Asia Cup Rahul Comeback: ರಾಹುಲ್‌ಗೆ ಘಾಟಿ ಸುಬ್ರಮಣ್ಯನ ಅನುಗ್ರಹ: ಏಷ್ಯಾ ಕಪ್‌ನಲ್ಲಿ ಆಡಲಿರುವ ಟೀಮ್ ಇಂಡಿಯಾದಲ್ಲಿ ಕನ್ನಡಿಗನಿಗೆ ಸ್ಥಾನ

ಬೆಂಗಳೂರು: (India Squad For Asia Cup ಏಷ್ಯಾ ಕಪ್ ಟಿ20 ಟೂರ್ನಿಗೆ ಟೀಮ್ ಇಂಡಿಯಾವನ್ನು ಪ್ರಕಟಿಸಲಾಗಿದ್ದು, ಕರ್ನಾಟಕದ ಸ್ಟಾರ್ ಬ್ಯಾಟರ್ ಕೆ.ಎಲ್ ರಾಹುಲ್ ತಂಡಕ್ಕೆ ಮರಳಿದ್ದಾರೆ. ರಾಹುಲ್ ಜೊತೆ ಮಾಜಿ ನಾಯಕ ವಿರಾಟ್ ಕೊಹ್ಲಿ ಕೂಡ ಟೀಮ್ ಇಂಡಿಯಾಗೆ ವಾಪಸ್ಸಾಗಿದ್ದು, ಏಷ್ಯಾ ಕಪ್ ಟೂರ್ನಿಯಲ್ಲಿ ಆಡಲಿದ್ದಾರೆ. ಸ್ಪೋರ್ಟ್ಸ್ ಹರ್ನಿಯಾ ಮತ್ತು ಕೋವಿಡ್-19ನಿಂದ ಸಂಪೂರ್ಣವಾಗಿ ಚೇತರಿಸಿಕೊಂಡು ಫಿಟ್ ಆಗಿರುವ ರಾಹುಲ್ ಏಷ್ಯಾ ಕಪ್ ಮೂಲಕ ಭಾರತ ತಂಡಕ್ಕೆ ಕಂಬ್ಯಾಕ್ ಮಾಡಲಿದ್ದಾರೆ. ಭಾನುವಾರವಷ್ಟೇ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ಘಾಟಿ ಸುಬ್ರಮಣ್ಯ ದೇವಾಲಯಕ್ಕೆ ಭೇಟಿ ನೀಡಿದ್ದ ರಾಹುಲ್ ವಿಶೇಷ ಪೂಜೆ ಸಲ್ಲಿಸಿದ್ದರು.

ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಗೆ ಆಯ್ಕೆ ಮಾಡಲಾಗಿದ್ದ ಭಾರತ ತಂಡದಲ್ಲಿ ರಾಹುಲ್ ಸ್ಥಾನ ಪಡೆದಿದ್ದರು. ಸ್ಪೋರ್ಟ್ಸ್ ಹರ್ನಿಯಾ (Sports Hernia) ಸಮಸ್ಯೆಗೆ ಜರ್ಮನಿಯಲ್ಲಿ ಶಸ್ತ್ರಚಿಕಿತ್ಸೆ ಪಡೆದು ಬಂದಿದ್ದ ರಾಹುಲ್, ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಖಾಡೆಮಿಯಲ್ಲಿ ಅಭ್ಯಾಸವನ್ನೂ ಆರಂಭಿಸಿದ್ದರು. ಇನ್ನೇನು ವಿಂಡೀಸ್ ಪ್ರವಾಸಕ್ಕೆ ರೆಡಿ ಎನ್ನುವಷ್ಟರಲ್ಲಿ ರಾಹುಲ್ ಅವರಿಗೆ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿತ್ತು. ಹೀಗಾಗಿ ವೆಸ್ಟ್ ಇಂಡೀಸ್ ಟಿ20 ಸರಣಿ ರಾಹುಲ್ ಅಲಭ್ಯರಾಗಿದ್ದರು.

ಅದಕ್ಕೂ ಮೊದಲು ಕಳೆದ ದಕ್ಷಿಣ ಆಫ್ರಿಕಾ ವಿರುದ್ಧದ ತವರು ಟಿ20 ಸರಣಿಗೆ ನಾಯಕನಾಗಿ ಆಯ್ಕೆಯಾಗಿದ್ದ ರಾಹುಲ್ ಅವರಿಗೆ ಅಲ್ಲೂ ಅದೃಷ್ಟ ಕೈ ಕೊಟ್ಟಿತ್ತು. ಸರಣಿ ಆರಂಭಕ್ಕೆ ಮುನ್ನಾ ದಿನ ತೊಡೆಸಂಧು (Groin Injury) ಗಾಯಕ್ಕೊಳಗಾಗಿ ಇಡೀ ಸರಣಿಯಿಂದಲೇ ಹೊರ ಬಿದ್ದಿದ್ದರು. ನಂತರ ಇಂಗ್ಲೆಂಡ್ ಪ್ರವಾಸಕ್ಕೂ ರಾಹುಲ್ ಅಲಭ್ಯರಾಗಿದ್ದರು. ಇದೀಗ ಏಷ್ಯಾ ಕಪ್ ಟೂರ್ನಿಯೊಂದಿಗೆ ಭಾರತ ತಂಡಕ್ಕೆ ರಾಹುಲ್ ಪುನರಾಗಮನ ಮಾಡಿದ್ದಾರೆ.

ಏಷ್ಯಾ ಕಪ್ ಟಿ20 ಟೂರ್ನಿ ಆಗಸ್ಟ್ 27ರಂದು ಆರಂಭವಾಗಲಿದ್ದು, ಆಗಸ್ಟ್ 28ರಂದು ದುಬೈನಲ್ಲಿ ನಡೆಯಲಿರುವ ತನ್ನ ಮೊದಲ ಪಂದ್ಯದಲ್ಲಿ ಭಾರತ ತಂಡ, ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು ಎದುರಿಸಲಿದೆ.

ಏಷ್ಯಾ ಕಪ್ ಟೂರ್ನಿಗೆ ಭಾರತ ತಂಡ
ರೋಹಿತ್ ಶರ್ಮಾ (ನಾಯಕ), ಕೆ.ಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್, ರವೀಂದ್ರ ಜಡೇಜ, ಭುವನೇಶ್ವರ್ ಕುಮಾರ್, ಆರ್.ಅಶ್ವಿನ್, ಯುಜ್ವೇಂದ್ರ ಚಹಲ್, ಅರ್ಷದೀಪ್ ಸಿಂಗ್, ರಿಷಭ್ ಪಂತ್, ದೀಪಕ್ ಹೂಡ, ರವಿ ಬಿಷ್ಣೋಯ್, ಆವೇಶ್ ಖಾನ್.

ಏಷ್ಯಾಕಪ್ ಟಿ20 (Asia Cup 2022) ಟೂರ್ನಿಯ ವೇಳಾಪಟ್ಟಿ
Group A
ಭಾರತ Vs ಪಾಕಿಸ್ತಾನ: 28 ಆಗಸ್ಟ್, ದುಬೈ
ಭಾರತ Vs ಕ್ವಾಲಿಫೈಯರ್ ಟೀಮ್: 31 ಆಗಸ್ಟ್, ದುಬೈ
ಪಾಕಿಸ್ತಾನ Vs ಕ್ವಾಲಿಫೈಯರ್ ಟೀಮ್: 02 ಸೆಪ್ಟೆಂಬರ್, ಶಾರ್ಜಾ

Group B
ಶ್ರೀಲಂಕಾ Vs ಅಫ್ಘಾನಿಸ್ತಾನ: 27 ಆಗಸ್ಟ್, ದುಬೈ
ಬಾಂಗ್ಲಾದೇಶ Vs ಅಫ್ಘಾನಿಸ್ತಾನ: 30 ಆಗಸ್ಟ್, ಶಾರ್ಜಾ
ಶ್ರೀಲಂಕಾ Vs ಬಾಂಗ್ಲಾದೇಶ: 01 ಸೆಪ್ಟೆಂಬರ್, ದುಬೈ

ಇದನ್ನೂ ಓದಿ : Dipika Pallikal : ಕಂಚಿನ ಪದಕ ಗೆದ್ದ ದಿನೇಶ್ ಕಾರ್ತಿಕ್ ಪತ್ನಿ, ಅವಳಿ ಮಕ್ಕಳ ತಾಯಿ ದೀಪಿಕಾ

ಇದನ್ನೂ ಓದಿ : ರೋಹಿತ್ ಶರ್ಮಾ ಸಿಂಹಾಸನದ ಮೇಲೆ ಮತ್ತೊಬ್ಬನ ಕಣ್ಣು; ಟೀಮ್ ಇಂಡಿಯಾ ನಾಯಕನಾಗ್ತಾನಾ ಈ ಆಟಗಾರ

India Squad For Asia Cup Rahul Comeback Jasprit Bumrah Out Rohit Sharma to Lead Team

Comments are closed.