Asia Cup 2022 Super 4 stage: ಮತೊಮ್ಮೆ ಭಾರತ V/S ಪಾಕಿಸ್ತಾನ ಮುಖಾಮುಖಿ! ಸೂಪರ್-4ರ ಸಂಪೂರ್ಣ ಮಾಹಿತಿ ಇಲ್ಲಿದೆ

ನವದೆಹಲಿ: (Asia Cup 2022 Super 4 stage) ಏಷ್ಯಾಕಪ್ ಗ್ರೂಪ್ ಹಂತದ ಪಂದ್ಯಗಳು ಮುಕ್ತಾಯವಾಗಿವೆ. ಶುಕ್ರವಾರ ರಾತ್ರಿ ನಡೆದ ಪಂದ್ಯದಲ್ಲಿ ಹಾಂಗ್ ಕಾಂಗ್ ವಿರುದ್ಧ 155 ರನ್‍ಗಳ ಭರ್ಜರಿ ಗೆಲುವು ಸಾಧಿಸುವ ಮೂಲಕ ಪಾಕಿಸ್ತಾನ(Pakistan) 4ನೇ ತಂಡವಾಗಿ ಸೂಪರ್-4ಕ್ಕೆ ಎಂಟ್ರಿ ಕೊಟ್ಟಿದೆ. ಟೀಂ ಇಂಡಿಯಾ ವಿರುದ್ಧ ಸೋಲು ಕಂಡಿದ್ದ ಪಾಕಿಸ್ತಾನಕ್ಕೆ (ind vs pak) ಈ ಪಂದ್ಯದ ಗೆಲುವು ತುಂಬಾ ಮುಖ್ಯವಾಗಿತ್ತು.

(Hong Kong)ಹಾಂಗ್‌ ಕಾಂಗ್ ವಿರುದ್ಧ ಗೆಲುವು ಸಾಧಿಸಿದ ಪಾಕಿಸ್ತಾನ (Pakistan) ಇದೀಗ ಭಾನುವಾರ ಅಂದರೆ ನಾಳೆ ಟೀಂ ಇಂಡಿಯಾ ವಿರುದ್ಧ ಮತ್ತೊಮ್ಮೆ ಮುಖಾಮುಖಿಯಾಗುತ್ತಿದೆ(Asia Cup 2022 Super 4 stage). ಈ ಪಂದ್ಯದಲ್ಲಿ ಗೆಲುವು ಯಾರಿಗೆ ಸಿಗುತ್ತೆ ಅನ್ನೋ ಕುತೂಹಲ ಮೂಡಿದೆ. ಟಿ-20 ವಿಶ್ವಕಪ್ (Asia Cup) ಸೋಲಿನ ಸೇಡು ತೀರಿಸಿಕೊಂಡಿರುವ ಭಾರತದ ವಿರುದ್ಧ ಪಾಕ್ ಗೆಲುವು ಸಾಧಿಸುತ್ತಾ? ಅಥವಾ ಮತ್ತೆ ಸೋಲು ಕಾಣುತ್ತಾ..? ಅಂತಾ ಕ್ರಿಕೆಟ್ ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ.

ಸೂಪರ್-4ರ ಪಂದ್ಯಗಳ ಸಂಪೂರ್ಣ ಮಾಹಿತಿ ಇಲ್ಲಿದೆ:

ಸೂಪರ್‌-4 ರಲ್ಲಿ ಪ್ರತಿಯೊಂದು ತಂಡವು 3 ಪಂದ್ಯಗಳನ್ನು ಆಡಲಿದೆ. ಭಾರತ ಸೆ.4ರಂದು ಪಾಕಿಸ್ತಾನ (Pakistan) ವಿರುದ್ಧ, ಸೆ.6ರಂದು ಶ್ರೀಲಂಕಾ ವಿರುದ್ಧ ಹಾಗೂ ಸೆ.8ರಂದು ಅಫ್ಘಾನಿಸ್ಥಾನ ವಿರುದ್ಧ ಸೆಣಸಾಟ ನಡೆಯಲಿದೆ. ಅತಿಹೆಚ್ಚು ಗೆಲುವು ಅಥವಾ ಅಂಕ ಗಳಿಸಿದ 2 ತಂಡಗಳು ಫೈನಲ್‍ಗೆ ಲಗ್ಗೆ ಇಡಲಿವೆ. ಸೆ.11ರಂದು ಫೈನಲ್ ಪಂದ್ಯವು ನಡೆಯಲಿದೆ. ‌

ಏಷ್ಯಾ ಕಪ್ 2022 ಸೂಪರ್ 4 ವೇಳಾಪಟ್ಟಿ:

  • ಸೆಪ್ಟೆಂಬರ್ 3: ಅಫ್ಘಾನಿಸ್ತಾನ vs ಶ್ರೀಲಂಕಾ – ಶಾರ್ಜಾ
  • ಸೆಪ್ಟೆಂಬರ್ 4: ಭಾರತ vs ಪಾಕಿಸ್ತಾನ – ದುಬೈ
  • ಸೆಪ್ಟೆಂಬರ್ 6: ಶ್ರೀಲಂಕಾ vs ಭಾರತ – ದುಬೈ
  • ಸೆಪ್ಟೆಂಬರ್ 7: ಪಾಕಿಸ್ತಾನ ವಿರುದ್ಧ ಅಫ್ಘಾನಿಸ್ತಾನ – ದುಬೈ
  • ಸೆಪ್ಟೆಂಬರ್ 8: ಭಾರತ ವಿರುದ್ಧ ಅಫ್ಘಾನಿಸ್ತಾನ – ದುಬೈ
  • ಸೆಪ್ಟೆಂಬರ್ 9: ಶ್ರೀಲಂಕಾ vs ಪಾಕಿಸ್ತಾನ – ದುಬೈ
  • ಸೆಪ್ಟೆಂಬರ್ 11: ಫೈನಲ್ – ದುಬೈ


ಇದನ್ನೂ ಓದಿ: ಹಬ್ಬದ ಕೊಡುಗೆಯಾಗಿ ಕಿಗರ್, ಟ್ರೈಬರ್ ಮತ್ತು ಕ್ವಿಡ್‌ ಗಳ ಸೀಮಿತ ಆವೃತ್ತಿಗಳನ್ನು ಬಿಡುಗಡೆ ಮಾಡಿದ ರೆನಾಲ್ಟ್‌

ಇದನ್ನೂ ಓದಿ: ಸರ್ಜಾ ಕುಟುಂಬಕ್ಕೆ ಹೊಸ ಅತಿಥಿ ಆಗಮನ: ಧ್ರುವ್ ಸರ್ಜಾ ಕೊಟ್ರು ಸಿಹಿಸುದ್ದಿ

ಟೀಮ್ ಇಂಡಿಯಾ ಏಷ್ಯಾ ಕಪ್ 2022 ಸೂಪರ್ 4 ತಂಡ:

ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್ (ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಅಕ್ಸರ್ ಪಟೇಲ್, ಭುವನೇಶ್ವರ್ ಕುಮಾರ್, ಅರ್ಷದೀಪ್ ಸಿಂಗ್, ಅವೇಶ್ ಖಾನ್, ಯುಜ್ವೇಂದ್ರ ಚಾಹಲ್, ಆರ್ ಅಶ್ವಿನ್ , ರವಿ ಬಿಷ್ಣೋಯ್.

ಮೀಸಲು: ದೀಪಕ್ ಚಹಾರ್ ಮತ್ತು ಶ್ರೇಯಸ್ ಅಯ್ಯರ್.

Asia Cup 2022 Super 4 stage: New rules, format, schedule ind vs pak

Comments are closed.