ಮುಂಬೈ: ಭಾರತದಲ್ಲೇ ನಡೆಯಲಿರುವ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ( ICC World Cup 2023) ಆಡಲಿರುವ ಟೀಮ್ ಇಂಡಿಯಾ ಆಟಗಾರರು ಯಾರು? ಮೆಗಾ ವರ್ಲ್ಡ್ ಕಪ್’ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಲಿರುವ ಆ 15 ಮಂದಿ ಆಟಗಾರರು ಯಾರು? ಈ ಪ್ರಶ್ನೆಗೆ ಉತ್ತರ ಸಿಕ್ಕಿದೆ.
ಐಸಿಸಿ ಏಕದಿನ ವಿಶ್ವಕಪ್’ಗಾಗಿ ಬಿಸಿಸಿಐ ಒಟ್ಟು 20 ಮಂದಿ ಆಟಗಾರರ ಹೆಸರನ್ನು ಶಾರ್ಟ್ ಲಿಸ್ಟ್ ಮಾಡಿದೆ. ಮುಂಬೈನಲ್ಲಿ ನಡೆದ ಬಿಸಿಸಿಐ ಸಭೆಯಲ್ಲಿ ಈ ನಿರ್ಧಾರ ಮಾಡಲಾಗಿದೆ. ಸಭೆಯಲ್ಲಿ ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ, ಕಾರ್ಯದರ್ಶಿ ಜಯ್ ಶಾ, ಟೀಮ್ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್, ನಾಯಕ ರೋಹಿತ್ ಶರ್ಮಾ, ನಿರ್ಗಮಿತ ಆಯ್ಕೆ ಸಮಿತಿಯ ಮುಖ್ಯಸ್ಥ ಚೇತನ್ ಶರ್ಮಾ ಮತ್ತು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್ ಭಾಗವಹಿಸಿದ್ದರು. ಈಗ ಶಾರ್ಟ್ ಲಿಸ್ಟ್ ಮಾಡಲಾಗಿರುವ 200 ಮಂದಿ ಆಟಗಾರರನ್ನು ಮುಂದಿನ ವಿಶ್ವಕಪ್ ಟೂರ್ನಿಯವರೆಗೆ ನಡೆಯಲಿರುವ ಏಕದಿನ ಪಂದ್ಯಗಳಲ್ಲಿ ಸರದಿ ಪ್ರಕಾರ ಆಡಿಸಲು ಬಿಸಿಸಿಐ ನಿರ್ಧರಿಸಿದೆ.
“ಈ 20 ಮಂದಿ ಆಟಗಾರರು ಯೋ-ಯೋ ಟೆಸ್ಟ್’ನಲ್ಲಿ ಉತ್ತೀರ್ಣರಾಗುವುದು ಕಡ್ಡಾಯ. ವಿಶ್ವಕಪ್ ಮುಂದಿರುವ ಕಾರಣ ಐಪಿಎಲ್ ಫ್ರಾಂಚೈಸಿಗಳ ಜೊತೆ ಸತತ ಸಂಪರ್ಕದಲ್ಲಿದ್ದು, ಈ ಆಟಗಾರರ ಮೇಲೆ ಹೆಚ್ಚಿನ ಒತ್ತಡ ಬೀಳದಂತೆ ನೋಡಿಕೊಳ್ಳಲು ಬಿಸಿಸಿಐ ನಿರ್ಧರಿಸಿದ್ದು, ಈ ಜವಾಬ್ದಾರಿಯನ್ನು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್ ಅವರಿಗೆ ವಹಿಸಲಾಗಿದೆ. ಐಪಿಎಲ್ ಫ್ರಾಂಚೈಸಿಗಳ ಜೊತೆ NCA ಮುಖ್ಯಸ್ಥರು ಸತತ ಸಂಪರ್ಕದಲ್ಲಿದ್ದು, ಆಟಗಾರರ ಒತ್ತಡ ನಿಭಾಯಿಸುವ ಕಾರ್ಯ ನಿರ್ವಹಿಸಲಿದ್ದಾರೆ” ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
ಐಸಿಸಿ ಏಕದಿನ ವಿಶ್ವಕಪ್ 2023 ಟೂರ್ನಿಗೆ ಶಾರ್ಟ್ ಲಿಸ್ಟ್ ಮಾಡಲಾಗಿರುವ 20 ಮಂದಿ ಸಂಭಾವ್ಯ ಆಟಗಾರರು:
1.ರೋಹಿತ್ ಶರ್ಮಾ, 2.ಇಶಾನ್ ಕಿಶನ್, 3.ವಿರಾಟ್ ಕೊಹ್ಲಿ, 4.ಶ್ರೇಯಸ್ ಅಯ್ಯರ್, 5.ಕೆ.ಎಲ್ ರಾಹುಲ್, 6.ಹಾರ್ದಿಕ್ ಪಾಂಡ್ಯ, 7.ರವೀಂದ್ರ ಜಡೇಜ, 8.ಯುಜ್ವೇಂದ್ರ ಚಹಲ್, 9.ಮೊಹಮ್ಮದ್ ಶಮಿ, 10.ವಾಷಿಂಗ್ಟನ್ ಸುಂದರ್, 11.ಜಸ್ಪ್ರೀತ್ ಬುಮ್ರಾ, 12.ಅಕ್ಷರ್ ಪಟೇಲ್, 13.ಸೂರ್ಯಕುಮಾರ್ ಯಾದವ್, 14.ರಿಷಭ್ ಪಂತ್, 15.ದೀಪಕ್ ಚಹರ್, 16.ಕುಲ್ದೀಪ್ ಯಾದವ್, 17.ಸಂಜು ಸ್ಯಾಮ್ಸನ್, 18.ಶಾರ್ದೂಲ್ ಠಾಕೂರ್, 19.ಉಮ್ರಾನ್ ಮಲಿಕ್, 20.ದೀಪಕ್ ಹೂಡ.
ಇದನ್ನೂ ಓದಿ : Rohit richer than Dhoni in IPL: ಐಪಿಎಲ್‌ನಲ್ಲಿ ರೋಹಿತ್ ಶರ್ಮಾನೇ ಕುಬೇರ, ಧೋನಿ, ಕೊಹ್ಲಿಯನ್ನು ಹಿಂದಿಕ್ಕಿದ ಮುಂಬೈ ಕ್ಯಾಪ್ಟನ್
ಇದನ್ನೂ ಓದಿ : Hardik Pandya meets Amit Shah: ಹೋಮ್ ಮಿನಿಸ್ಟರ್ ಅಮಿತ್ ಶಾ ಭೇಟಿ ಮಾಡಿದ ಹಾರ್ದಿಕ್ ಪಾಂಡ್ಯ, ಕಾರಣವೇನು ಗೊತ್ತಾ?
English News Click here
BCCI shortlists 20 players for ICC World Cup 2023