಂತರದಲ್ಲಿ ಸೋತ ಅಫ್ಘಾನಿಸ್ತಾನ ಟೂರ್ನಿಯಿಂದ ಹೊರ ಬಿತ್ತು. ತಮ್ಮ ತಂಡ ಸೋತ ಹತಾಶೆಯಿಂದ (Angry Afghanistan Fans)ಅಫ್ಘಾನಿಸ್ತಾನ ತಂಡದ ಅಭಿಮಾನಿಗಳು ಶಾರ್ಜಾ ಕ್ರೀಡಾಂಗಣದ ಕುರ್ಚಿಗಳನ್ನು ಧ್ವಂಸ ಮಾಡಿದ್ದಾರೆ. ಕುರ್ಚಿಯಿಂದ ಪಾಕ್ ಅಭಿಮಾನಿಯೊಬ್ಬನಿಗೆ ಹಲ್ಲೆ ನಡೆಸಿರುವ ದೃಶ್ಯವನ್ನು ಪಾಕಿಸ್ತಾನದ ಮಾಜಿ ವೇಗದ ಬೌಲರ್ ಟ್ವೀಟ್ ಮಾಡಿದ್ದು, ಆಫ್ಘನ್ ಅಭಿಮಾನಿಗಳ ವರ್ತನೆಗೆ ಕಿಡಿ ಕಾರಿದ್ದಾರೆ.
ಇದೇ ಪಂದ್ಯದಲ್ಲಿ ಪಾಕಿಸ್ತಾನ ಆಟಗಾರ ಆಸಿಫ್ ಅಲಿ ಅಫ್ಘಾನಿಸ್ತಾನದ ಬೌಲರ್ ಫರೀದ್ ಅಹ್ಮದ್’ಗೆ ಬ್ಯಾಟ್’ನಿಂದ ಹಲ್ಲೆ ನಡೆಸಲು ಮುಂದಾದ ಘಟನೆಯೂ ನಡೆದಿದೆ. ಗೆಲ್ಲಲು ಅಫ್ಘಾನಿಸ್ತಾನ ಒಡ್ಡಿದ 130 ರನ್’ಗಳ ಗುರಿ ಬೆನ್ನಟ್ಟಿದ ಪಾಕಿಸ್ತಾನ ಒಂದು ಹಂತದಲ್ಲಿ 110 ರನ್ನಿಗೆ 8 ವಿಕೆಟ್ ಕಳೆದುಕೊಂಡು ಸೋಲಿನ ಸುಳಿಗೆ ಸಿಲುಕಿತ್ತು. ಈ ವೇಳೆ ಕ್ರೀಸ್’ನಲ್ಲಿದ್ದ ಪಾಕ್ ದಾಂಡಿಗ ಆಸಿಫ್ ಅಲಿ 2 ಸಿಕ್ಸರ್ ಸಿಡಿಸಿ ತಂಡಕ್ಕೆ ಗೆಲುವಿನ ಆಸೆ ಚಿಗುರಿಸಿದರು. ಅಫ್ಘಾನಿಸ್ತಾನದ ಎಡಗೈ ಮಧ್ಯಮ ವೇಗಿ ಫರೀದ್ ಅಹ್ಮದ್ ಎಸೆದ 19ನೇ ಓವರ್’ನ 4ನೇ ಎಸೆತವನ್ನು ಸಿಕ್ಸರ್’ಗಟ್ಟಿದ ಆಸಿಫ್ ಅಲಿ, 5ನೇ ಎಸೆತದಲ್ಲೂ ಸಿಕ್ಸರ್ ಬಾರಿಸುವ ಪ್ರಯತ್ನದಲ್ಲಿ ಔಟಾದರು. ಈ ವೇಳೆ ಆಸಿಫ್ ಅಲಿಗೆ ಫರೀದ್ ಅಹ್ಮದ್ ಪೆವಿಲಿಯನ್’ನತ್ತ ಕೈ ತೋರಿಸಿ ಸೆಂಡ್ ಆಫ್ ಹೇಳಿದರು. ಇದರಿಂದ ಸಿಟ್ಟಿಗೆದ್ದ ಆಸಿಫ್ ಅಲಿ, ಆಫ್ಘನ್ ಆಟಗಾರನ ಜೊತೆ ವಾಗ್ವಾದಕ್ಕಿಳಿದರು. ಫರೀದ್ ಅಹ್ಮದ್ ಅವರನ್ನು ತಳ್ಳಿದ ಆಸಿಫ್ ಅಲಿ, ಬ್ಯಾಟ್’ನಿಂದ ಹಲ್ಲೆ ನಡೆಸಲು ಮುಂದಾದರು. ಈ ದೃಶ್ಯ ಕ್ಯಾಮರಾ ಕಣ್ಣಿನಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆಸಿಫ್ ಅಲಿಯ ಈ ವರ್ತನೆಗೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.
118 ರನ್ನಿಗೆ 9 ವಿಕೆಟ್ ಕಳೆದುಕೊಂಡು ಸೋಲಿನಂಚಿನಲ್ಲಿದ್ದ ಪಾಕಿಸ್ತಾನಕ್ಕೆ ಕೊನೆಯ ಓವರ್’ನಲ್ಲಿ ಗೆಲುವಿಗೆ 11 ರನ್’ಗಳು ಬೇಕಿದ್ದವು. ಕೈಯಲ್ಲಿದ್ದ ವಿಕೆಟ್ ಕೇವಲ ಒಂದು. ಅಫ್ಘಾನಿಸ್ತಾನದ ಎಡಗೈ ಮಧ್ಯಮ ವೇಗಿ ಫಜಲ್ಲಾಖ್ ಫರೂಕಿ ಎಸೆತ 20ನೇ ಓವರ್’ನ ಮೊದಲ ಎರಡೂ ಎಸೆತಗಳನ್ನು ಸಿಕ್ಸರ್’ಗಟ್ಟಿದ ಪಾಕ್ ವೇಗಿ ನಸೀಮ್ ಶಾ (Naseem Shah) ಪಾಕಿಸ್ತಾನಕ್ಕೆ 1 ವಿಕೆಟ್ ಅಂತರದ ರೋಚಕ ಗೆಲುವು ತಂದುಕೊಟ್ಟರು. ಭಾನುವಾರ ದುಬೈನಲ್ಲಿ ನಡೆಯುವ ಫೈನಲ್ ಪಂದ್ಯದಲ್ಲಿ (Team Pakistan)ಪಾಕಿಸ್ತಾನ ತಂಡ (Team Srilankaಶ್ರೀಲಂಕಾ ತಂಡವನ್ನು ಎದುರಿಸಲಿದೆ.
ಇದನ್ನೂ ಓದಿ: ಒಂದೇ ಕ್ಲಿಕ್‌ನಲ್ಲಿ ಕರ್ನಾಟಕದ ಎಲ್ಲಾ ಪಂದ್ಯಗಳ ಕಂಪ್ಲೀಟ್ ಡಿಟೈಲ್ಸ್
ಇದನ್ನೂ ಓದಿ: ಅರಬ್ ನಾಡಿನಲ್ಲಿ ಅರ್ಷದೀಪ್ ಸಿಂಗ್‌ರನ್ನು ದೇಶದ್ರೋಹಿ ಎಂದು ಹೀಯಾಳಿಸಿದ ಭಾರತೀಯ
ಇದನ್ನೂ ಓದಿ: ಏಷ್ಯಾ ಕಪ್‌ನಲ್ಲಿ ಭಾರತದ ವೈಫಲ್ಯಕ್ಕೆ ಕೋಚ್ ದ್ರಾವಿಡ್, ಕ್ಯಾಪ್ಟನ್ ರೋಹಿತ್ ಕಾರಣ