ಭಾನುವಾರ, ಏಪ್ರಿಲ್ 27, 2025
HomeSportsCricket‌ಏಷ್ಯನ್‌ ಗೇಮ್ಸ್‌ ಕ್ವಾರ್ಟರ್‌ ಫೈನಲ್‌ : ಯಶಸ್ವಿ ಜೈಸ್ವಾಲ್ ಸ್ಪೋಟಕ ಶತಕ, ಶುಭಮನ್‌ ಗಿಲ್‌ ದಾಖಲೆ...

‌ಏಷ್ಯನ್‌ ಗೇಮ್ಸ್‌ ಕ್ವಾರ್ಟರ್‌ ಫೈನಲ್‌ : ಯಶಸ್ವಿ ಜೈಸ್ವಾಲ್ ಸ್ಪೋಟಕ ಶತಕ, ಶುಭಮನ್‌ ಗಿಲ್‌ ದಾಖಲೆ ಉಡೀಸ್

- Advertisement -

ಏಷ್ಯನ್‌ ಗೇಮ್ಸ್‌ನಲ್ಲಿ (Asian Games 2023)  ಭಾರತ (Indian Cricket Team) ಐತಿಹಾಸಿಕ ಗೆಲುವು ದಾಖಲಿಸಿದೆ. ನೇಪಾಳ (Nepal vs India) ವಿರುದ್ದದ ಕ್ವಾರ್ಟರ್‌ ಫೈನಲ್‌ ( Quarter Final) ಪಂದ್ಯದಲ್ಲಿ ಟೀಂ ಇಂಡಿಯಾದ ಯುವ ಆಟಗಾರ ಯಶಸ್ವಿ ಜೈಸ್ವಾಲ್‌ (Yashasvi Jaiswal) ಆಕರ್ಷಕ ಶತಕ ಸಿಡಿಸಿದ್ದು, ಟೀಂ ಇಂಡಿಯಾದ ಆಟಗಾರ ಶುಭಮನ್‌ ಗಿಲ್‌ (Shubman Gill) ಅವರ ದಾಖಲೆಯನ್ನು ಅಳಿಸಿ ಹಾಕಿದ್ದಾರೆ.

ಏಷ್ಯನ್‌ ಗೇಮ್ಸ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿರುವ ನೇಪಾಳ ಕ್ರಿಕೆಟ್‌ ತಂಡ ಇದೀಗ ಭಾರತ ತಂಡದ ವಿರುದ್ದ ಸೋಲನ್ನು ಕಂಡಿದೆ. ಭಾರತ ತಂಡದ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್‌ ಸ್ಟೋಟಕ ಆಟದ ಪ್ರದರ್ಶನ ನೀಡಿದ್ದಾರೆ. ಕೇವಲ 48 ಎಸೆತಗಳಲ್ಲಿ ಸ್ಪೋಟಕ ಶತಕ ಸಿಡಿಸುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ.

Asian Games Quarter Final 1 India vs Nepal Yashasvi Jaiswal century Break Shubman Gill ODI Century World Record
Image Credit to Original Source

ಯಶಸ್ವಿ ಜೈಸ್ವಾಲ್‌ ಇದೀಗ ಟಿ20 ಕ್ರಿಕೆಟ್‌ನಲ್ಲಿ ಅತ್ಯಂತ ವೇಗದ ಶತಕ ಸಿಡಿಸಿದ ಕಿರಿಯ ಆಟಗಾರ ಎನಿಸಿಕೊಂಡಿದ್ದಾರೆ. ಈ ಹಿಂದೆ ಈ ದಾಖಲೆಯನ್ನು ಶುಭಮನ್‌ ಗಿಲ್‌ ಮಾಡಿದ್ದರು. ಗಿಲ್‌ 54 ಎಸೆತಗಳಲ್ಲಿ ಶತಕ ಬಾರಿಸಿದ್ದರು. ಆದರೆ ನೇಪಾಳ ವಿರುದ್ದದ ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್‌ ಕೇವಲ 48 ಎಸೆತಗಳಲ್ಲಿ ಶತಕ ಪೂರೈಸಿ ಗಿಲ್‌ ದಾಖಲೆಯನ್ನು ಅಳಿಸಿ ಹಾಕಿದ್ದಾರೆ.

21 ವರ್ಷ ಪ್ರಾಯದ ಯಶಸ್ವಿ ಜೈಸ್ವಾಲ್‌ ಈಗಾಗಲೇ ಭವಿಷ್ಯದ ಆಟಗಾರನಾಗುವ ಎಲ್ಲಾ ಲಕ್ಷಣಗಳನ್ನು ತೋರ್ಪಡಿಸಿದ್ದಾರೆ. ವಿಶ್ವಕಪ್‌ ಹಿನ್ನೆಲೆಯಲ್ಲಿ ಬಿಸಿಸಿಐ ಕಿರಿಯ ಯುವ ಕ್ರಿಕೆಟಿಗರ ತಂಡವನ್ನು ಏಷ್ಯನ್‌ ಗೇಮ್ಸ್‌ಗೆ ಕಳುಹಿಸಿಕೊಟ್ಟಿದೆ. ಆದರೆ ಯುವ ಆಟಗಾರರ ತಂಡ ಅದ್ಬುತ ಪ್ರದರ್ಶನವನ್ನು ತೋರ್ಪಡಿಸಿದೆ.

ಇದನ್ನೂ ಓದಿ : ವಿಶ್ವಕಪ್ 2023 ಬೆನ್ನಲ್ಲೇ ಕ್ರಿಕೆಟ್‌ಗೆ ಟೀಂ ಇಂಡಿಯಾ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ನಿವೃತ್ತಿ

ನೇಪಾಳ ವಿರುದ್ದದ ಪಂದ್ಯದಲ್ಲಿ ನಾಯಕ ರುತುರಾಜ್‌ ಗಾಯಕ್ವಾಡ್‌ ನಿಧಾನಗತಿಯ ಬ್ಯಾಟಿಂಗ್‌ಗೆ ಮುಂದಾಗಿದ್ದರು. ಆದರೆ ಯಶಸ್ವಿ ಜೈಸ್ವಾಲ್‌ ಆರಂಭದಿಂದಲೇ ಸ್ಪೋಟಕ ಆಟಕ್ಕೆ ಮನ ಮಾಡಿದ್ದಾರೆ. 200 ಸ್ಟ್ರೈಕ್ ರೇಟ್‌ನಲ್ಲಿ ರನ್‌ ಸಿಡಿಸುತ್ತಲೇ ಸಾಗಿದ್ದಾರೆ. ರನ್ ಗಳಿಸಿದರು. ಭಾರತ ತಂಡ ನೇಪಾಳ ವಿರುದ್ದ ಓವರ್‌ಗಳ ಅಂತ್ಯಕ್ಕೆ 4 ವಿಕೆಟ್‌ಗೆ 202 ರನ್‌ ಗಳಿಸಿತ್ತು.

ಆದರೆ ಉಳಿದ ಆಟಗಾರರು ಪಿಚ್‌ನಲ್ಲಿ ರನ್‌ಗಳಿಸಲು ಪರದಾಟ ನಡೆಸಿದ್ರೆ ಜೈಸ್ವಾಲ್‌ ಮಾತ್ರ ಏಕಾಂಗಿ ಹೋರಾಟ ನಡೆಸಿದ್ದಾರೆ. ನಂತರದ ಕೋಲ್ಕತ್ತಾ ನೈಟ್‌ ರೈಡರ್ಸ್‌ ತಂಡದ ಆಲ್‌ರೌಂಡರ್‌ ಆಟಗಾರ ರಿಂಕು ಸಿಂಗ್‌ ಕೇವಲ 15 ಎಸೆತಗಳಲ್ಲಿ 37 ರನ್ ಗಳಿಸುವ ಮೂಲಕ ಭಾರತ ತಂಡದ ರನ್‌ ದ್ವಿಶತಕದ ಗಡಿ ದಾಟಿಸಿದ್ದಾರೆ.

ನಾಯಕ ರುತುರಾಜ್‌ ಗಾಯಕ್ವಾಡ್‌ 23 ಎಸೆತಗಳಲ್ಲಿ 25ರನ್‌ ಬಾರಿಸಿದ್ರೆ, ಶಿವಂ ದುಬೆ 19 ಎಸೆತಗಳಲ್ಲಿ 26 ರನ್‌ ಸಿಡಿಸಿದ್ದಾರೆ. ಆದರೆ ಯಶಸ್ವಿ ಜೈಸ್ವಾಲ್‌ ಕೇವಲ 49 ಎಸೆತಗಳಲ್ಲಿ 7 ಸಿಕ್ಸರ್‌ ಹಾಗೂ 8 ಬೌಂಡರಿ ನೆರವಿನಿಂದ 100 ರನ್‌ ಕಲೆ ಹಾಕಿದ್ದಾರೆ.

Asian Games Quarter Final 1 India vs Nepal Yashasvi Jaiswal century Break Shubman Gill ODI Century World Record
Image Credit to Original Source

ನೇಪಾಳ ತಂಡದ ದಿಪೇಂದ್ರ ಸಿಂಗ್‌ 2 ವಿಕೆಟ್‌ ಪಡೆದುಕೊಂಡ್ರೆ, ಸೋಪಾಲ್‌ ಕಮಿ ಹಾಗೂ ಸಂದೀಪ್‌ ಲಮ್ಮಿಚ್ಚಾನಿ ತಲಾ ಒಂದೊಂದು ವಿಕೆಟ್‌ ಪಡೆದುಕೊಂಡಿದ್ದಾರೆ.  ಭಾರತ ನೀಡಿದ ಸವಾಲಿನ ಮೊತ್ತವನ್ನು ಬೆನ್ನತ್ತಲು ಹೊರಟ ನೇಪಾಳ ತಂಡಕ್ಕೆ ಆವೇಶ್‌ ಖಾನ್‌ ಆರಂಭಿಕ ಆಘಾತ ನೀಡಿದ್ದರು. ನಂತರ ಸಾಯಿ ಕಿಶೋರ್‌, ರವಿ ಬಿಶ್ನೋಯಿ ಹಾಗೂ ಆರ್ಶದೀಪ್‌ ಸಿಂಗ್‌ ನೇಪಾಳ ತಂಡವನ್ನು ಕಟ್ಟಿಹಾಕಿದ್ದಾರೆ.

ಇದನ್ನೂ ಓದಿ : ವಿರುಷ್ಕಾ ಅಭಿಮಾನಿಗಳಿಗೆ ಗುಡ್‌ನ್ಯೂಸ್‌ : 2 ನೇ ಮಗುವಿನ ನಿರೀಕ್ಷೆಯಲ್ಲಿ ವಿರಾಟ್‌ ಕೊಹ್ಲಿ, ಅನುಷ್ಕಾ ಶರ್ಮಾ ದಂಪತಿ

ಕುಶಲ್‌ 28, ಕುಶಲ್‌ ಮಲ್ಲ 29, ದಿಪೇಂದ್ರ ಸಿಂಗ್‌ 32, ಸಂದೀಪ್‌ ಜೋರಾ 29 ಹಾಗೂ ಕೆಸಿ ಕರನ್‌ ೧೮ರನ್‌ ಬಾರಿಸಿ ತಂಡದವನ್ನು ಗೆಲುವಿನ ಸನಿಹಕ್ಕೆ ಕೊಂಡೊಯ್ದರು. ಆದರೆ ಅಂತಿಮವಾಗಿ ನೇಪಾಳ ತಂಡ 20 ಓವರ್‌ಗಳಲ್ಲಿ 9 ವಿಕೆಟ್‌ ಕಳೆದುಕೊಂಡು ಕೇವಲ 179 ರನ್‌ ಗಳಿಸುವಲ್ಲಿ ಮಾತ್ರವೇ ಶಕ್ತವಾಗಿದೆ.

ಭಾರತ ತಂಡದ ಪರ ಆವೇಶ್‌ ಖಾನ್‌, 2, ರವಿ ಬಿಷ್ಣೋಹಿ 3, ಅರ್ಶದೀಪ್‌ ಸಿಂಗ್‌ 2, ಹಾಗೂ ಸಾಯಿ ಕಿಶೋರ್‌ ಒಂದು ವಿಕೆಟ್‌ ಪಡೆದುಕೊಂಡಿದ್ದಾರೆ. ಭಾರತ ತಂಡ ಸೆಮಿಫೈನಲ್‌ ಪಂದ್ಯದಲ್ಲಿ ಪಾಕಿಸ್ತಾನ, ಶ್ರೀಲಂಕಾ, ಅಪ್ಘಾನಿಸ್ತಾನ್‌ ಅಥವಾ ಬಾಂಗ್ಲಾದೇಶ ತಂಡವನ್ನು ಎದುರಿಸಲಿದೆ

Asian Games Quarter Final 1 India vs Nepal : Yashasvi Jaiswal century Break Shubman Gill ODI Century World Record

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular