Kiccha Sudeep: ಬೆಂಗಳೂರಿಗರ ಸಂಕಷ್ಟಕ್ಕೆ‌ಮಿಡಿದ ಬಾದ್ ಶಾ: ಸಹಾಯ ನೀಡಲು ಕಿಚ್ಚ ಸುದೀಪ್ ಟ್ರಸ್ಟ್ ಸಿದ್ಧ

ಬೆಂಗಳೂರು: (Bengaluru flood Kichcha Sudeep) ಸ್ಯಾಂಡಲ್ ವುಡ್ ಬಾದ್ ಶಾ ಕಿಚ್ಚ ಸುದೀಪ್ (Kiccha Sudeep)ಸದ್ಯ ಸ್ಯಾಂಡಲ್ ವುಡ್ ಜೊತೆ ಬಾಲಿವುಡ್ ನ ಎಲ್ಲೆಯನ್ನೂ ಮೀರಿ ಪ್ಯಾನ್ ಇಂಡಿಯಾ ಸ್ಟಾರ್ ಸ್ಥಾನಕ್ಕೇರಿದ್ದಾರೆ. ವಿಕ್ರಾಂತ್ ರೋಣ ಗೆಲುವಿನ ಸಂಭ್ರಮದಲ್ಲಿ ಮೊನ್ನೆ ಮೊನ್ನೆಯಷ್ಟೇ ಅದ್ದೂರಿ ಹುಟ್ಟುಹಬ್ಬ ಆಚರಿಸಿಕೊಂಡ ಸುದೀಪ್ ಈಗ ನೊಂದವರ ಕಣ್ಣೀರು ಒರೆಸಲು ಸಜ್ಜಾಗಿದ್ದಾರೆ. ರಣಮಳೆಗೆ ತತ್ತರಿಸಿದ ಬೆಂಗಳೂರಿಗರಿಗೆ ಕಿಚ್ಚ ಸುದೀಪ್ ಸಹಾಯ ಹಸ್ತ ಚಾಚಿದ್ದಾರೆ.

ನಟ ಸುದೀಪ್ ರೀಲ್ ಮೇಲೆ ಮಾತ್ರ ಮಾನವೀಯತೆಯ ಡೈಲಾಗ್ ಹೊಡೆಯೋದಿಲ್ಲ. ಬದಲಾಗಿ ನಿಜ ಬದುಕಿನಲ್ಲೂ ಅಶಕ್ತರ ಹಾಗೂ ನೊಂದವರ ಕಷ್ಟಕ್ಕೆ ನೆರವಾಗುತ್ತಾರೆ. ಕಳೆದ ಒಂದು ವಾರದಿಂದ ಸತತ ಮಳೆಯಾಗಿರೋದರಿಂದ ಬೆಂಗಳೂರಿನ ಹಲವು ಏರಿಯಾಗಳು ಜಲಪ್ರಳಯಕ್ಕೆ ತುತ್ತಾಗಿದೆ. ಹೀಗಾಗಿ ಬಡವರು,ಶ್ರೀಮಂತರು ಬೇಧವಿಲ್ಲದೇ ಎಲ್ಲರೂ ಅನ್ನ ಹಾಗೂ ಆಶ್ರಯ ಕ್ಕಾಗಿ ಪರದಾಡುವ ಸ್ಥಿತಿ ಎದುರಾಗಿದೆ. ಮಹಿಳೆಯರು, ವೃದ್ಧರು,ಮಕ್ಕಳೆನ್ನದೇ ಎಲ್ಲರೂ ಸುರಿಯುವ ಮಳೆ, ಮನೆಗೆ ನುಗ್ಗಿದ ನೀರಿನಿಂದ ಕಂಗಾಲಾಗಿದ್ದಾರೆ. ಜನರ ಈ ಸಂಕಷ್ಟಕ್ಕೆ ಮರುಗಿದ ಕಿಚ್ಚ ಸುದೀಪ್ (Kiccha Sudeep)ಈಗ ಜನರ ಸಹಾಯಕ್ಕೆ ಮುಂದಾಗಿದ್ದಾರೆ.

ಕಿಚ್ಚ ಸುದೀಪ್ (Kiccha Sudeep) ಚ್ಯಾರಿಟೇಬಲ್ ಟ್ರಸ್ಟ್ ವತಿಯಿಂದ ನೆರೆ ಸಂತ್ರಸ್ಥರಿಗೆ, ಮಳೆ ಸಂತ್ರಸ್ಥರಿಗೆ ಸಹಾಯ ನೀಡಲಾಗುತ್ತದೆ ಎಂದು ಸುದೀಪ್ ಘೋಷಿಸಿದ್ದಾರೆ. ಈ ಬಗ್ಗೆ ಕಿಚ್ಚ ಸುದೀಪ್ (Kiccha Sudeep)ಚ್ಯಾರಿಟೇಬಲ್ ಟ್ರಸ್ಟ್ ಪೋಸ್ಟರ್ ಕೂಡ ರಿಲೀಸ್ ಮಾಡಿದೆ. ಇಂದ್ರಧನುಷ್ ಎಂಬ ಹೆಸರಿನಲ್ಲಿ ಟ್ರಸ್ಟ್ ತಂಡವೊಂದನ್ನು ಸಿದ್ಧಪಡಿಸಿದ್ದು, ಆ ತಂಡ ಬೆಂಗಳೂರಿನಲ್ಲಿ ಮಳೆಯಿಂದ ಸಂತ್ರಸ್ತರಾದವರಿಗೆ ಸಹಾಯ ನೀಡಲಿದೆ.

ಮಳೆ ಹಾಗೂ ನೆರೆ ಪೀಡಿತ ಪ್ರದೇಶದ ಜನರು ಆಹಾರ, ಔಷಧ ಸೇರಿದಂತೆ ಅಗತ್ಯ ವಸ್ತುಗಳಿಗಾಗಿ ಕಿಚ್ಚ ಚ್ಯಾರಿಟೇಬಲ್ ಟ್ರಸ್ಟ್ ನ ದೂರವಾಣಿ ಸಂಖ್ಯೆ 6360334455 ಯನ್ನು ಸಂರ್ಪಕಿಸಿ ತಮಗೆ ಅಗತ್ಯವಿರುವ ವಸ್ತುಗಳ ಮಾಹಿತಿ ನೀಡಿದ್ರೇ ಇಂಧ್ರಧನುಷ್ ತಂಡ ವಸ್ತುಗಳನ್ನು ಪೊರೈಸಲಿದೆ. ಜೀವ ಇದ್ದರೇ ಜೀವನ ಎಂಬ ಟ್ಯಾಗ್ ಲೈನ್ ಹಾಗೂ ಬೆಂಗಳೂರು ನಿಮ್ಮ ಜೊತೆ ಸದಾ ನಾವಿದ್ದೇವೆ. ಸಂಕಷ್ಟದಲ್ಲಿರೋ ಪ್ರತಿಯೊಬ್ಬರಿಗೂ ಕಿಚ್ಚನ ಅಪ್ಪುಗೆ ಎಂಬ ಟ್ಯಾಗ್ ಲೈನ್ ಮೂಲಕ ಕೂಡ ಮಳೆ ಹಾಗೂ ನೆರೆ ಸಂತ್ರಸ್ಥರಿಗೆ ಧೈರ್ಯ ತುಂಬುವ ಕೆಲಸವನ್ನು ಕಿಚ್ಚ ಚ್ಯಾರಿಟೇಬಲ್ ಟ್ರಸ್ಟ್ ಮಾಡಿದೆ.

ಇದೇ ಮೊದಲಲ್ಲ ಈ ಹಿಂದೆ ಕರೋನಾ ಸಂತ್ರಸ್ಥರಿಗೂ ಸುದೀಪ್ ನೆರವಾಗಿದ್ದರು. ಮಾತ್ರವಲ್ಲ ಸುದೀಪ್ ಹುಟ್ಟುಹಬ್ಬದ ವೇಳೆ ಇಬ್ಬರು ವಿಕಲಚೇತನರಿಗೆ ಕೃತಕ್ ಕಾಲು ಅಳವಡಿಸಿ ಸುದೀಪ್ ಸಹಾಯ ಮಾಡಿದ್ದರು. ಹೀಗೆ ಸುದೀಪ್ ನೊಂದವರ ಕಣ್ಣೀರು ಒರೆಸೋದರಲ್ಲೂ ರಿಯಲ್ ಹೀರೋಗಿರಿ ಮೆರೆಯುತ್ತಿದ್ದಾರೆ.

ಇದನ್ನೂ ಓದಿ : Dhruva Sarja Prerana Sarja : ಸರ್ಜಾ ಕುಟುಂಬಕ್ಕೆ ಹೊಸ ಅತಿಥಿ ಆಗಮನ: ಧ್ರುವ್ ಸರ್ಜಾ ಕೊಟ್ರು ಸಿಹಿಸುದ್ದಿ

ಇದನ್ನೂ ಓದಿ : ಚಿರು ಸ್ನೇಹಿತರ ಹೊಸ ಸಾಹಸ‌ : ಒಂದೇ ಸಿನಿಮಾದಲ್ಲಿ ಪನ್ನಾಗಭರಣ, ಮೇಘನಾರಾಜ್‌ ಸರ್ಜಾ ಹಾಗೂ ಪ್ರಜ್ವಲ್ ದೇವರಾಜ್

Bengaluru flood Kichcha Sudeep Trust ready to help

Comments are closed.