ದುಬೈ: ಭಾರತ ಮತ್ತು ಪಾಕಿಸ್ತಾನ(India Vs Pakistan) ನಡುವಿನ ಏಷ್ಯಾ ಕಪ್ (Asia Cup) ಸೂಪರ್-4 ಪಂದ್ಯ ಹಲವಾರು ನಾಟಕೀಯ ಸನ್ನಿವೇಶಗಳಿಗೆ ಸಾಕ್ಷಿಯಾಗಿತ್ತು. ಕೊನೆಗೆ 5 ವಿಕೆಟ್’ಗಳಿಂದ ಪಂದ್ಯ ಗೆದ್ದ ಪಾಕಿಸ್ತಾನ, ಲೀಗ್ ಹಂತದಲ್ಲಿ ಭಾರತ ವಿರುದ್ಧ ಅನುಭವಿಸಿದ ಸೋಲಿಗೆ ಸೇಡು ತೀರಿಸಿಕೊಂಡಿತು.
ಹೀಗಿರುವಾಗ ಪಾಕಿಸ್ತಾನ ವಿರುದ್ಧ ಭಾರತ ಪಂದ್ಯ ಸೋಲುತ್ತಿದ್ದಂತೆ (Team India)ಟೀಮ್ ಇಂಡಿಯಾದ ಯುವ ಎಡಗೈ ವೇಗದ ಬೌಲರ್ ಅರ್ಷದೀಪ್ ಸಿಂಗ್ (Arshdeep Singh) ಅವರನ್ನು ಸಾಮಾಜಿಕ ಜಾಲತಾಣದಲ್ಲಿ ”ಖಲಿಸ್ತಾನಿ” ಎಂದು ಹೀಯಾಳಿಸಲಾಗುತ್ತಿದೆ. ಕಾರಣ ಪಂದ್ಯದಲ್ಲಿ ಅರ್ಷದೀಪ್ ಸಿಂಗ್ (Arshdeep Singh)ಕೈಚೆಲ್ಲಿದ ಅದೊಂದು ಕ್ಯಾಚ್. ಪಂದ್ಯದ 18ನೇ ಓವರ್’ನ 3ನೇ ಎಸೆತದಲ್ಲಿ ಲೆಗ್ ಸ್ಪಿನ್ನರ್ ರವಿ ಬಿಷ್ಣೋಯ್ ಎಸೆತದಲ್ಲಿ ಪಾಕ್ ದಾಂಡಿಗ ಆಸಿಫ್ ಅಲಿ ನೀಡಿದ ಅತ್ಯಂತ ಸುಲಭ ಕ್ಯಾಚನ್ನು ಶಾರ್ಟ್ ಥರ್ಡ್ ಮ್ಯಾನ್ ವಿಭಾಗದಲ್ಲಿ ಅರ್ಷದೀಪ್ ಸಿಂಗ್ (Arshdeep Singh) ಕೈಚೆಲ್ಲಿದ್ದರು. ಆಗಿನ್ನೂ ಆಸಿಫ್ ಅಲಿ ಖಾತೆಯನ್ನೇ ತೆರೆದಿರಲಿಲ್ಲ. ಮುಂದಿನ ಓವರ್’ನಲ್ಲಿ ಅಬ್ಬರಿಸಿದ ಆಸಿಫ್ ಕೇವಲ 8 ಎಸೆತಗಳಲ್ಲಿ 16 ರನ್ ಬಾರಿಸಿ ಪಾಕಿಸ್ತಾನದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು.
(Asia Cup)ಪಂದ್ಯದ ನಂತರ ಸಾಮಾಜಿಕ ಜಾಲತಾಣದಲ್ಲಿ ಅರ್ಷದೀಪ್ ಸಿಂಗ್ ಅವರನ್ನು ಖಲಿಸ್ತಾನಿ, ದೇಶದ್ರೋಹಿ ಎಂದು ಹೀಯಾಳಿಸಲಾಗಿದೆ. ಅರ್ಷದೀಪ್ ಸಿಂಗ್ (Arshdeep Singh)ಅವರನ್ನು ಖಲಿಸ್ತಾನಿ ಎಂದು ಕರೆದಿರುವುದಕ್ಕೆ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಸೇರಿದಂತೆ ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಒಬ್ಬ ಕ್ರಿಕೆಟ್ ಆಟಗಾರ, ಇನ್ನೂ(Asia Cup) ಅಂತಾರಾಷ್ಟ್ರೀಯ ಕ್ರಿಕೆಟ್’ನಲ್ಲಿ ಈಗಷ್ಟೇ ಕಣ್ಣು ಬಿಡುತ್ತಿರುವ ಯುವಕ. ಭಾರತ Vs ಪಾಕಿಸ್ತಾನ (India Vs Pakistan)ಪಂದ್ಯದ ತೀವ್ರತೆಯ ಅನುಭವವನ್ನು ಇದುವರೆಗೆ ಪ್ರತ್ಯಕ್ಷವಾಗಿ ಅನುಭವಿಸದ ಯುವಕ. ಆ ಯುವಕ ಏಷ್ಯಾ ಕಪ್ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಸುಲಭ ಕ್ಯಾಚೊಂದನ್ನು ಕೈ ಚೆಲ್ಲುತ್ತಾನೆ. ಯೆಸ್.. ಅದು ಕೈಚೆಲ್ಲುವ ಕ್ಯಾಚ್ ಅಲ್ಲವೇ ಅಲ್ಲ. ಆದರೂ ತಪ್ಪು ನಡೆದು ಬಿಡುತ್ತದೆ. ಹಾಗಂತ ಅದು ಉದ್ದೇಶಪೂರ್ವಕವಾಗಿ ನಡೆದ ತಪ್ಪಲ್ಲ. ಅಷ್ಟಕ್ಕೇ ಆತನಿಗೆ “ಖಲಿಸ್ತಾನಿ” ಪಟ್ಟ..! ಅರ್ಷದೀಪ್ ಸಿಂಗ್ (Arshdeep Singh) ಸಿಕ್ಖ್ ಎಂಬ ಒಂದೇ ಕಾರಣಕ್ಕೆ ಆತ ದಿನ ಬೆಳಗಾಗುವುದರಲ್ಲಿ ಖಲಿಸ್ತಾನಿಯಾಗಿ ಬಿಟ್ಟಿದ್ದಾನೆ. ನೆನಪಿರಲಿ.., ಪಂಜಾಬ್ ವೀರರ ನೆಲ.., ಸಿಕ್ಖರು ದೇಶಪ್ರೇಮಿಗಳೇ ವಿನಃ, ದೇಶದ್ರೋಹಿಗಳಲ್ಲ, ದೇಶಕ್ಕೆ ಅತೀ ಹೆಚ್ಚು ವೀರ ಯೋಧರನ್ನು ಸಮರ್ಪಿಸಿದ ಸಮುದಾಯವದು. ದೇಶದ್ರೋಹಿ, ಖಲಿಸ್ತಾನಿ ಅರ್ಷದೀಪ್ ಸಿಂಗ್ (Arshdeep Singh) ಅಲ್ಲ. ಕ್ರೀಡೆಯನ್ನು ಕ್ರೀಡೆಯ ರೀತಿಯಲ್ಲಿ ನೋಡಲು ಸಾಧ್ಯವಿಲ್ಲದ ಮನಸ್ಥಿತಿಗಳು ನಿಜವಾದ ದೇಶದ್ರೋಹಿಗಳು.
ಇದನ್ನೂ ಓದಿ: ಸೆಂಟ್ರಲ್ ವಿಸ್ಟಾ ಯೋಜನೆ : ಸೆಪ್ಟೆಂಬರ್ 8ರಂದು ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆ, ಏನಿದರ ವಿಶೇಷತೆ ?
ಇದನ್ನೂ ಓದಿ: ಮುರುಘಾ ಶರಣರ ಮೇಲಿನ ಪೋಕ್ಸೋ ಪ್ರಕರಣಕ್ಕೆ ಹೊಸ ತಿರುವು : ನೇಗಿನಹಾಳ ಸ್ವಾಮೀಜಿ ಆತ್ಮಹತ್ಯೆ
ಇದನ್ನೂ ಓದಿ: ಮುಂದಿನ ವರ್ಷ ಐಪಿಎಲ್’ಗ್ ಧೋನಿ ಗುಡ್ ಬೈ, ಕೊನೆಯ ಬಾರಿ ಚೆನ್ನೈ ತಂಡವನ್ನು ಮುನ್ನಡೆಸಲಿದ್ದಾರೆ ಎಂಎಸ್
ಇದನ್ನೂ ಓದಿ: ಸುದ್ದಿಗೋಷ್ಠಿಯಲ್ಲಿ ‘Sexy’ ಪದ ಬಳಸಲು ಹಿಂಜರಿದ ಟೀಮ್ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ : viral Video