ದುಬೈ: (Asia Cup 2022 Live Telecast ) 15ನೇ ಆವೃತ್ತಿಯ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿ ನಾಳೆ (ಶನಿವಾರ) ಆರಂಭವಾಗಲಿದ್ದು ಟೂರ್ನಿಯ ಮೊದಲ ಪಂದ್ಯದಲ್ಲಿ ಶ್ರೀಲಂಕಾ ಮತ್ತು ಅಫ್ಘಾನಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ. ದಾಖಲೆಯ ಏಳು ಬಾರಿ ಏಷ್ಯಾ ಕಪ್ ಟ್ರೋಫಿ ಗೆದ್ದಿರುವ ಹಾಲಿ ಚಾಂಪಿಯನ್ ಭಾರತ ತಂಡ, ಭಾನುವಾರ ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುವ ತನ್ನ ಮೊದಲ ಪಂದ್ಯದಲ್ಲಿ ಸಾಂಪ್ರಾದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು ಎದುರಿಸಲಿದೆ. ಪಾಕಿಸ್ತಾನ ತಂಡ ಒಟ್ಟು 2 ಬಾರಿ ಏಷ್ಯಾ ಕಪ್ ಗೆದ್ದಿದೆ.
ಅಕ್ಟೋಬರ್-ನವೆಂಬರ್ ತಿಂಗಳಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಹಿನ್ನೆಲೆಯಲ್ಲಿ ಏಷ್ಯಾ ಕಪ್ ಟೂರ್ನಿ ಟಿ20 ಫಾರ್ಮ್ಯಾಟ್’ನಲ್ಲಿ ನಡೆಯಲಿದೆ. ಆಗಸ್ಟ್ 31ರಂದು ನಡೆಯುವ ತನ್ನ 2ನೇ ಲೀಗ್ ಪಂದ್ಯದಲ್ಲಿ ರೋಹಿತ್ ಶರ್ಮಾ ನಾಯಕತ್ವದ ಭಾರತ, ಅರ್ಹತಾ ಸುತ್ತಿನಿಂದ ಕ್ವಾಲಿಫೈ ಆಗಿರುವ ಹಾಂಕಾಂಗ್ ತಂಡವನ್ನು ಎದುರಿಸಲಿದೆ. ಭಾರತ, ಪಾಕಿಸ್ತಾನ ಮತ್ತು ಹಾಂಕಾಂಗ್ ತಂಡಗಳು ಗ್ರೂಪ್ ‘ಎ’ನಲ್ಲಿ ಸ್ಥಾನ ಪಡೆದಿದ್ರೆ, ಐದು ಬಾರಿಯ ಚಾಂಪಿಯನ್ ಶ್ರೀಲಂಕಾ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶ ತಂಡಗಳು ಗ್ರೂಪ್ ‘ಬಿ’ನಲ್ಲಿ ಸ್ಥಾನ ಪಡೆದಿವೆ.
ಪ್ರತೀ ತಂಡಗಳು ಗ್ರೂಪ್ ಹಂತದಲ್ಲಿ ತಲಾ ಒಂದು ಬಾರಿ ಮುಖಾಮುಖಿಯಾಗಲಿವೆ. ಅಗ್ರ ಎರಡು ತಂಡಗಳು ಸೂಪರ್-4 ಹಂತಕ್ಕೆ ಪ್ರವೇಶ ಪಡೆಯಲಿದ್ದು, ಸೂಪರ್-4 ಹಂತದಲ್ಲಿ ಎಲ್ಲಾ ನಾಲ್ಕು ತಂಡಗಳು ಪ್ರತೀ ತಂಡದ ವಿರುದ್ಧ ಆಡಲಿವೆ. ಸೂಪರ್-4ನಲ್ಲಿ ಅಗ್ರ ಎರಡು ಸ್ಥಾನ ಪಡೆಯುವ ತಂಡಗಳು ಫೈನಲ್ ಪ್ರವೇಶಿಸಲಿವೆ. ಫೈನಲ್ ಪಂದ್ಯ ಸೆಪ್ಟೆಂಬರ್ 11ರಂದು ದುಬೈನಲ್ಲಿ ನಡೆಯಲಿದೆ.
ಭಾರತ Vs ಪಾಕ್ 3 ಮುಖಾಮುಖಿ ?
ಭಾರತ ಮತ್ತು ಪಾಕಿಸ್ತಾನ ತಂಡಗಳು ಏಷ್ಯಾ ಕಪ್ ಟೂರ್ನಿಯಲ್ಲಿ 3 ಬಾರಿ ಮುಖಾಮುಖಿಯಾಗುವ ಸಾಧ್ಯತೆಯಿದೆ. ಲೀಗ್ ಹಾಗೂ ಸೂಪರ್-4 ಹಂತದಲ್ಲಿ ಎರಡು ಬಾರಿ ಭಾರತ Vs ಪಾಕಿಸ್ತಾನ ಮುಖಾಮುಖಿ ಖಚಿತ. ಎರಡೂ ತಂಡಗಳು ಫೈನಲ್ ಪ್ರವೇಶಿಸಿದರೆ, ಸೆಪ್ಟೆಂಬರ್ 11ರಂದು ದುಬೈ ಮೈದಾನದಲ್ಲಿ ನಡೆಯಲಿರುವ ಫೈನಲ್ ಪಂದ್ಯದ ಮೂಲಕ ಟೂರ್ನಿಯಲ್ಲಿ ಕೇವಲ 15 ದಿನಗಳ ಅಂತರದಲ್ಲಿ 3ನೇ ಬಾರಿ ಮುಖಾಮುಖಿಯಾಗಲಿವೆ.
ಏಷ್ಯಾಕಪ್ ಟಿ20 (Asia Cup 2022) ಟೂರ್ನಿಯ ವೇಳಾಪಟ್ಟಿ
Group A
ಭಾರತ Vs ಪಾಕಿಸ್ತಾನ: 28 ಆಗಸ್ಟ್, ದುಬೈ
ಭಾರತ Vs ಹಾಂಕಾಂಗ್ : 31 ಆಗಸ್ಟ್, ದುಬೈ
ಪಾಕಿಸ್ತಾನ Vs ಹಾಂಕಾಂಗ್: 02 ಸೆಪ್ಟೆಂಬರ್, ಶಾರ್ಜಾ
Group B
ಶ್ರೀಲಂಕಾ Vs ಅಫ್ಘಾನಿಸ್ತಾನ: 27 ಆಗಸ್ಟ್, ದುಬೈ
ಬಾಂಗ್ಲಾದೇಶ Vs ಅಫ್ಘಾನಿಸ್ತಾನ: 30 ಆಗಸ್ಟ್, ಶಾರ್ಜಾ
ಶ್ರೀಲಂಕಾ Vs ಬಾಂಗ್ಲಾದೇಶ: 01 ಸೆಪ್ಟೆಂಬರ್, ದುಬೈ
ಸೂಪರ್-4 ಹಂತ
B1 Vs B2: 03 ಸೆಪ್ಟೆಂಬರ್, ಶಾರ್ಜಾ
A1 Vs A2: 04 ಸೆಪ್ಟೆಂಬರ್, ದುಬೈ
A1 Vs B1: 06 ಸೆಪ್ಟೆಂಬರ್, ದುಬೈ
A2 Vs B2: 07 ಸೆಪ್ಟೆಂಬರ್, ದುಬೈ
A1 Vs B2: 08 ಸೆಪ್ಟೆಂಬರ್, ದುಬೈ
B1 Vs A2: 09 ಸೆಪ್ಟೆಂಬರ್, ದುಬೈ
ಫೈನಲ್: 11 ಸೆಪ್ಟೆಂಬರ್, ದುಬೈ
ಪಂದ್ಯಗಳ ಆರಂಭ: ರಾತ್ರಿ 7.30ಕ್ಕೆ (ಭಾರತೀಯ ಕಾಲಮಾನ)
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್’ವರ್ಕ್ (Star Sports network)
ಲೈವ್ ಸ್ಟ್ರೀಮಿಂಗ್: ಡಿಸ್ನಿ+ಹಾಟ್’ಸ್ಟಾರ್ (Disney + Hotstar)
ಏಷ್ಯಾಕಪ್ ಚಾಂಪಿಯನ್ಸ್:
ಭಾರತ: 1984, 1988, 1990-91, 1995, 2010, 2016, 2018
ಶ್ರೀಲಂಕಾ: 1986, 1997, 2004, 2008, 2014
ಪಾಕಿಸ್ತಾನ: 2000, 2012
ಇದನ್ನೂ ಓದಿ : Rohit Sharma : ದುಬೈನಲ್ಲಿ ರೋಹಿತ್ ಶರ್ಮಾ ಕಿಕ್ ಸ್ಕೂಟರ್ ರೈಡಿಂಗ್, ವೀಡಿಯೋ ಸೂಪರ್
ಇದನ್ನೂ ಓದಿ : Shaheen Shah Afridi : ಕಾಲಿಗೆ ಸ್ಟ್ರೆಚರ್ ಕಟ್ಟಿಕೊಂಡಿದ್ದ ಪಾಕ್ ವೇಗಿ ಅಫ್ರಿದಿಯನ್ನು ಭೇಟಿ ಮಾಡಿದ ಕೊಹ್ಲಿ, ರಾಹುಲ್
Asia Cup 2022 Live Telecast Live Streaming Match Timings Complete Details