ಮಂಗಳವಾರ, ಏಪ್ರಿಲ್ 29, 2025
HomeSportsCricketDipika Pallikal : ಕಂಚಿನ ಪದಕ ಗೆದ್ದ ದಿನೇಶ್ ಕಾರ್ತಿಕ್ ಪತ್ನಿ, ಅವಳಿ ಮಕ್ಕಳ ತಾಯಿ...

Dipika Pallikal : ಕಂಚಿನ ಪದಕ ಗೆದ್ದ ದಿನೇಶ್ ಕಾರ್ತಿಕ್ ಪತ್ನಿ, ಅವಳಿ ಮಕ್ಕಳ ತಾಯಿ ದೀಪಿಕಾ

- Advertisement -

ಬರ್ಮಿಂಗ್’ಹ್ಯಾಮ್ : (Dipika Pallikal)ಕ್ರೀಡೆಯಲ್ಲಿ ಒಬ್ಬೊಬ್ಬರದ್ದು ಒಂದೊಂದು ಸಾಹಸಗಾಥೆ, ಯಶೋಗಾಥೆ. ಮಕ್ಕಳಾದ ಮೇಲೆ ಕ್ರೀಡೆಯಲ್ಲಿ ದೊಡ್ಡ ಸಾಧನೆ ಮಾಡಿದವರಿಗೇನೂ ಕಡಿಮೆಯಿಲ್ಲ. ಈಗ ಆ ಸಾಲಿಗೆ ಸೇರಿದ್ದಾರೆ ದೇಶದ ಖ್ಯಾತ ಸ್ಕ್ಯಾಷ್ ತಾರೆ ದೀಪಿಕಾ ಪಳ್ಳಿಕಲ್ (Dipika Pallikal). ಕಾಮನ್ವೆಲ್ತ್ ಗೇಮ್ಸ್ ಕ್ರೀಡಾಕೂಟದ ಸ್ಕ್ವಾಷ್ ಮಿಕ್ಸೆಡ್ ಡಬಲ್ಸ್ ವಿಭಾಗದಲ್ಲಿ ದೀಪಿಕಾ ಪಳ್ಳಿಕಲ್ ಕಂಚಿನ ಪದಕ ಗೆದ್ದಿದ್ದಾರೆ. ಸೌರವ್ ಘೋಷಾಲ್ ಅವರೊಂದಿಗೆ ಆಡಿದ ಪಳ್ಳಿಕಲ್ ಕಂಚಿನ ಪದಕ್ಕಾಗಿ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾದ ಡೊನ್ನಾ ಲೊಬನ್ ಮತ್ತು ಕ್ಯಾಮರಾನ್ ಪಿಲ್ಲೀ ಜೋಡಿಯನ್ನು 11-8, 11-4ರ ನೇರ ಸೆಟ್’ಗಳಲ್ಲಿ ಸೋಲಿಸಿ 3ನೇ ಸ್ಥಾನ ಪಡೆಯಿತು.

Commonwealth Games Dipika Pallikal is wife of bronze medalist Dinesh Karthik and mother of twins

ಭಾರತ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್’ಮನ್ ದಿನೇಶ್ ಕಾರ್ತಿಕ್ (Dinesh Karthik) ಅವರನ್ನು 2015ರಲ್ಲಿ ಮದುವೆಯಾಗಿದ್ದ 30 ವರ್ಷದ ದೀಪಿಕಾ ಪಳ್ಳಿಕಲ್, 2021ರ ಅಕ್ಟೋಬರ್ 18ರಂದು ದೀಪಿಕಾ ಪಳ್ಳಿಕಲ್ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದರು. ದಿನೇಶ್ ಕಾರ್ತಿಕ್ –ದೀಪಿಕಾ ದಂಪತಿ ತಮ್ಮ ಅವಳಿ ಮಕ್ಕಳಿಗೆ ಕಬೀರ್ ಮತ್ತು ಝಿಯಾನ್ ಎಂದು ಹೆಸರಿಟ್ಟಿದ್ದಾರೆ. ಮಕ್ಕಳು ಜನಿಸಿದ ಆರೇ ತಿಂಗಳಲ್ಲಿ ವಿಶ್ವ ಸ್ಕ್ವಾಷ್ ಡಬಲ್ಸ್ ಚಾಂಪಿಯನ್’ಷಿಪ್’ನಲ್ಲಿ ದೀಪಿಕಾ ಎರಡು ಚಿನ್ನದ ಪದಕಗಳನ್ನು ಗೆದ್ದಿದ್ದರು.

ದೀಪಿಕಾ ಪಳ್ಳಿಕಲ್ ಕ್ರಿಕೆಟಿಗ ದಿನೇಶ್ ಕಾರ್ತಿಕ್ ಅವರಿಗೆ 2ನೇ ಹೆಂಡತಿ. 2007ರಲ್ಲಿ ನಿಖಿತಾ ಎಂಬವರನ್ನು ಮದುವೆಯಾಗಿದ್ದ ದಿನೇಶ್ ಕಾರ್ತಿಕ್’ಗೆ ಪತ್ನಿ ಹಾಗೂ ಆತ್ಮೀಯ ಸ್ನೇಹಿತ ನಾಗಿದ್ದ ಕ್ರಿಕೆಟಿಗ ಮುರಳಿ ವಿಜಯ್ ನಂಬಿಕೆ ದ್ರೋಹ ಮಾಡಿದ್ದರು. ದಿನೇಶ್ ಕಾರ್ತಿಕ್ ಪತ್ನಿ ನಿಖಿತಾ ಜೊತೆ ಮುರಳಿ ವಿಜಯ್ ಅನೈತಿಕ ಸಂಬಂಧವಿಟ್ಟುಕೊಂಡ ವಿಚಾರ ತಡವಾಗಿ ಕಾರ್ತಿಕ್”ಗೆ ಗೊತ್ತಾಗಿತ್ತು. ನಂತರ ಪತ್ನಿಗೆ ಡೈವೋರ್ಸ್ ಕೊಟ್ಟಿದ್ದ ಡಿಕೆ ಮಾನಸಿಕ ಖಿನ್ನತೆಗೆ ಜಾರಿದ್ದರು. ಅಂತಹ ಪರಿಸ್ಥಿತಿಯಲ್ಲಿ ದಿನೇಶ್ ಕಾರ್ತಿಕ್”ಗೆ ಧೈರ್ಯ ತುಂಬಿದ್ದು ಇದೇ ದೀಪಿಕಾ ಪಳ್ಳಿಕಲ್. ಜಿಮ್’ನಲ್ಲಿ ಪಳ್ಳಿಕಲ್ ಅವರನ್ನು ಮೊದಲ ಬಾರಿ ಭೇಟಿಯಾಗಿದ್ದ ಕಾರ್ತಿಕ್, ನಂತರ ಅವರನ್ನೇ ಪ್ರೀತಿಸಿ 2015ರಲ್ಲಿ ಮದುವೆಯಾಗಿದ್ದರು.

ಇದನ್ನೂ ಓದಿ : ರೋಹಿತ್ ಶರ್ಮಾ ಸಿಂಹಾಸನದ ಮೇಲೆ ಮತ್ತೊಬ್ಬನ ಕಣ್ಣು; ಟೀಮ್ ಇಂಡಿಯಾ ನಾಯಕನಾಗ್ತಾನಾ ಈ ಆಟಗಾರ

ಇದನ್ನೂ ಓದಿ : Commonwealth Games Cricket : ಬೆಳ್ಳಿ ಪದಕ ಗೆದ್ದ ಭಾರತ ತಂಡದ ಆಟಗಾರ್ತಿ ರಾಜೇಶ್ವರಿಗೆ ರಾಜ್ಯ ಸರ್ಕಾರದಿಂದ ₹ 15 ಲಕ್ಷ ಪುರಸ್ಕಾರ

Commonwealth Games Dipika Pallikal is wife of bronze medalist Dinesh Karthik and mother of twins

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular