Ranji Trophy: ಒಂದೇ ಕ್ಲಿಕ್‌ನಲ್ಲಿ ಕರ್ನಾಟಕದ ಎಲ್ಲಾ ಪಂದ್ಯಗಳ ಕಂಪ್ಲೀಟ್ ಡಿಟೈಲ್ಸ್

ಬೆಂಗಳೂರು: (Ranji Trophy)8 ಬಾರಿಯ ರಣಜಿ ಚಾಂಪಿಯನ್, 4 ಬಾರಿಯ ವಿಜಯ್ ಹಜಾರೆ ಏಕದಿನ ಟ್ರೋಫಿ ಚಾಂಪಿಯನ್, 2 ಬಾರಿಯ ಸೈಲಯ್ ಮುಷ್ತಾಕ್ ಅಲಿ ಟಿ20 ಟೂರ್ನಿಯ ಚಾಂಪಿಯನ್ ಕರ್ನಾಟಕ ತಂಡ(Team Karnataka) ಪ್ರಸಕ್ತ ಸಾಲಿನ ದೇಶೀಯ ಕ್ರಿಕೆಟ್’ಗೆ ಸಜ್ಜಾಗುತ್ತಿದೆ.

ಇತ್ತೀಚಿನ ವರ್ಷಗಳಲ್ಲಿ ರಣಜಿ ಟ್ರೋಫಿ(Ranji Trophy) ಗೆಲ್ಲಲು ವಿಫಲವಾದ ಹಿನ್ನೆಲೆಯಲ್ಲಿ(Team Karnataka) ಕರ್ನಾಟಕ ತಂಡದ ಕೋಚ್’ಗಳಾಗಿದ್ದ ಯರೇಗೌಡ ಮತ್ತು ಎಸ್.ಅರವಿಂದ್ ಅವರನ್ನು ಬದಲಿಸಿ ಪಿ.ವಿ ಶಶಿಕಾಂತ್ ಅವರನ್ನು ನೂತನ ಕೋಚ್ ಆಗಿ ನೇಮಕ ಮಾಡಲಾಗಿದೆ. ಹೊಸ ಕೋಚ್ ಮಾರ್ಗದರ್ಶನದಲ್ಲಿ(Team Karnataka) ಕರ್ನಾಟಕ ತಂಡ ಅಕ್ಟೋಬರ್ ತಿಂಗಳಲ್ಲಿ ಆರಂಭವಾಗಲಿರುವ ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಆಡುವ ಮೂಲಕ ಈ ಸಾಲಿನ ದೇಶೀಯ ಕ್ರಿಕೆಟ್ ಋತುವನ್ನು ಆರಂಭಿಸಲಿದೆ. ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಕರ್ನಾಟಕದ ಎಲ್ಲಾ ಪಂದ್ಯಗಳು ಪಂಜಾಬ್’ನ ಮೊಹಾಲಿಯಲ್ಲಿ ನಡೆಯಲಿವೆ. ಈ ಟೂರ್ನಿಯ ನಂತರ ವಿಜಯ್ ಹಜಾರೆ ಟ್ರೋಫಿ ಏಕದಿನ ಟೂರ್ನಿ ನಡೆಯಲಿದ್ದು, ಪ್ರತಿಷ್ಠಿತ ರಣಜಿ ಟ್ರೋಫಿ (Ranji Trophy)ಟೂರ್ನಿ ಡಿಸೆಂಬರ್’ನಲ್ಲಿ ಆರಂಭವಾಗಲಿದೆ. (Ranji Trophy)ರಣಜಿ ಟ್ರೋಫಿಯಲ್ಲಿ (Team Karnataka)ಕರ್ನಾಟಕ ತಂಡ ಈ ವರ್ಷ ಮೂರು ಪಂದ್ಯಗಳನ್ನು ತವರು ನೆಲದಲ್ಲೇ ಆಡಲಿದೆ. ಸರ್ವಿಸಸ್, ಪಾಂಡಿಚೇರಿ ಮತ್ತು ರಾಜಸ್ಥಾನ ವಿರುದ್ಧದ ಪಂದ್ಯಗಳು ಬೆಂಗಳೂರು, ಮೈಸೂರು, ಹುಬ್ಬಳ್ಳಿ ಅಥವಾ ಶಿವಮೊಗ್ಗದಲ್ಲಿ ನಡೆಯಲಿವೆ. 2013-14 ಹಾಗೂ 2014-15ನೇ ಸಾಲಿನಲ್ಲಿ ಕರ್ನಾಟಕ ತಂಡ ಆರ್.ವಿನಯ್ ಕುಮಾರ್ ಸಾರಥ್ಯದಲ್ಲಿ(Ranji Trophy) ರಣಜಿ ಟ್ರೋಫಿ ಗೆದ್ದ ನಂತರ, ಮತ್ತೆ ರಣಜಿ ಚಾಂಪಿಯನ್ ಪಟ್ಟಕ್ಕೇರಿಲ್ಲ.

(Team Karnataka)ಕರ್ನಾಟಕ ತಂಡದ ವೇಳಾಪಟ್ಟಿ ಹೀಗಿದೆ:

  • ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿ
  • ಅಕ್ಟೋಬರ್ 11: ಕರ್ನಾಟಕ Vs ಮಹಾರಾಷ್ಟ್ರ
  • ಅಕ್ಟೋಬರ್ 12: ಕರ್ನಾಟಕ Vs ಕೇರಳ
  • ಅಕ್ಟೋಬರ್ 14: ಕರ್ನಾಟಕ Vs ಮೇಘಾಲಯ
  • ಅಕ್ಟೋಬರ್ 16: ಕರ್ನಾಟಕ Vs ಅರುಣಾಚಲ ಪ್ರದೇಶ
  • ಅಕ್ಟೋಬರ್ 20: ಕರ್ನಾಟಕ Vs ಸರ್ವಿಸಸ್
  • ಅಕ್ಟೋಬರ್ 22: ಕರ್ನಾಟಕ Vs ಹರ್ಯಾಣ


(ಎಲ್ಲಾ ಪಂದ್ಯಗಳು ಮೊಹಾಲಿಯಲ್ಲಿ ನಡೆಯಲಿವೆ)

ವಿಜಯ್ ಹಜಾರೆ ಟ್ರೋಫಿ:

  • ನವೆಂಬರ್ 12: ಕರ್ನಾಟಕ Vs ಮೇಘಾಲಯ
  • ನವೆಂಬರ್ 13: ಕರ್ನಾಟಕ Vs ವಿದರ್ಭ
  • ನವೆಂಬರ್ 15: ಕರ್ನಾಟಕ Vs ಜಾರ್ಖಂಡ್
  • ನವೆಂಬರ್ 17: ಕರ್ನಾಟಕ Vs ದೆಹಲಿ
  • ನವೆಂಬರ್ 19: ಕರ್ನಾಟಕ Vs ಅಸ್ಸಾಂ
  • ನವೆಂಬರ್ 21: ಕರ್ನಾಟಕ Vs ಸಿಕ್ಕಿಂ
  • ನವೆಂಬರ್ 23: ಕರ್ನಾಟಕ Vs ರಾಜಸ್ಥಾನ

(ಎಲ್ಲಾ ಪಂದ್ಯಗಳು ಕೋಲ್ಕತಾದಲ್ಲಿ ನಡೆಯಲಿವೆ)

(Ranji Trophy)ರಣಜಿ ಟ್ರೋಫಿ:

  • ಡಿಸೆಂಬರ್ 13-16: ಕರ್ನಾಟಕ Vs ಸರ್ವಿಸಸ್ (ತವರು ಪಂದ್ಯ)
  • ಡಿಸೆಂಬರ್ 20-23: ಕರ್ನಾಟಕ Vs ಪಾಂಡಿಚೇರಿ (ತವರು ಪಂದ್ಯ)
  • ಡಿಸೆಂಬರ್ 27-30: ಕರ್ನಾಟಕ Vs ಗೋವಾ
  • ಜನವರಿ 03-06: ಕರ್ನಾಟಕ Vs ಛತ್ತೀಸ್’ಗಢ
  • ಜನವರಿ 10-13: ಕರ್ನಾಟಕ Vs ರಾಜಸ್ಥಾನ (ತವರು ಪಂದ್ಯ)
  • ಜನವರಿ 17-20: ಕರ್ನಾಟಕ Vs ಕೇರಳ
  • ಜನವರಿ 24-27: ಕರ್ನಾಟಕ Vs ಜಾರ್ಖಂಡ್

ಇದನ್ನೂ ಓದಿ: ಜನೋತ್ಸವವೋ..? ಜನಸ್ಪಂದನವೋ..? ಗೊಂದಲ ಮೂಡಿಸಿದ ಬಿಜೆಪಿ ನಾಯಕರ ಹೇಳಿಕೆಗಳು

ಇದನ್ನೂ ಓದಿ: ರಾಹುಲ್ ಭಾರತ್ ಜೋಡೋ ಯಾತ್ರೆ

Comments are closed.