Chris Gayle Appu Boss : ಜಗತ್ತಿಗೆ ಇಬ್ಬರೇ ಬಾಸ್, ಒಬ್ಬ ಯೂನಿವರ್ಸ್ ಬಾಸ್, ಮತ್ತೊಬ್ಬ “ಅಪ್ಪು” ಬಾಸ್ ಅಂದ ಕ್ರಿಸ್ ಗೇಲ್

ಬೆಂಗಳೂರು : ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ಸ್ಟಾರ್ ಆಟಗಾರ, ಕೆರಿಬಿಯನ್ ದೈತ್ಯ ಕ್ರಿಸ್ ಗೇಲ್ (Chris Gayle) ಐಪಿಎಲ್’ನ ಬಿಗ್ಗೆಸ್ಟ್ ಸೂಪರ್ ಸ್ಟಾರ್. ರಾಯಲ್ ಚಾಲೆಂಜರ್ಸ್ ಪರ 8 ವರ್ಷ ಆಡಿದ್ದ ಕ್ರಿಸ್ ಗೇಲ್ ಕರ್ನಾಟಕದಲ್ಲಿ ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಇತ್ತೀಚೆಗೆ ಆರ್’ಸಿಬಿ (Royal Challengers Bangalore – RCB) ಅನ್ ಬಾಕ್ಸ್ ಕಾರ್ಯಕ್ರಮಕ್ಕೆ ಬೆಂಗಳೂರಿಗೆ ಬಂದಿದ್ದ ಕ್ರಿಸ್ ಗೇಲ್, ಜಗತ್ತಿನ ಇಬ್ಬರು ಬಾಸ್’ಗಳ (Chris Gayle Appu Boss) ಬಗ್ಗೆ ಮಾತನಾಡಿದ್ದಾರೆ. ಆ ಇಬ್ಬರು ಬಾಸ್’ಗಳಲ್ಲಿ ಒಬ್ಬರು “ಯೂನಿವರ್ಸ್ ಬಾಸ್”. ಅದು ಸ್ವತಃ ಕ್ರಿಸ್ ಗೇಲ್.

ಕ್ರಿಸ್ ಗೇಲ್ ಅವರನ್ನು ಕ್ರಿಕೆಟ್ ಜಗತ್ತಿನಲ್ಲಿ ಯೂನಿವರ್ಸ್ ಬಾಸ್ ಎಂದೇ ಕರೆಯಲಾಗುತ್ತದೆ. ಹೀಗಾಗಿ ಇಬ್ಬರು ಬಾಸ್’ಗಳಲ್ಲಿ ಒಬ್ಬ ಬಾಸ್ ತಾನೇ (ಯೂನಿವರ್ಸ್ ಬಾಸ್) ಅಂದಿದ್ದಾರೆ. ಕ್ರಿಸ್ ಗೇಲ್ ಹೇಳಿರುವ ಮತ್ತೊಬ್ಬ ಬಾಸ್ ಯಾರು ಗೊತ್ತಾ..? ಅಪ್ಪು ಬಾಸ್ (Appu Boss). ಅಂದ್ರೆ ಪವರ್ ಸ್ಟಾರ್ ಪುನೀತ್ ರಾಜ್’ಕುಮಾರ್ (Puneeth Rajkumar). ಮಿಸ್ಟರ್ ನ್ಯಾಗ್ಸ್ (ಡ್ಯಾನಿಷ್ ಸೇಠ್) ನಡೆಸಿಕೊಡುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯ ವಿಶೇಷ ಕಾರ್ಯಕ್ರಮದಲ್ಲಿ ಕ್ರಿಸ್ ಗೇಲ್ ಈ ಮಾತು ಹೇಳಿದ್ದಾರೆ.

ಪವರ್ ಸ್ಟಾರ್ ಪುನೀತ್ ರಾಜ್’ಕುಮಾರ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮೊದಲ ಬ್ರ್ಯಾಂಡ್ ಅಂಬಾಸಿಡರ್. 2008ರಲ್ಲಿ ಐಪಿಎಲ್ ಆರಂಭವಾದಾಗ ಕನ್ನಡತಿ, ಬಾಲಿವುಡ್ ತಾರೆ ದೀಪಿಕಾ ಪಡುಕೋಣೆ ಜೊತೆ ಪುನೀತ್ ರಾಜ್’ಕುಮಾರ್ ಆರ್’ಸಿಬಿ ತಂಡದ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದರು. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅತೀ ದೊಡ್ಡ ಅಭಿಮಾನಿಯಾಗಿದ್ದ ಪುನೀತ್ ರಾಜ್’ಕುಮಾರ್ ಸಾಕಷ್ಟು ಬಾರಿ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಹೋಗಿ ಆರ್’ಸಿಬಿ ತಂಡವನ್ನು ಬೆಂಬಲಿಸಿದ್ದರು.

ಇದನ್ನೂ ಓದಿ : IPL 2023 : ಆರ್‌ಸಿಬಿಗೆ ಡೆಲ್ಲಿ ಕ್ಯಾಪಿಟಲ್ಸ್, ಲಕ್ನೋಗೆ ಪಂಜಾಬ್‌‌ ಕಿಂಗ್ಸ್ ಸವಾಲು

ಇದನ್ನೂ ಓದಿ : ICC WTC final : ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್‌ನಲ್ಲಿ ಟೀಮ್ ಇಂಡಿಯಾಗೆ ಅಚ್ಚರಿಯ ಆಟಗಾರನ ಎಂಟ್ರಿ..!

ಕನ್ನಡಿಗರ ಆರಾಧ್ಯದೈವ ಪುನೀತ್ ರಾಜ್’ಕುಮಾರ್ 2021ರ ಅಕ್ಟೋಬರ್ 29ರಂದು ಹೃದಯಾಘಾತದಿಂದ ಮರಣ ಹೊಂದಿದ್ದರು. ಪುನೀತ್ ದೈಹಿಕವಾಗಿ ಇಲ್ಲದೇ ಇದ್ರೂ ಮಾನಸಿಕವಾಗಿ ಇನ್ನೂ ರಾಯಲ್ ಚಾಲೆಂಜರ್ಸ್ ತಂಡದೊಂದಿಗೆ ಇದ್ದಾರೆ ಎಂಬುದಕ್ಕೆ ಪವರ್ ಸ್ಟಾರ್ ಬಗ್ಗೆ ಯೂನಿವರ್ಸ್ ಬಾಸ್ ಕ್ರಿಸ್ ಗೇಲ್ ಆಡಿರುವ ಮಾತೇ ಸಾಕ್ಷಿ.

Chris Gayle Appu Boss : There are only two bosses in the world, one is the universe boss and the other is “appu” boss, says Chris Gayle.

Comments are closed.