ಲಂಡನ್ : ಬಾಹುಬಲಿ ಸಿನಿಮಾದಲ್ಲಿ ಅಮರೇಂದ್ರ ಬಾಹುಬಲಿಯ ಬೆನ್ನಿಗೆ ಖಡ್ಗದಿಂದ ಇರಿದು ಕೊಂದವನು ಕಟ್ಟಪ್ಪ. ಮಹಾರಾಜ ಬಲ್ಲಾಳದೇವನ ರಾಜಾಜ್ಞೆಯಂತೆ ಬಾಹುಬಲಿಯನ್ನು ಬೆನ್ನ ಹಿಂದೆ ನಿಂತು ಇರಿದು ಕಟ್ಟಪ್ಪ ಕೊಂದು ಹಾಕಿದ್ದು ಸಿನಿಮಾ ಕಥೆ. ಇಂಗ್ಲೆಂಡ್ ತಂಡದಲ್ಲಿ ಅಂಥದ್ದೇ ಒಬ್ಬ ಕಟ್ಟಪ್ಪನಿದ್ದಾನೆ. ಆತ ನ್ಯೂಜಿಲೆಂಡ್’ನವನು. ಆದ್ರೆ ಈಗ ಇಂಗ್ಲೆಂಡ್ ತಂಡ ಸೇರಿ ನ್ಯೂಜಿಲೆಂಡ್ ತಂಡವನ್ನೇ ಸೋಲಿಸಿ ಬಿಟ್ಟಿದ್ದಾನೆ. ಅದೂ ಎರಡೆರಡು ಬಾರಿ. ನಾವು ಹೇಳ್ತಾ ಇರೋದು ಇಂಗ್ಲೆಂಡ್ ತಂಡದ ಕೋಚ್ ಬ್ರೆಂಡನ್ ಮೆಕ್ಕಲಂ (Brendon Mccullum strategy) ಬಗ್ಗೆ.
ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಗೂ (England Vs New Zeeland Test series) ಮುನ್ನ ಇಂಗ್ಲೆಂಡ್ ತಂಡದ ಕೋಚಿಂಗ್ ಜವಾಬ್ದಾರಿ ವಹಿಸಿಕೊಂಡಿದ್ದ ಮೆಕ್ಕಲಂ, ತಮ್ಮ ತವರು ತಂಡವನ್ನು ಮಕಾಡೆ ಮಲಗಿಸಿ ಬಿಟ್ಟಿದ್ದಾರೆ. ಮೊದಲ ಎರಡೂ ಟೆಸ್ಟ್ ಪಂದ್ಯಗಳಲ್ಲಿ ನ್ಯೂಜಿಲೆಂಡ್ ವಿರುದ್ಧ ಇಂಗ್ಲೆಂಡ್ ಭರ್ಜರಿ ಗೆಲುವು ದಾಖಲಿಸಿದೆ. ಕ್ರಿಕೆಟ್ ಕಾಶಿ ಲಾರ್ಡ್ಸ್”ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯವನ್ನು 5 ವಿಕೆಟ್”ಗಳಿಂದ ಗೆದ್ದಿದ್ದ ಇಂಗ್ಲೆಂಡ್, ನಾಟಿಂಗ್’ಹ್ಯಾಮ್’ನಲ್ಲಿ ಮಂಗಳವಾರ ಅಂತ್ಯಗೊಂಡ 2ನೇ ಟೆಸ್ಟ್ ಪಂದ್ಯದಲ್ಲೂ 5 ವಿಕೆಟ್”ಗಳ ಭರ್ಜರಿ ಗೆಲುವು ದಾಖಲಿಸಿ 3 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ.
2ನೇ ಟೆಸ್ಟ್ ಪಂದ್ಯವನ್ನು ಇಂಗ್ಲೆಂಡ್ ಗೆದ್ದದ್ದೇ ರೋಚಕ. ಪಂದ್ಯದ ಕೊನೆಯ ದಿನ 72 ಓವರ್’ಗಳಲ್ಲಿ 299 ರನ್”ಗಳ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ಒಂದು ಹಂತದಲ್ಲಿ 93 ರನ್ನಿಗೆ 4 ವಿಕೆಟ್ ಕಳೆದುಕೊಂಡು ಸೋಲಿನ ಸುಳಿಗೆ ಸಿಲುಕಿತ್ತು. ಆದರೆ 5 ಮತ್ತು 6ನೇ ಕ್ರಮಾಂಕದಲ್ಲಿ ಆಡಲಿಳಿದ ಜಾನಿ ಬೈರ್’ಸ್ಟೋ (Jonny Bairstow) ಮತ್ತು ನಾಯಕ ಬೆನ್ ಸ್ಟೋಕ್ಸ್ (Ben Stokes) ಪಂದ್ಯದ ಚಿತ್ರಣವವನ್ನೇ ಬದಲಿಸಿಬಿಟ್ಟರು. 5ನೇ ವಿಕೆಟ್”ಗೆ ವಿಧ್ವಂಸಕ ಆಟವಾಡಿದ ಈ ಜೋಡಿ ಕೇವಲ 121 ಎಸೆತಗಳಲ್ಲಿ 179 ರನ್”ಗಳ ಜೊತೆಯಾಟವಾಡಿ ಇಂಗ್ಲೆಂಡ್”ಗೆ ರೋಚಕ ಗೆಲುವು ತಂದುಕೊಟ್ಟರು.
ಸಿಡಿಲಬ್ಬರದ ಶತಕ ಬಾರಿಸಿದ ಬೈರ್”ಸ್ಟೋ 92 ಎಸೆತಗಳಲ್ಲಿ 14 ಬೌಂಡರಿ ಮತ್ತು 7 ಸಿಕ್ಸರ್”ಗಳ ನೆರವಿನಿಂದ 136 ರನ್ ಸಿಡಿಸಿದ್ರೆ, ನಾಯಕ ಬೆನ್ ಸ್ಟೋಕ್ಸ್ 70 ಎಸೆತಗಳಲ್ಲಿ 10 ಬೌಂಡರಿ ಮತ್ತು 4 ಸಿಕ್ಸರ್ಸ್ ನೆರವಿನಿಂದ ಅಜೇಯ 75 ರನ್ ಬಾರಿಸಿ ಕೇವಲ 50 ಓವರ್’ಗಳಲ್ಲೇ ತಂಡವನ್ನು ಗೆಲುವಿನ ದಡ ಸೇರಿಸಿದರು.
ಇದನ್ನೂ ಓದಿ : IPL Media Rights Auction 2022ನಲ್ಲಿ ಮೆಗಾ ಟ್ವಿಸ್ಟ್ : 23,575 ಕೋಟಿಗೆ ಸ್ಟಾರ್ ಸ್ಪೋರ್ಟ್ಸ್ ಪಾಲಾಯ್ತು ಟಿವಿ ರೈಟ್ಸ್
ಇದನ್ನೂ ಓದಿ : Successor of Rohit Sharma : ಈ ಹುಡುಗನಿಗೆ ಸಪೋರ್ಟ್ ಮಾಡಿದ್ರೆ ಮತ್ತೊಬ್ಬ ರೋಹಿತ್ ಶರ್ಮಾ ಆಗ್ತಾನೆ
Brendon Mccullum strategy England beat New Zeeland in 2nd Test