ವಿರುಷ್ಕಾ ಅಭಿಮಾನಿಗಳಿಗೆ ಗುಡ್‌ನ್ಯೂಸ್‌ : 2 ನೇ ಮಗುವಿನ ನಿರೀಕ್ಷೆಯಲ್ಲಿ ವಿರಾಟ್‌ ಕೊಹ್ಲಿ, ಅನುಷ್ಕಾ ಶರ್ಮಾ ದಂಪತಿ

ಟೀಂ ಇಂಡಿಯಾ (Indian Cricket Team) ಮಾಜಿ ನಾಯಕ ವಿರಾಟ್‌ ಕೊಹ್ಲಿ (Virat Kohli) ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ (ICC World Cup 2023 ODI)  ಬ್ಯುಸಿಯಾಗಿದ್ದಾರೆ. ವಿರಾಟ್‌ ಕೊಹ್ಲಿ (Virat Kohli) ಹಾಗೂ ಅನುಷ್ಕಾ ಶರ್ಮಾ (Anushka Sharma) ದಂಪತಿ  ಸಿಹಿ ಸುದ್ದಿಯನ್ನು ಅಭಿಮಾನಿಗಳಿಗೆ ಕೊಟ್ಟಿದ್ದಾರೆ.

ಟೀಂ ಇಂಡಿಯಾ (Indian Cricket Team) ಆಟಗಾರ ವಿರಾಟ್‌ ಕೊಹ್ಲಿ (Virat Kohli) ಸದ್ಯ ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ (ICC World Cup 2023 ODI)  ಬ್ಯುಸಿಯಾಗಿದ್ದಾರೆ. ಏಷ್ಯಾಕಪ್‌ (Asia Cup 2023) ಗೆಲುವಿನ ಖುಷಿಯಲ್ಲಿಯೇ ವಿಶ್ವಕಪ್‌ ನಲ್ಲಿ ಪಾಲ್ಗೊಂಡಿರುವ ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್‌ ಕೊಹ್ಲಿ (Virat Kohli) ಹಾಗೂ ಅನುಷ್ಕಾ ಶರ್ಮಾ (Anushka Sharma) ದಂಪತಿ  ಸಿಹಿ ಸುದ್ದಿಯನ್ನು ಅಭಿಮಾನಿಗಳಿಗೆ ಕೊಟ್ಟಿದ್ದಾರೆ.

Good news for Virushka fans Virat KohliAnushka Sharma expecting 2nd child
Image credit : Anushka Instagram

ವಿರಾಟ್‌ ಕೊಹ್ಲಿ ಅವರು ಬಾಲಿವುಡ್‌ ನಟಿ ಅನುಷ್ಕಾ ಶರ್ಮಾ ಅವರನ್ನು ಮದುವೆಯಾಗಿದ್ದಾರೆ. ಈ ದಂಪತಿ ಈಆಗಲೇ ವಮಿಕಾ ಕೊಹ್ಲಿ ಅನ್ನೋ ಮಗಳಿದ್ದಾಳೆ. ಇದೀಗ ದಂಪತಿ ಮತ್ತೊಂದು ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂದು ಹಿಂದೂಸ್ತಾನ್‌ ಟೈಮ್ಸ್‌ ವರದಿ ಮಾಡಿದೆ.

ಯಾವುದೇ ಕ್ರಿಕೆಟ್‌ ಪಂದ್ಯಾವಳಿ, ಸಮಾರಂಭವಿದ್ದರೂ ಕೂಡ ವಿರಾಟ್‌ ಕೊಹ್ಲಿಯ ಜೊತೆಗೆ ಪತ್ನಿ ಅನುಷ್ಕಾ ಶರ್ಮಾ ಖುದ್ದು ಹಾಜರಾಗಿರುತ್ತಿದ್ದರು. ಆದರೆ ಕಳೆದ ಕೆಲವು ಸಮಯಗಳಿಂದಲೂ ಅನುಷ್ಕಾ ಶರ್ಮಾ ವಿರಾಟ್‌ ಕೊಹ್ಲಿ ಜೊತೆಗೆ ಕಾಣಿಸಿಕೊಳ್ಳುತ್ತಿಲ್ಲ.

ಇದನ್ನೂ ಓದಿ : ಒಂದೇ ಓವರ್‌ನಲ್ಲಿ 4 ವಿಕೆಟ್‌ ಪಡೆದ ಭಾರತದ ಮೊದಲ ಬೌಲರ್‌ : ಏಷ್ಯಾಕಪ್‌ನಲ್ಲಿ ಮೊಹಮ್ಮದ್‌ ಸಿರಾಜ್‌‌ ವಿಶಿಷ್ಟ ದಾಖಲೆ

ವಿರಾಟ್‌ ಕೊಹ್ಲಿ ಏಷ್ಯಾಕಪ್‌ ಪಂದ್ಯಾವಳಿಯಲ್ಲಿ ಭರ್ಜರಿ ಬ್ಯಾಟಿಂಗ್‌ ಪ್ರದರ್ಶನ ನೀಡಿದ್ದರು. ಈ ವೇಳೆಯಲ್ಲಿಯೂ ಅನುಷ್ಕಾ ಶರ್ಮಾ ಕಾಣಿಸಿಕೊಂಡಿಲ್ಲ. ಅಷ್ಟೇ ಯಾಕೆ ಇದೀಗ ವಿಶ್ವಕಪ್‌ ಪಂದ್ಯಾವಳಿಯಲ್ಲಿಯೂ ಅನುಷ್ಕಾ ಕಾಣಿಸಿಕೊಳ್ಳದೇ ಇರುವುದು ಹಲವು ನಿರೀಕ್ಷೆಗಳನ್ನು ಹುಟ್ಟುಹಾಕಿದೆ.

Good news for Virushka fans Virat KohliAnushka Sharma expecting 2nd child
Image credit : Anushka Instagram

ಮಾಧ್ಯಮದ ವರದಿಯ ಪ್ರಕಾರ ಈಗಾಗಲೇ ಅನುಷ್ಕಾ ಶರ್ಮಾ ಹಾಗೂ ವಿರಾಟ್‌ ಕೊಹ್ಲಿ ಅವರು ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಅನುಷ್ಕಾ ಶರ್ಮಾ ಅವರು ಎರಡು ತಿಂಗಳ ಗರ್ಭಿಣಿ.ಇದೇ ಕಾರಣಕ್ಕೆ ಸಾರ್ವಜನಿಕರ ಕಣ್ಣಿನಿಂದ ದೂರವಿದ್ದಾರೆ. ಅಲ್ಲದೇ ಊಹಾಪೋಹಗಳನ್ನು ತಪ್ಪಿಸುವ ಸಲುವಾಗಿ ಹೀಗೆ ಮಾಡಿದ್ದಾರೆ ಎನ್ನಲಾಗುತ್ತಿದೆ.

Good news for Virushka fans Virat KohliAnushka Sharma expecting 2nd child
Image credit : Anushka Instagram

2021ರಲ್ಲಿ ವಿರಾಟ್‌ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ದಂಪತಿಗೆ ವಮಿಕಾ ಕೊಹ್ಲಿ ಅನ್ನೋ ಮಗಳು ಜನಿಸಿದ್ದಳು. ಮೊದಲ ಮಗುವನ್ನು ಕೂಡ ಜಗತ್ತಿಗೆ ಸ್ವಲ್ಪ ತಡವಾಗಿಯೇ ಅವರು ಘೋಷಣೆ ಮಾಡಿದ್ದರು. ಇದೀಗ ಎರಡನೇ ಮಗುವಿನ ಸುದ್ದಿಯನ್ನು ಕೂಡ ತಡವಾಗಿ ಪರಿಚಯಿಸುವ ಲೆಕ್ಕಾಚಾರದಲ್ಲಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ : ಬೆನ್‌ಸ್ಟೋಕ್ಸ್‌ ನಿವೃತ್ತಿ ವಾಪಾಸ್‌ ಬೆನ್ನಲ್ಲೇ ದಾಖಲೆಯ ಶತಕ : 6,6,6,6,6,6,6,6,6 ಸಿಕ್ಸರ್ 124 ಎಸೆತಕ್ಕೆ 182 ರನ್‌

ವಿರಾಟ್‌ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ದಂಪತಿ ಇತ್ತೀಚೆಗೆ ಮುಂಬೂನ ಹೆರಿಗೆ ಕ್ಲಿನಿಕ್‌ನಲ್ಲಿ ಕಾಣಿಸಿಕೊಂಡಿದ್ದರು ಎಂದು ವರದಿಯಾಗಿತ್ತು. ಆದರೆ ತಮ್ಮ ಯಾವುದೇ ಪೋಟೋಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳದಂತೆ ಅವರು ಮನವಿಯನ್ನು ಮಾಡಿಕೊಂಡಿದ್ದರು. ಶೀಘ್ರದಲ್ಲಿಯೇ ತಾವೇ ಸುದ್ದಿಯನ್ನು ಹಂಚಿಕೊಳ್ಳುವುದಾಗಿ ಕೇಳಿಕೊಂಡಿದ್ದರು ಎನ್ನಲಾಗುತ್ತಿದೆ.

Good news for Virushka fans Virat KohliAnushka Sharma expecting 2nd child
Image credit : Anushka Instagram

ಇನ್ನು ವಿರಾಟ್‌ ಕೊಹ್ಲಿ ಅವರ ಮೊದಲ ಮಗಳು ವಮಿಕಾ ಜನಿಸಿದಾಗಲೂ ಕೂಡ ಮಗಳ ಬಗೆಗಿನ ಗೌಪ್ಯತೆಯನ್ನು ಕಾಪಾಡಿಕೊಂಡಿದ್ದರು. ಆಕೆಯ ಪೋಟೀಗಳನ್ನು ಪೋಸ್ಟ್‌ ಮಾಡದಂತೆ ಮಾಧ್ಯಮದವರಲ್ಲಿ ದಂಪತಿ ಮನವಿ ಮಾಡಿಕೊಂಡಿದ್ದರು. ಮಗಳು ಅವಳನ್ನು ಅರ್ಥ ಮಾಡಿಕೊಳ್ಳುವವರಿಗೆ ಸಾಮಾಜಿಕ ಮಾಧ್ಯಮದಲ್ಲಿ ಆಕೆ ಪೋಟೋ ಹಂಚಿಕೊಳ್ಳದಂತೆ ನಿರ್ಧಾರ ಮಾಡಿಕೊಂಡಿದ್ದಾರೆ.

ಈ ಹಿಂದೆ ಅನುಷ್ಕಾ ಶರ್ಮಾ ಗ್ರಾಜಿಯಾ ಇಂಡಿಯಾಗೆ ನೀಡಿದ ಸಂದರ್ಶನವೊಂದರಲ್ಲಿ ತನ್ನು ತಾಯ್ತನದ ಬಗ್ಗೆ ಸಂಭ್ರಮವನ್ನು ಹಂಚಿಕೊಂಡಿದ್ದರು. ನನ್ನನ್ನು ಆಂತರಿಕವಾಗಿ ಹೆಚ್ಚು ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ಎಲ್ಲರಿಗಿಂತಲೂ ಮಗುವಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಿದ್ದೇನೆ ಎಂದಿದ್ದಾರೆ.

ಅನುಷ್ಕಾ ಶರ್ಮಾ ಅವರ ಮುಂದಿನ ಸಿನಿಮಾ ಚಕ್ದಾ ಎಕ್ಸ್‌ಪ್ರೆಸ್‌ ಇತ್ತೀಚಿಗೆ ಚಿತ್ರೀಕರಣ ಪೂರ್ಣಗೊಂಡಿತ್ತು. ಟೀಂ ಇಂಡಿಯಾದ ಮಾಜಿ ಆಟಗಾರ್ತಿ ಜೂಲನ್‌ ಗೋಸ್ವಾಮಿ ಅವರ ಪಾತ್ರವನ್ನು ನಿರ್ವಹಣೆ ಮಾಡಿದ್ದಾರೆ. ಇನ್ನು ವಿರಾಟ್‌ ಕೊಹ್ಲಿ ಏಕದಿನ ವಿಶ್ವಕಪ್‌ನಲ್ಲಿ ಪಾಲ್ಗೊಂಡಿದ್ದಾರೆ. ವಿಶ್ವಕಪ್‌ ನ ಮೊದಲ ಪಂದ್ಯದಲ್ಲಿ ಭಾರತ ತಂಡ ಆಸ್ಟ್ರೇಲಿಯಾವನ್ನು ಎದುರಿಸಲಿದೆ.

Good news for Virushka fans Virat KohliAnushka Sharma expecting 2nd child

Comments are closed.