Age Fraud Detector Software : ವಯಸ್ಸಿನಲ್ಲಿ ಮೋಸ ಮಾಡುವವರಿಗೆ ಬ್ಯಾಡ್ ನ್ಯೂಸ್.. ಬಿಸಿಸಿಐ ಬಳಿಯಿದೆ ಹೊಸ ಅಸ್ತ್ರ !

ಬೆಂಗಳೂರು: (Age Fraud Detector Software ) ಕ್ರಿಕೆಟ್ ಸೇರಿದಂತೆ ಕ್ರೀಡೆಯಲ್ಲಿ ಅಸಲಿ ವಯಸ್ಸನ್ನು ಮುಚ್ಚಿಟ್ಟು, ಕಡಿಮೆ ವಯಸ್ಸಿನ ದಾಖಲೆ ನೀಡಿ ಆಡುವುದು ಸಾಮಾನ್ಯ. ಇಂತಹ ಸಾಕಷ್ಟು ಪ್ರಕರಣಗಳು ವರದಿಯಾಗಿವೆ. 2018ರಲ್ಲಿ ಐಸಿಸಿ ಅಂಡರ್-19 ವಿಶ್ವಕಪ್ ಗೆದ್ದ ತಂಡದ ಸದಸ್ಯ ಮನೋಜ್ ಕಾಲ್ರಾ, ಐಪಿಎಲ್ ಆಟಗಾರ ಅಂಕಿತ್ ಬಾವ್ನೆ 19ರ ವಯೋಮಿತಿಯ ಟೂರ್ನಿಗಳಲ್ಲಿ Age Fraud ನಡೆಸಿ ಸಿಕ್ಕಿ ಬಿದ್ದಿದ್ದಾರೆ. ಇನ್ನು ಮುಂದೆ Age Fraud ನಡೆಸುವುದನ್ನು ಪತ್ತೆ ಹಚ್ಚಲು ಬಿಸಿಸಿಐ ಹೊಸ ತಂತ್ರಕ್ಕೆ ಮುಂದಾಗಿದೆ.

Age Fraud ಪತ್ತೆ ಹಚ್ಚಲೆಂದೇ ವಿಶೇಷ ಸಾಫ್ಟ್’ವೇರ್ ಒಂದನ್ನು ಟ್ರಯಲ್ ಬೇಸಿಸ್’ನಲ್ಲಿ ಬಳಕೆ ಮಾಡಲು ಬಿಸಿಸಿಐ ನಿರ್ಧರಿಸಿದೆ. ಈ ಹೊಸ ಸಾಫ್ಟ್”ವೇರ್’ನ ಹೆಸರು ಬೋನ್ ಎಕ್ಸ್’ಪರ್ಟ್ (BoneXpert). ಇದರ ಬಳಕೆಯಿಂದ Age Fraud ಹತ್ತೆ ಹಚ್ಚುವ ಪ್ರಕ್ರಿಯೆಯಲ್ಲಿ 80%ನಷ್ಟು ಖರ್ಚು ಬಿಸಿಸಿಐಗೆ ಉಳಿತಾಯವಾಗಲಿದೆ.

ಏನಿದು Age Fraud Detector Software ?

ಸದ್ಯ ಬಿಸಿಸಿಐ TW3 ವಿಧಾನದಲ್ಲಿ ಆಟಗಾರರ ವಯಸ್ಸಿನ ಪರೀಕ್ಷೆ ನಡೆಸುತ್ತದೆ. ಎಡಗೈ ಮತ್ತು ಎಡ ಮಣಿಕಟ್ಟಿನ ಎಕ್ಸ್ ರೇ ತೆಗೆದು ಪರೀಕ್ಷೆ ನಡೆಸಲಾಗುತ್ತದೆ. ಇದರ ಫಲಿತಾಂಶ ಸಿಗಲು 3-4 ದಿನ ಕಾಯಬೇಕಾಗುತ್ತದೆ. ಈ ಪ್ರತೀ ಪರೀಕ್ಷೆಗೆ 2,400 ರೂ. ವೆಚ್ಚ ತಗುಲುತ್ತಿದ್ದು, ಹೊಸ ಸಾಫ್ಟ್”ವೇರ್ ಬಳಕೆಯಿಂದ ಬೋನ್ ಟೆಸ್ಟ್ ವೆಚ್ಚ 288 ರೂ.ಗೆ ಇಳಿಕೆಯಾಗಲಿದೆ. ಹೊಸ ವಿಧಾನದ ಅಳವಡಿಕೆಯಿಂದ ಕ್ಷಣ ಮಾತ್ರದಲ್ಲಿ ಫಲಿತಾಂಶವೂ ಸಿಗಲಿದೆ.

ವಯಸ್ಸನ್ನುಮರೆ ಮಾಚಿ ಮೋಸ ಮಾಡುವ ಆಟಗಾರ/ಆಟಗಾರ್ತಿಯರ ವಿರುದ್ಧ ಬಿಸಿಸಿಐ ಕಠಿಣ ಕ್ರಮ ಜರುಗಿಸುತ್ತಿದ್ದು, ಎರಡು ವರ್ಷಗಳ ನಿಷೇಧ ಹೇರಲಾಗುತ್ತಿದೆ. ಕಿರಿಯರ ವಯೋಮಿತಿಯ ಟೂರ್ನಿಗಳಲ್ಲಿ ಇದು ಕಂಡು ಬರುತ್ತಿದ್ದು, ಈಗಾಗಲೇ ಸಾಕಷ್ಟು ಕ್ರಿಕೆಟಿಗರು ನಿಷೇಧಕ್ಕೊಳಗಾಗಿದ್ದಾರೆ. 2018ರ ಐಸಿಸಿ ಅಂಡರ್-19 ವಿಶ್ವಕಪ್ ಹೀರೋ ಮನೋಜ್ ಕಾಲ್ರಾ ಈ ಪಟ್ಟಿಯಲ್ಲಿ ಪ್ರಮುಖರು.

ಮೂಲತಃ ದೆಹಲಿಯವರಾದ ಮನೋಜ್ ಕಾಲ್ರಾ 2018ರ ಕಿರಿಯರ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಅಮೋಘ ಶತಕ ಬಾರಿಸಿ ಭಾರತಕ್ಕೆ ವಿಶ್ವಕಪ್ ಗೆದ್ದು ಕೊಟ್ಟಿದ್ದರು. ಆದರೆ ನಂತರ ಮನೋಜ್ ಕಾಲ್ರಾ Age Fraud ನಡೆಸಿದ ವಿಚಾರ ಬೆಳಕಿಗೆ ಬಂದಿತ್ತು.

ಇದನ್ನೂ ಓದಿ : Krunal Pandya baby boy : ಹಾರ್ದಿಕ್ ಪಾಂಡ್ಯ ಸಹೋದರ ಕೃಣಾಲ್ ಪಾಂಡ್ಯಗೆ ಗಂಡು ಮಗು

ಇದನ್ನೂ ಓದಿ : Hardik Pandya Retirement : ಏಕದಿನ ಕ್ರಿಕೆಟ್‌ನಿಂದ ಆಲ್’ರೌಂಡರ್ ಹಾರ್ದಿಕ್ ಪಾಂಡ್ಯ ನಿವೃತ್ತಿ !

BCCI to Introduce Age Fraud Detector Software

Comments are closed.